Tuesday, August 5, 2025

ಸತ್ಯ | ನ್ಯಾಯ |ಧರ್ಮ

ಯಶಸ್ವಿಗೊಂಡ 2025ರ ಪತ್ರಕರ್ತರ ದಿನಾಚರಣೆ ಹಲವಾರು ವರ್ಷದ ನಿವೇಶನದ ಬೇಡಿಕೆಗೆ ಇಡೇರುವುದೆ ?

ಹಾಸನ : ಪ್ರತಿವರ್ಷದಂತೆ ಈವರ್ಷವೂ ಕೂಡ ನಗರದ ಹೊರ ವಲಯ ಪವನಪುತ್ರ ರೆಸಾರ್ಟ್ ನಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಡೆದ ಮಾಧ್ಯಮ ದಿನಾಚರಣೆಯು ಒಂದು ರೀತಿ ಹಬ್ಬದ ರೀತಿಯ ವಾತವರಣ ನಿರ್ಮಾಣ ಮಾಡಿತು. ಜಿಲ್ಲೆಯಿಂದ ಆಗಮಿಸಿದ್ದ ವಿವಿಧ ತಾಲೂಕಿನ ಪತ್ರಕರ್ತರು ಹಾಗೂ ಕುಟುಂಬ ವರ್ಗವು ಬೆಳಗಿನಿಂದ ಸಂಜೆ ಮುಗಿಯುವವರೆಗೂ ಪಾಲ್ಗೊಂಡು ಸುಂದರವಾದ ಕ್ಷಣವನ್ನು ಸವಿದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಬೆಳಿಗ್ಗೆ ಕೊಂಚ ಸಮಯ ಕಾರ್ಯಕ್ರಮವು ತಡವಾಗಿ ಪ್ರಾರಂಭವಾದರೂ ಕೂಡ ಆಗಮಿಸಿದ ಮುಖ್ಯ ಅತಿಥಿಗಳು ಹಾಗೂ ಪತ್ರಕರ್ತರು ಉತ್ಸಹದಿಂದ ಭಾಗವಹಿಸಿದರು. ಅನೇಕ ವರ್ಷಗಳಿಂದ ಪತ್ರಕರ್ತರಿಗೆ ನಿವೇಶನದ ವಿಚಾರವಾಗಿ ಹಾಸನ ಜಿಲ್ಲಾ ಪತ್ರಕರ್ತರ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಅವರ ಶತತ ಪ್ರಯತ್ನ ಎಂಬಂತೆ ಗಮನಸೆಳೆಯುವ ಕೆಲಸ ಮಾಡಿದ ಪರಿಣಾಮ ಪಾಲ್ಗೊಂಡಿದ್ದ ರಾಜಕಾರಣಿಗಳು ನೂರಕ್ಕೆ ನೂರರಷ್ಟು ನಿವೇಶನ ಕೊಡಿಸುವ ಭರವಸೆ ನೀಡಿದರು. ಕೆ.ಎಂ. ಶಿವಲಿಂಗೇಗೌಡರು ತಾವೆ ಗೃಹಮಂಡಳಿ ನಿಗಮದ ಅಧ್ಯಕ್ಷರಾಗಿರುವುದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಜೊತೆ ಮಾತನಾಡಿ, ನಿವೇಶನಕ್ಕೆ ಇರುವ ಕಾನೂನನ್ನೆ ಸಡಿಲಿಕೆ ಮಾಡಿ ಕೊಡುವ ಪ್ರಯತ್ನ ಮಾಡುವುದಾಗಿ ವಿಶ್ವಾಸವ್ಯಕ್ತಪಡಿಸಿದಲ್ಲದೇ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಜೊತೆ ಬಂದರೇ ಸಿಎಂ ಜೊತೆ ಮಾತನಾಡುವುದಾಗಿ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡರು ಕಾರ್ಯಕ್ರಮದಲ್ಲಿ ಬಹಿರಂಗವಾಗಿ ತಿಳಿಸಿದರು. ಇನ್ನು ಸಂಜೆ ನಡೆದ ಮುಕ್ತಾಯ ಸಮಾರಂಭದಲ್ಲೂ ಕೂಡ ಸಂಸದ ಶ್ರೇಯಸ್ ಎಂ. ಪಟೇಲ್ ಕೂಡ ತಮ್ಮ ಭಾಷಣದಲ್ಲಿ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಈಬಗ್ಗೆ ಸರಕಾರದ ಮಟ್ಟದಲ್ಲಿ ಗಮನಸೆಳೆಯುವ ಕೆಲಸ ಮಾಡುವುದಾಗಿ ಹೇಳಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ಇನ್ನು ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ, ಕನ್ನಡಪ್ರಭ ಮತ್ತು ಸುವರ್ಣ ಟಿವಿ ವಾಹಿನಿಯ ಮುಖ್ಯಸ್ಥ ರವಿ ಹೆಗಡೆ, ಭಾರತೀಯ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ರಾಜ್ಯ ಸಮಿತಿ ಸದಸ್ಯ ಹೆಚ್.ಬಿ. ಮದನ್ ಗೌಡ, ರವಿನಾಕಲಗೂಡು, ಕೆ.ಆರ್. ಮಂಜುನಾಥ್, ಎಸ್.ಆರ್. ಪ್ರಸನ್ನಕುಮಾರ್ ಇತರರು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು. ಹಿರಿಯ ಪತ್ರಕರ್ತರನ್ನು ಗೌರವಿಸಿದಲ್ಲದೇ, ಮಾಧ್ಯಮ ಕ್ಷೇತ್ರದ ಗಣನಿಯ ಸೇವೆ ಸಲ್ಲಿಸಿದವರನ್ನ ಗುರುತಿಸಿ ಸನ್ಮಾನಿಸಿ ಗೌರವಿಸಿದರು. ಇನ್ನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಕುಟುಂಬದ ಮಕ್ಕಳಿಗಾಗಿ ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನ ಸನ್ಮಾನಿಸಿ ಗೌರವಿಸಿದರು. ಪತ್ರಕರ್ತರ ಕುಟುಂಬದವರಿಗಾಗಿ ಸಂತೋಷ ಕೊಡುವ ಕ್ರೀಡಾಕೂಟ ಒಂದು ರೀತಿಯ ಸಂತೋಷದ ವಾತವರಣ ನಿರ್ಮಿಸಿತು.


