Wednesday, March 12, 2025

ಸತ್ಯ | ನ್ಯಾಯ |ಧರ್ಮ

ಮಾಲಿನ್ಯದ ಕಪಿಮುಷ್ಟಿಯಲ್ಲಿ ಭಾರತೀಯರು, ಟಾಪ್ 20 ಮಲಿನ ನಗರಗಳಲ್ಲಿ 13 ನಗರಗಳು ಭಾರತದಲ್ಲಿ: ವರದಿ

ವಿಶ್ವಾದ್ಯಂತ ವಾಯು ಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ (IQAir) ಇತ್ತೀಚೆಗೆ ಬಿಡುಗಡೆ ಮಾಡಿದ 2024 ರ ವಿಶ್ವ ವಾಯು ಗುಣಮಟ್ಟದ ವರದಿಯ ಪ್ರಕಾರ ಅಸ್ಸಾಂನ ಬೈರ್ನಿಹತ್ ನಗರವು ಭಾರತದ ಅತ್ಯಂತ ಕಲುಷಿತ ನಗರವೆಂದು ಗುರುತಿಸಲಾಗಿದೆ.

ಈ ವರದಿಯ ಪ್ರಕಾರ, ಭಾರತವು ವಿಶ್ವದ ಐದನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದಾದ್ಯಂತ ನಗರಗಳಲ್ಲಿ ಅತಿ ಹೆಚ್ಚಿನ ಮಟ್ಟದ ಸೂಕ್ಷ್ಮ ಧೂಳಿನ ಕಣಗಳು, PM2.5 ದಾಖಲಾಗಿವೆ. 2024 ರಲ್ಲಿ, ಭಾರತದಲ್ಲಿ ಈ PM2.5 ಮಟ್ಟಗಳು 7% ರಷ್ಟು ಕಡಿಮೆಯಾಗಿದೆ. 2023 ರಲ್ಲಿ 54.4 ಮೈಕ್ರೋಗ್ರಾಂಗಳಷ್ಟಿದ್ದ ಈ ಮಟ್ಟವು 2024 ರಲ್ಲಿ 50.6 ಮೈಕ್ರೋಗ್ರಾಂಗಳಿಗೆ ಇಳಿದಿದೆ.

ಐಕ್ಯೂಏರ್ ವರದಿಯ ಪ್ರಕಾರ, 2024 ರಲ್ಲಿ ಭಾರತವು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ 5 ನೇ ಸ್ಥಾನದಲ್ಲಿದೆ. ಚಾಡ್ ಮೊದಲ ಸ್ಥಾನದಲ್ಲಿ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿ, ಪಾಕಿಸ್ತಾನ ಮೂರನೇ ಸ್ಥಾನದಲ್ಲಿ ಮತ್ತು ಕಾಂಗೋ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೆ, ಭಾರತದ ರಾಜಧಾನಿ ನವದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ನಗರವಾಗಿದೆ. 2024 ರಲ್ಲಿ ದೆಹಲಿಯಲ್ಲಿ ಸರಾಸರಿ ವಾರ್ಷಿಕ PM2.5 ಮಟ್ಟವು 91.6 ಮೈಕ್ರೋಗ್ರಾಂಗಳಲ್ಲಿ ದಾಖಲಾಗಿತ್ತು. 2023 ರಲ್ಲಿ ದಾಖಲಾದ 92.7 ಮೈಕ್ರೋಗ್ರಾಂಗಳಿಗೆ ಹೋಲಿಸಿದ ಸ್ವಲ್ಪ ಸುಧಾರಣೆಯಾಗಿದೆ.

ವಿಶ್ವದ ಅಗ್ರ 20 ಅತ್ಯಂತ ಕಲುಷಿತ ನಗರಗಳಲ್ಲಿ 13 ಭಾರತದಲ್ಲಿವೆ. ಇವುಗಳಲ್ಲಿ ಬರ್ನಿಹತ್, ದೆಹಲಿ, ಮುಲ್ಲನ್‌ಪುರ (ಪಂಜಾಬ್), ಫರಿದಾಬಾದ್, ಲೋನಿ, ನವದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ ಸೇರಿವೆ.

ಭಾರತದ 35% ನಗರಗಳು PM2.5 ಮಟ್ಟವನ್ನು WHO ಮಿತಿಗಿಂತ (5 ಮೈಕ್ರೋಗ್ರಾಂಗಳು) 10 ಪಟ್ಟು ಹೆಚ್ಚು ದಾಖಲಿಸಿವೆ. ವಾಯು ಮಾಲಿನ್ಯದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ ಸರಾಸರಿ 5.2 ವರ್ಷಗಳಷ್ಟು ಕಡಿಮೆಯಾಗುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. 2009 ರಿಂದ 2019 ರವರೆಗೆ ಪ್ರತಿ ವರ್ಷ 1.5 ಮಿಲಿಯನ್ ಸಾವುಗಳು PM2.5 ಮಾಲಿನ್ಯದಿಂದ ಉಂಟಾಗಿವೆ ಎಂದು ಜರ್ನಲ್‌ನಲ್ಲಿನ ಅಧ್ಯಯನವೊಂದು ತಿಳಿಸಿದೆ.

ವಾಹನಗಳ ಹೊರಸೂಸುವಿಕೆ, ಕೈಗಾರಿಕಾ ಹೊಗೆ ಮತ್ತು ಕಬ್ಬು ಅಥವಾ ಹುಲ್ಲನ್ನು ಸುಡುವುದು ಮುಂತಾದ ಅಂಶಗಳು PM2.5 ಮಟ್ಟವನ್ನು ಹೆಚ್ಚಿಸುತ್ತಿವೆ ಎಂದು ವರದಿ ಹೇಳುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page