Thursday, June 19, 2025

ಸತ್ಯ | ನ್ಯಾಯ |ಧರ್ಮ

ವಿಶ್ವಕಪ್ ಕ್ರಿಕೆಟ್: ನಾಳೆ ವೆಸ್ಟ್ ಇಂಡೀಸ್-ಸ್ಕಾಟ್ ಲ್ಯಾಂಡ್ ಹಣಾಹಣಿ

ಬ್ಲಂಡ್ ಸ್ಟೋನ್ ಅರೆನಾ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್ ಗ್ರೂಪ್ ಹಂತದ ಮೂರನೇ ಪಂದ್ಯದಲ್ಲಿ ನಾಳೆ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ಪಡೆ ದುರ್ಬಲ ಸ್ಕಾಟ್ ಲ್ಯಾಂಡ್ ತಂಡವನ್ನು ಎದುರಿಸಲಿದೆ.

ಎರಡೂ ತಂಡಗಳಿಗೆ ಇದು ಮೊದಲನೇ ಪಂದ್ಯವಾಗಿದ್ದು, ವೆಸ್ಟ್ ಇಂಡೀಸ್ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ. ರಿಚಿ ಬೆರಿಂಗ್ಟನ್ ನೇತೃತ್ವದ ಸ್ಕಾಟ್ ಲ್ಯಾಂಡ್ ತಂಡ ಪ್ರಬಲ ವೆಸ್ಟ್ ಇಂಡೀಸ್ ಎದುರಿಸಲು ಸಜ್ಜಾಗಿದೆಯಾದರೂ ಟಿಟ್ವೆಂಟಿ ಸ್ಪೆಷಲಿಸ್ಟ್ ತಂಡವಾದ ವೆಸ್ಟ್ ಇಂಡೀಸ್ ಮಣಿಸುವುದು ಸುಲಭ ಸಾಧ್ಯವೇನಲ್ಲ.

ಇನ್ನು, ಗ್ರೂಪ್ ಹಂತದ ನಾಲ್ಕನೇ‌ ಪಂದ್ಯವೂ ಇದೇ ಅಂಗಳದಲ್ಲಿ ನಾಳೆ ನಡೆಯಲಿದ್ದು, ಜಿಂಬಾಂಬೆ ತಂಡಕ್ಕೆ ಐರ್ಲೆಂಡ್ ಸವಾಲೊಡ್ಡಲಿದೆ. ಐರ್ಲೆಂಡ್ ಹಲವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದು, ಎರಡೂ ತಂಡಗಳಿಗೆ ಗೆಲುವಿನ ಸಮಾನ ಅವಕಾಶವಿದೆ.

ಜಿಂಬಾಬ್ವೆ ವಿರುದ್ಧ ಐರ್ಲೆಂಡ್

ಜಿಂಬಾಂಬೆ ತಂಡವನ್ನು ಕ್ರೇಗ್ ಎರ್ವಿನ್ ಮುನ್ನಡೆಸುತ್ತಿದ್ದು, ಆಂಡ್ರ್ಯೂ ಬಾಲ್ಬಿರ್ನೀ ಐರ್ಲೆಂಡ್ ತಂಡದ ನಾಯಕರಾಗಿದ್ದಾರೆ. ಇಬ್ಬರೂ ನಾಯಕರು ಆರಂಭಿಕ ಬ್ಯಾಟ್ಸ್ ಮನ್ ಗಳಾಗಿರುವುದು ವಿಶೇಷ.

ಇಂದು ನಡೆದ ಗ್ರೂಪ್ ಹಂತದ ಪಂದ್ಯಗಳಲ್ಲಿ, ಪ್ರಬಲ ಶ್ರೀಲಂಕಾ ತಂಡವನ್ನು ಅಚ್ಚರಿಯ ಫಲಿತಾಂಶದಲ್ಲಿ ನಮೀಬಿಯಾ ಮಣಿಸಿದರೆ, ರೋಚಕ ಹಣಾಹಣಿಯಲ್ಲಿ ನೆದರ್ ಲ್ಯಾಂಡ್ ತಂಡವು ಯುನೈಡೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page