Saturday, August 30, 2025

ಸತ್ಯ | ನ್ಯಾಯ |ಧರ್ಮ

ಈ ಬಾರಿ ಹಾಸನಾಂಬ VVIP ಸೃಷ್ಟಿಸುವ ಅವ್ಯವಸ್ಥೆ ಅಂತ್ಯ? ಜಾತ್ರೆ ವೇಳೆ ಕಚೇರಿ ಕೆಲಸಗಳು ನಡೆಯಬೇಕು – ಕೃಷ್ಣಬೈರೇಗೌಡ ಸೂಚನೆ

ಹಾಸನ : ಹಾಸನಾಂಬೆ ಉತ್ಸವದಲ್ಲಿ ವಿಐಪಿ ಹಾಗೂ ವಿವಿಐಪಿ ಭಕ್ತರಿಂದ ಸಾಮಾನ್ಯ ಭಕ್ತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ದರ್ಶನಕ್ಕೆ ಸಮಯ ನಿಗದಿಪಡಿಸುವಂತೆ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸಲಹೆ ನೀಡಿದರು.ಗೋಲ್ಡ್ ಕಾರ್ಡ್ ಭಕ್ತರಿಗೆ ಎರಡು ಗಂಟೆ, ಶಿಷ್ಟಾಚಾರ ಭಕ್ತರಿಗೆ ಎರಡು ಗಂಟೆ ಮಾತ್ರ ಅವಕಾಶ ನೀಡಿದರೆ ಸಾಮಾನ್ಯ ಜನರಿಗೆ ದರ್ಶನ ಸುಗಮವಾಗುತ್ತದೆ” ಎಂದು ಅವರು ತಿಳಿಸಿದರು.

ಹಾಸನದ ಜಿ.ಪಂ. ಸಭಾಂಗಣದಲ್ಲಿ ನಡೆದ ಉತ್ಸವದ ತಯಾರಿ ಸಭೆಯಲ್ಲಿ ಮಾತನಾಡಿದ ಸಚಿವರು, ಹಾಸನಾಂಬೆ ಉತ್ಸವದ ವೇಳೆ ಒಂದೂವರೆ ತಿಂಗಳು ಇಲಾಖೆಯ ಬೇರೆ ಯಾವುದೇ ಕೆಲಸಗಳು ಆಗದೆ ನಿಂತುಹೋಗುತ್ತವೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಕಂಡಿದ್ದೆ. ಉತ್ಸವದ ಸಿದ್ಧತೆಯ ಜೊತೆಗೆ ಜನರ ಕೆಲಸವನ್ನೂ ನಿರ್ಲಕ್ಷಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಎಲ್ಲೆಡೆಗಳಿಂದ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದ್ದರಿಂದ ವಿಶೇಷ ಭಕ್ತರ ಸಂಸ್ಕೃತಿ ಸಾಮಾನ್ಯ ಜನರಿಗೆ ತೊಂದರೆ ತರಬಾರದು ಎಂದು ಸಚಿವರು ಮನವಿ ಮಾಡಿದರು. ಜನರ ಅನುಕೂಲಕ್ಕಾಗಿ ಬೇಕಾದ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಭೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page