Sunday, June 23, 2024

ಸತ್ಯ | ನ್ಯಾಯ |ಧರ್ಮ

ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ: ಕಾವೇರಲಿದೆಯೇ ಇ.ಡಿ. ಇತ್ಯಾದಿ ಸಂಸ್ಥೆಗಳ ಬಳಕೆಯ ಚರ್ಚೆ?

ಹೊಸದೆಹಲಿ: ಎರಡು ರಾಜ್ಯಗಳ ವಿಧಾನಸಭೆಯ ಚುನಾವಣೆ ಮತ್ತು ದೆಹಲಿಯ ನಗರ ಪಾಲಿಕೆ ಚುನಾವಣೆಯ ನಂತರ ಇಂದಿನಿಂದ ಸಂಸತ್‌ ತನ್ನ ಚಳಿಗಾಲದ ಅಧಿವೇಶನವನ್ನು ಸೇರಲಿದೆ.

ಸಂಸತ್ತಿನ ಮೂರು ವಾರಗಳ ಅವಧಿಯ ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗಲಿದ್ದು, ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶ ಮತ್ತು ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳು ಬುಧವಾರ ಮತ್ತು ಗುರುವಾರದಂದು ಹೊರಬೀಳಲಿರುವುದರಿಂದ ಮೊದಲ ವಾರದ ಕಾವು ಬಿಸಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪರಿಗಣನೆ ಮತ್ತು ಅಂಗೀಕಾರಕ್ಕಾಗಿ 16 ಹೊಸ ಮಸೂದೆಗಳನ್ನು ಸಿದ್ಧಪಡಿಸಿರುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತನಿಖಾ ಸಂಸ್ಥೆಗಳ ದುರುಪಯೋಗದ ಆರೋಪ ಸೇರಿದಂತೆ ಸಮಸ್ಯೆಗಳ ಪಟ್ಟಿಯನ್ನೇ ಪ್ರತಿಪಕ್ಷಗಳು ಸಿದ್ಧಪಡಿಸಿ ಇಟ್ಟುಕೊಂಡಿವೆದೆ. ಸರ್ಕಾರದ ಶಾಸಕಾಂಗ ಕಾರ್ಯಸೂಚಿಯಲ್ಲಿ 25 ಮಸೂದೆಗಳು ಇವೆ – ಅವುಗಳಲ್ಲಿ 16 ಹೊಸವುಗಳು, ಏಳು ಬಾಕಿ ಇರುವವುಗಳು ಮತ್ತು ಎರಡು ಹಣಕಾಸು ಮಸೂದೆಗಳು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಹಿರಿಯ ಸಚಿವರು ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ವಿರೋಧಿ ನಾಯಕರನ್ನು ಭೇಟಿ ಮಾಡಿ ಸದನ ಸುಗಮವಾಗಿ ನಡೆಯಲು ಸಹಕಾರ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಗೆ ಹಾಜರಾಗಿಲ್ಲ.
ವಿರೋಧ ಪಕ್ಷಗಳ ಧ್ವನಿಯನ್ನು ಸಂಸತ್ತಿನಲ್ಲಿ ಕೇಳಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು