Monday, July 28, 2025

ಸತ್ಯ | ನ್ಯಾಯ |ಧರ್ಮ

ನಾನು ರಾಮ ಮಂದಿರಕ್ಕೆ ಹೋಗುವುದನ್ನು ನೀವು ಸಹಿಸುತ್ತೀರಾ? ಬಿಜೆಪಿಗೆ ಖರ್ಗೆ ಪ್ರಶ್ನೆ

ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ರಾಮ ಮಂದಿರ ಉದ್ಘಾಟನಗೆ ಬಾರದಿರುವುದನ್ನು ದೊಡ್ಡ ವಿಷಯವನ್ನಾಗಿ ಮಾಡಿ ಎಲ್ಲೆಡೆ ಟೀಕಿಸುತ್ತಿದೆ. ಪ್ರಸ್ತುತ ಬಿಜೆಪಿಯ ಈ ಟೀಕೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಾರವಾಗಿಯೇ ಉತ್ತರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು “ಪರಿಶಿಷ್ಟ ಜಾತಿಗಳು (ಎಸ್ಸಿ) ಇನ್ನೂ ದೇಶಾದ್ಯಂತ ತಾರತಮ್ಯವನ್ನು ಎದುರಿಸುತ್ತಿವೆ. ನನ್ನ ಸಮುದಾಯದ ಜನರಿಗೆ ಈಗಲೂ ದೇವಸ್ಥಾನಗಳ ಒಳಗೆ ಪ್ರವೇಶವಿಲ್ಲ.” ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು “ಬಿಜೆಪಿ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಾಮ್ ನಾಥ್ ಕೋವಿಂದ್ ಅವರನ್ನು ʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡʼ ಎಂಬ ಕಾರಣಕ್ಕಾಗಿ ಅವಮಾನಿಸುತ್ತಿದೆ” ಎಂದು ಬಲವಾದ ಆರೋಪವನ್ನು ಹೊರಿಸಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಮತ್ತು ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ಮುರ್ಮು ಅವರನ್ನು ಆಹ್ವಾನಿಸಲಾಗಿಲ್ಲ, ಅಲ್ಲದೆ ಹೊಸ ಸಂಸತ್ ಕಟ್ಟಡದ ಅಡಿಪಾಯ ಹಾಕಲು ಕೋವಿಂದ್ ಅವರಿಗೂ ಅವಕಾಶ ನೀಡಿಲ್ಲ” ಎಂದು ಅವರು ಹೇಳಿದ್ದಾರೆ.

ರಾಜಕೀಯ ಒತ್ತಡಗಳಿಂದಾಗಿ ಕಾಂಗ್ರೆಸ್ ರಾಮ ಮಂದಿರ ಪ್ರತಿಷ್ಠಾಪನೆಯಿಂದ ದೂರ ಉಳಿದಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ “ದೇಶದಲ್ಲಿ ಇಂದಿಗೂ ದಲಿತ ಸಮುದಾಯದ ಜನರಿಗೆ ದೇಗುಲಗಳಿಗೆ ಪ್ರವೇಶವಿಲ್ಲ. ಹೀಗಿರುವಾಗ ಒಂದು ವೇಳೆ ನಾನು ಮಂದಿರ ಉದ್ಘಾಟನೆಗೆ ಹೋಗಿದ್ದರೆ ಮೋದಿಯವರು ಅದನ್ನು ಸಹಿಸುತ್ತಿದ್ದರೇ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page