Wednesday, August 20, 2025

ಸತ್ಯ | ನ್ಯಾಯ |ಧರ್ಮ

ವಿಶ್ವಕಪ್‌ | ಇತಿಹಾಸ ಸೃಷ್ಟಿಸಿದ ಮೊಹಮ್ಮದ್ ಶಮಿ, ಸೆಮಿಫೈನಲ್‌ ತಲುಪಿದ ಭಾರತ

ODI ವಿಶ್ವಕಪ್-2023ರಲ್ಲಿ, ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ತಮ್ಮ ಸಾರ್ವತ್ರಿಕ ಫಾರ್ಮನ್ನು ತೋರಿಸಿದರು. ಈ ಮೆಗಾ ಟೂರ್ನಮೆಂಟ್‌ನ ಭಾಗವಾಗಿ ವಾಂಖೆಡೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಈ ಪಂದ್ಯದಲ್ಲಿ 5 ಓವರ್ ಬೌಲ್ ಮಾಡಿದ ಶಮಿ ಕೇವಲ 18 ರನ್ ನೀಡಿ 5 ವಿಕೆಟ್ ಪಡೆದರು. ಅದರಲ್ಲಿ ಒಂದು ಮೇಡನ್‌ ಓವರ್‌ ಕೂಡಾ ಸೇರಿದೆ.

ಮೊಹಮ್ಮದ್ ಶಮಿ ಅಪರೂಪದ ಸಾಧನೆ..

5 ವಿಕೆಟ್ ಉರುಳಿಸಿದ ಶಮಿ ತಮ್ಮ ಹೆಸರಲ್ಲಿ ಅಪರೂಪದ ಸಾಧನೆ ಬರೆದರು. ಶಮಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಶಮಿ ಇದುವರೆಗೆ ವಿಶ್ವಕಪ್ ಟೂರ್ನಿಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಈ ಕ್ರಮಾಂಕದಲ್ಲಿ ಶಮಿ ಭಾರತದ ಬೌಲಿಂಗ್ ದಿಗ್ಗಜರಾದ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿದರು.

ಇವರಿಬ್ಬರೂ ಏಕದಿನ ವಿಶ್ವಕಪ್‌ನಲ್ಲಿ 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಕೇವಲ ಮೂರು ಪಂದ್ಯಗಳನ್ನಾಡಿರುವ ಶಮಿ 14 ವಿಕೆಟ್ ಪಡೆದಿದ್ದಾರೆ. ಎರಡು ಬಾರಿ ಐದು-ವಿಕೆಟ್ ಹಾಲ್‌ಗಳು ಮತ್ತು ಒಂದು ಬಾರಿ ನಾಲ್ಕು-ವಿಕೆಟ್ ಪಡೆದಿದ್ದಾರೆ.

ಸೆಮಿಫೈನಲ್‌ ಹಂತ ತಲುಪಿದ ಭಾರತ

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. 358 ರನ್‌ಗಳ ಗುರಿ ಪಡೆದ ಲಂಕಾ 55 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಬೌಲರ್‌ಗಳಲ್ಲಿ ಶಮಿ ಅವರೊಂದಿಗೆ ಸಿರಾಜ್ ಮೂರು ವಿಕೆಟ್ ಪಡೆದರೆ, ಬುಮ್ರಾ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page