Saturday, June 15, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಟಿ-20 ಏಷ್ಯಾ ಕಪ್‌ 2022: ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸಿಲ್ಹೆಟ್: ಭಾರತ ಮತ್ತು ಬಾಂಗ್ಲದೇಶದ ವಿರುದ್ಧ ನಡೆದ ಮಹಿಳಾ ಟಿ-20 ಏಷ್ಯಾ ಕಪ್‌ ಟೂರ್ನಿಯ 15ನೇ ಪಂದ್ಯದಲ್ಲಿ ಭಾರತ ತಂಡವು 59 ರನ್‌ಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಮೊದಲು ಟಾಸ್‌ ಗೆದ್ದ ಭಾರತ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಂತರ ಮೈದಾನಕ್ಕಿಳಿದ ಭಾರತೀಯ ಓಪನರ್‌ಗಳಾದ ಶಫಾಲಿ ವರ್ಮಾ ಮತ್ತು ನಾಯಕಿ ಸ್ಮೃತಿ ಮಂಧಾನ ಬಿರುಸಿನ ಆಟವಾಡುವ ಮೂಲಕ ತಂಡಕ್ಕೆ ಹೊಸ ಹುರುಪು ತುಂಬಿದರು.

ಈ ಮೂಲಕ ಸ್ಮೃತಿ ಮಂಧಾನ 38 ಎಸೆತಗಳಲ್ಲಿ 47 ರನ್‌ ಗಳಿಸಿದರೆ, ಶಫಾಲಿ ವರ್ಮ 44 ಎಸೆತಗಳಲ್ಲಿ 55 ರನ್‌ ಗಳಿಸುವುದರ ಮೂಲಕ ಇಬ್ಬರ ಜೊತೆಯಾಟವು ತಂಡಕ್ಕೆ 96 ರನ್‌ ಕಲೆಹಾಕಿತು. ನಂತರ ಬಂದ ಜೆಮಿಮಾ ರಾಡ್ರಿಗಸ್ ಆಟವು ತಂಡಕ್ಕೆ ಬರವಸೆ ನೀಡಿತು. ಆದರೆ ರಿಚಾ ಘೋಷ್ ಮತ್ತು ಕಿರಣ್‌ ನವಿಗಿರೆ ತಂಡಕ್ಕೆ ತಮ್ಮ ಉತ್ತಮ ಕೊಡುಗೆ ನೀಡದೆ ಪೆವಿಲಿಯನ್‌ ಸೇರಿದರು.

ನಂತರ ಬಂದ ದೀಪ್ತಿ ಶರ್ಮಾ ಜೆಮಿಮಾ ಇಬ್ಬರು ಉತ್ತಮ ಆಟ ಪ್ರದರ್ಶಿಸಿ ಕೊನೆಯ 2.3 ಓವರ್‌ಗಳಲ್ಲಿ 29 ರನ್‌ ಗಳಿಸಿದ್ದರಿಂದ ತಂಡ ಒಟ್ಟು 159 ರನ್‌ ಗಳಿಸಲು ಸಾಧ್ಯವಾಯಿತು.

ತದನಂತರ 159 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾ ವನಿತೆಯರು ನಿಧಾನಗತಿಯಲ್ಲಿ ಆಟ ಪ್ರಾರಂಭ ಮಾಡಿದರು. ಹೀಗಾಗಿ ಹೆಚ್ಚು ವಿಕೆಟ್‌ ಕಳೆದುಕೊಳ್ಳದಿದ್ದರೂ, ಗುರಿ ತಲುಪುವಲ್ಲಿ ವಿಫಲರಾದರು. ಈ ನಿಟ್ಟಿನಲ್ಲಿ ಅತಿಥೇಯ ತಂಡವು 7 ವಿಕೆಟ್‌ಗಳಿಗೆ 100 ರನ್‌ಗಳಿಸಿದ್ದರಿಂದ ಸೋಲನ್ನು ಅನುಭವಿಸಿದರು.

ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿರುವ ಭಾರತೀಯ ವನಿತೆಯರು, ಸೆಮಿಫೈನಲ್‌ ಪ್ರವೇಶ ಕೂಡಾ ಖಚಿತವಾಗಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು