Monday, September 22, 2025

ಸತ್ಯ | ನ್ಯಾಯ |ಧರ್ಮ

ನೀವು ಬಳಸುತ್ತಿರುವ ವಿದೇಶಿ ವಸ್ತುಗಳನ್ನು ತ್ಯಜಿಸುತ್ತೀರಾ..?: ಪ್ರಧಾನಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ವದೇಶಿ ವಸ್ತುಗಳನ್ನೇ ಬಳಸುವಂತೆ ಜನರಿಗೆ ಕರೆ ನೀಡಿದ್ದರು.

ಇದಕ್ಕೆ ಆಮ್ ಆದ್ಮಿ ಪಕ್ಷ (AAP)ದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರಿಗೆ ಕರೆ ನೀಡುವ ಮೊದಲು, ನೀವೇ ಅದನ್ನು ಆಚರಿಸಿ ತೋರಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. “ನೀವು ಈಗ ಬಳಸುತ್ತಿರುವ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುತ್ತೀರಾ…?” ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ:

“ಪ್ರಧಾನಿ ಅವರೇ, ಜನರು ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ನೀವು ಬಯಸುತ್ತೀರಿ. ನೀವೇ ಸ್ವತಃ ಸ್ವದೇಶಿ ವಸ್ತುಗಳನ್ನು ಬಳಸಲು ಪ್ರಾರಂಭಿಸುತ್ತೀರಾ…? ನೀವು ಪ್ರತಿದಿನ ಪ್ರಯಾಣಿಸುತ್ತಿರುವ ವಿದೇಶಿ ವಿಮಾನವನ್ನು ಬಿಡುತ್ತೀರಾ…? ದಿನವಿಡೀ ನೀವು ಬಳಸುತ್ತಿರುವ ವಿದೇಶಿ ವಸ್ತುಗಳನ್ನು ತ್ಯಜಿಸುತ್ತೀರಾ…?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, “ದೇಶದಲ್ಲಿರುವ ನಾಲ್ಕು ಅಮೆರಿಕನ್ ಕಂಪನಿಗಳನ್ನು ನೀವು ಮುಚ್ಚಿಸುತ್ತೀರಾ…? ಡೊನಾಲ್ಡ್ ಟ್ರಂಪ್ ಪ್ರತಿದಿನ ಭಾರತವನ್ನು ಮತ್ತು ಭಾರತದ ಜನರನ್ನು ಅವಮಾನಿಸುತ್ತಿದ್ದಾರೆ. ನೀವು ಏನನ್ನೂ ಮಾಡುವುದಿಲ್ಲವೇ…? ಜನರು ತಮ್ಮ ಪ್ರಧಾನಿಯಿಂದ ಕಾರ್ಯರೂಪದ ಕ್ರಮಗಳನ್ನು ಬಯಸುತ್ತಿದ್ದಾರೆ, ಕೇವಲ ಉಪದೇಶಗಳನ್ನಲ್ಲ,” ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

ಇದಕ್ಕೂ ಮೊದಲು, ಆಪ್ ಸಂಸದ ಸಂಜಯ್ ಸಿಂಗ್ ಕೂಡ ಪ್ರಧಾನಿಯ ಸ್ವದೇಶಿ ಹೇಳಿಕೆಗಳ ಕುರಿತು ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಕನ್ನಡಕಗಳು, ಸ್ವಿಟ್ಜರ್ಲೆಂಡ್‌ನ ಕೈಗಡಿಯಾರ, ಅಮೆರಿಕನ್ ಫೋನ್, ಜರ್ಮನ್ ಕಾರುಗಳು, ವಿದೇಶಿ ಬ್ರಾಂಡ್‌ಗಳ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಬಳಸುತ್ತಾರೆ. ಆದರೆ ಜನರಿಗೆ ಮಾತ್ರ ಸ್ವದೇಶಿ ವಸ್ತುಗಳನ್ನೇ ಬಳಸುವಂತೆ ಹೇಳುತ್ತಿದ್ದಾರೆ ಎಂದು ಸಂಜಯ್ ಸಿಂಗ್ ಟೀಕಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page