ಬಹಳ ವರ್ಷಗಳ ಬೇಡಿಕೆಯಾಗಿದ್ದ ಪತ್ರಕರ್ತರ ನಿವೇಶನದ ವಿಚಾರವಾಗಿ ಇದೆ ಪ್ರಥಮ ಬಾರಿಗೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿAದ ಪತ್ರಕರ್ತರಿಗಾಗಿಯೇ ನಿವೇಶನ ನಿರ್ಮಿಸುವುದಕ್ಕೆ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದರೂ ಸರಕಾರದ ಅನುಧಾನದಲ್ಲಿ ನಿವೇಶನ ಸಿಗದೆ ಇರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಹಾಸನದಲ್ಲಿ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಮುಂದಾಗಿರುವ ಬೆನ್ನಲ್ಲೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಅವರು ನಿವೇಶನದ ಅರ್ಜಿಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಯಾರಾರಿಗೆ ನಿವೇಶನದ ಅಗತ್ಯವಿದೆ ಅವರಿಗೆ ಅರ್ಜಿಯನ್ನು ಜಿಲ್ಲಾ ಪತ್ರಕರ್ತರ ಸಂಘದ ಇತಿಹಾಸದಲ್ಲಿ ಇದೆ ಪ್ರಥಮ ಬಾರಿಗೆ ಆಹ್ವಾನಿಸಲಾಗಿದೆ. ನಿವೇಶನದ ಅರ್ಜಿಯನ್ನು ಸಾಂಕೇತಿಕವಾಗಿ ಮಾಧ್ಯಮ ದಿನಾಚರಣೆಯಲ್ಲಿ ಬಿಡುಗಡೆಗೊಳಿಸಲಾಗಿದೆ.
ಇದೆ ವೇಳೆ ಉಪಾಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಕೆ.ಎಂ. ಹರೀಶ್, ಡಿ.ಬಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕಾರ್ಯದರ್ಶಿ ಶ್ರೀನಿವಾಸ್ ಪಿ.ಎ. ಸಿ.ಬಿ. ಸಂತೋಷ್, ಖಜಾಂಚಿ ಕುಮಾರ್ ಹೆಚ್.ವಿ. ಸುರೇಶ್ ಕುಮಾರ್, ಅರಕಲಗೂಡು ತಾಲೂಕು ಅಧ್ಯಕ್ಷ ಶಂಕರ್, ಶಿವಕುಮಾರ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಸಿದ್ಧರಾಜು, ನಟೇಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಮಂಜುನಾಥ್ ಹೇಮಂತ್, ಆಲೂರು ತಾಲೂಕು ಅಧ್ಯಕ್ಷ ಪೃಥ್ವಿ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ವೆಂಕಟೇಶ್ ರಾಮಕೃಷ್ಣ, ಬೇಲೂರು ತಾಲೂಕು ಅಧ್ಯಕ್ಷ ರಘುನಾಥ್, ಶಿವರಾಜು, ಸಕಲೇಶಪುರ ತಾಲೂಕು ಅಧ್ಯಕ್ಷ ಜೈಭೀಮ್ ಮಂಜು, ದಯಾನಂದ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page