ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾದ ಪತ್ರವೊಂದು ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಸವರಾಜ ಹೊರಟ್ಟಿ ಅವರ ಕಡೆಯಿಂದ ಹೊಸ ಮಾಹಿತಿ ಲಭ್ಯವಾಗಿದೆ. ಆ ಪತ್ರ ಅಧಿಕೃತ ಅಲ್ಲ ಎಂದು ಈ ಹಿಂದೆ ಬಸವರಾಜ ಹೊರಟ್ಟಿ ಈ ಹಿಂದೆ ತಿಳಿಸಿದ್ದರು.
ಆದರೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಧ್ಯಕ್ಕೆ ರಾಜೀನಾಮೆ ನೀಡುವುದಿಲ್ಲ. ಆದರೆ ರಾಜೀನಾಮೆ ಪತ್ರ ಇನ್ನೂ ನನ್ನ ಕಛೇರಿಯ ಡ್ರಾನಲ್ಲಿ ಇದೆ ಎಂದು ತಿಳಿಸಿದ್ದಾರೆ.
ನನ್ನ ಜೊತೆಗೆ ಗವರ್ನರ್, ಸಚಿವರು, ಶಾಸಕರು ಇದ್ದಾರೆ. ಮಾರ್ಚ್.27ರಂದು ಕುಳಿತು ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸೋಣ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಈಗಾಗಲೇ ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ ಸಹಿ ಇರಲಿಲ್ಲ. ಆಗ ಬಸವರಾಜ ಹೊರಟ್ಟಿ ಅವರು ನನ್ನ ಪಿಎ ಇದನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಸಹಿ ಇರುವಂತ ರಾಜೀನಾಮೆ ಪತ್ರ ಡ್ರಾನಲ್ಲಿ ಇದೆ ಎಂದಿದ್ದರು.