ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ: ಸ್ವಾತಿ ಮಲಿವಾಲ್

ದೆಹಲಿ: ನಮ್ಮ ಪಕ್ಷದ ನಾಯಕರು ನನ್ನನ್ನು ವಿನಯದಿಂದ ಕೇಳಿದರೆ ನಾನು ಖಂಡಿತವಾಗಿಯೂ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಅದರ ಹೊರತಾಗಿ ಅವರು ನನ್ನ ಮೇಲೆ ಹಲ್ಲೆ ನಡೆಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು ನನಗೆ ಇಷ್ಟವಾಗಲಿಲ್ಲ ಎಂದರು. ‘2006ರಲ್ಲಿ ಅವರ ಜೊತೆ ಕೆಲಸ ಮಾಡಲು ನನ್ನ ಕೆಲಸವನ್ನು ಬಿಟ್ಟಿದ್ದೆ. ಆಗ ನಮ್ಮ ಸಂಸ್ಥೆಯಲ್ಲಿ ಇದ್ದದ್ದು ಮೂರೇ ಜನ. ಅವರಲ್ಲಿ ನಾನೂ ಒಬ್ಬಳು.

ಎಎಪಿ ಸ್ಥಾಪನೆಯಾದಾಗಿನಿಂದ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಸಂಸದ ಸ್ಥಾನ ಬೇಕಿದ್ದಲ್ಲಿ ಬಿಟ್ಟುಕೊಡುವಂತೆ ವಿನಂತಿಸಬೇಕಿತ್ತು. ಅಷ್ಟೇ. ಆದರೆ ದಾಳಿ ಮಾಡುವುದು ಸರಿಯಲ್ಲ. ನಾನು ಪಕ್ಷಕ್ಕಾಗಿ ಪ್ರಾಣವನ್ನೇ ಮುಡಿಪಿಟ್ಟಿದ್ದೇನೆ.

ಎಂಪಿ ಸೀಟು ಎನ್ನುವುದು ಬಹಳ ಸಣ್ಣ ವಿಚಾರ. ಎಎಪಿ ಸೇರಿದ ನಂತರ ನಾನು ಯಾವುದೇ ಹುದ್ದೆಗಾಗಿ ಹಟ ಹಿಡಿದಿಲ್ಲ. ಆದರೆ ಪಕ್ಷದ ಮುಖಂಡರು ನನ್ನನ್ನು ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿದೆ. ಈಗ ಯಾವುದೇ ಸಂದರ್ಭದಲ್ಲೂ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಅವರು ನಿರ್ಧಾರದ ದನಿಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು