Thursday, June 13, 2024

ಸತ್ಯ | ನ್ಯಾಯ |ಧರ್ಮ

ಸುಧಾಕರ್‌ ಒಂದು ಮತದಿಂದ ಗೆದ್ದರೂ ರಾಜಕೀಯ ಸನ್ಯಾಸ ಪಡೆಯುತ್ತೇನೆ: ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರಚಾರ ಶೈಲಿ ಹಾಗೂ ಮಾತುಗಳಿಂದ ಸುದ್ದಿಯಲ್ಲಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌ ಈಗಲೂ ಆಗಾಗ ತಮ್ಮ ತೀಕ್ಷ್ಣ ಮಾತುಗಳಿಂದ ಪತ್ರಕರ್ತರ ಡಾರ್ಲಿಂಗ್‌ ಎನ್ನಿಸಿಕೊಂಡಿದ್ದಾರೆ. ಅವರಿದ್ದಲ್ಲಿ ಸುದ್ದಿಗೆ ಬರವಿಲ್ಲ.

ಈಗ ಲೋಕಸಭಾ ಚುನಾವಣಾ ಫಲಿತಾಂಶದ ಹೊಸ್ತಿಲಿನಲ್ಲಿ ದೇಶ ನಿಂತಿರುವಾಗ ಪ್ರದೀಪ್‌ ಈಶ್ವರ್‌ ತನ್ನ ಸಾಂಪ್ರದಾಯಿಕ ವೈರಿ, ಮಾಜಿ ಸಚಿವ ಸುಧಾಕರ್‌ ಅವರ ಕುರಿತು ಸವಾಲ್‌ ಒಂದನ್ನು ಎಸೆದಿದ್ದಾರೆ. ಸುಧಾಕರ್‌ ಅವರು ಈ ಲೋಕಸಭಾ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದರೂ ತಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎನ್ನುವ ಮೂಲಕ ಅವರು ತಮ್ಮ ರಾಜಕೀಯ ಜೀವನವನ್ನೇ ಪಣಕಿಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಅವರು “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ.ಕೆ.ಸುಧಾಕರ್ ಒಂದು ಮತದಿಂದ ಮುನ್ನಡೆ ಸಾಧಿಸಿದರೂ ರಾಜೀನಾಮೆ ನೀಡುವೆ” ಎಂದು ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಾ ರಾಮಯ್ಯ ವಿರುದ್ಧ ಸುಧಾಕರ್ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಈಶ್ವರ್ ಸೋಲಿಸಿದ್ದರು ಮತ್ತು ಅವರಿಬ್ಬರು ಕಣಕ್ಕಿಳಿದಿದ್ದರು.

ನಾನು ಈಗಾಗಲೇ ಸವಾಲು ಹಾಕಿದ್ದೇನೆ…100% ಗೆಲ್ಲುತ್ತೇವೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್ ಒಂದು ಮತ ಹೆಚ್ಚುವರಿ ಪಡೆದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಈಶ್ವರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುಧಾಕರ್ ಅವರ ಟೀಕೆಗೆ ಈಶ್ವರ್ ಅವರು, ”ನಕಲಿ ಪ್ರಮಾಣಪತ್ರದೊಂದಿಗೆ ಎಂಬಿಬಿಎಸ್ ಮುಗಿಸಿದವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಗುಡುಗಿದರು.

Related Articles

ಇತ್ತೀಚಿನ ಸುದ್ದಿಗಳು