ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಕೀನ್ಯಾದಲ್ಲಿ ಭೀಕರ ಬರಗಾಲ: ವೇಗವಾಗಿ ಅಳಿಯುತ್ತಿದೆ ಜೀವಜಾಲ

A

Anjani Shetty • ವಿದೇಶ, ವಿಶೇಷ

• 2 ನಿಮಿಷದ ಓದು

ಕೀನ್ಯಾದಲ್ಲಿ ಭೀಕರ ಬರಗಾಲ: ವೇಗವಾಗಿ ಅಳಿಯುತ್ತಿದೆ ಜೀವಜಾಲ

ಪೂರ್ವ ಆಫ್ರಿಕಾದ ಕೀನ್ಯಾ ದೇಶದಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿ ಸಾವಿರಾರು ಕಾಡುಪ್ರಾಣಿ ಪಕ್ಷಿಗಳು ದಾರುಣವಾಗಿ ಸಾವನ್ನಪುತ್ತಿರುವ ಆಘಾತಕಾರಿ ವಿದ್ಯಮಾನ ಜರುಗಿದೆ. ಕೀನ್ಯಾದ ಒಣ ಮತ್ತು ಅರೆಒಣ ಪ್ರದೇಶಗಳಲ್ಲಿ ತೀವ್ರ ಬರಗಾಲದ ಪರಿಣಾಮ ವ್ಯಾಪಕವಾಗಿದ್ದು 2022 ರ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಕನಿಷ್ಠ 1,235 ಕಾಡು ಪ್ರಾಣಿಗಳು ಸಾವನ್ನಪ್ಪಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ.

ಕೀನ್ಯಾ ಸೇರಿದಂತೆ ನೆರೆಯ ಇಥಿಯೋಪಿಯಾ, ಸೋಮಾಲಿಯಾಗಳಲ್ಲಿ  ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಮಳೆ ಕೈಕೊಟ್ಟಿದೆ. ಪರಿಣಾಮವಾಗಿ  ದೀರ್ಘಕಾಲದ ಒಣಹವೆಯು 14 ವಿವಿಧ ಪ್ರಬೇಧದ ವನ್ಯಜೀವಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ತೀವ್ರ ಬರಗಾಲದಿಂದ ಪ್ರಾಣಿಗಳಿಗೆ ತಿನ್ನಲು ಆಹಾರ ಸಂಪನ್ಮೂಲಗಳ  ಕೊರತೆ ಉಂಟಾಗಿರುವುದಲ್ಲದೇ ಕುಡಿಯಲು ನೀರೂ ಸಹ ಸಿಗದೆ ಅನೇಕ ವನ್ಯ ಜೀವಿಗಳು ಸಾವನ್ನಪ್ಪಿರುವ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಭಾಗದಲ್ಲಿನ ಜನಜೀವನದ ಮೇಲೂ ತೀವ್ರ ಪರಿಣಾಮಗಳು ಉಂಟಾಗಿವೆ.

ನ.04ರಂದು ಬಿಡುಗಡೆಯಾದ ಅಧಿಕೃತ ವರದಿಯ ಪ್ರಕಾರ, ಬರಗಾಲದಿಂದಾಗಿ 512 ಗಡ್ಡದ ಹುಲ್ಲೆಗಳು (ವೈಲ್ಡ್‌ಬೀಸ್ಟ್‌ ಅಥವಾ ಸ್ವಾಹಿಲಿ ಭಾಷೆಯಲ್ಲಿ ‘ನು’ (gnu) ಎನ್ನಲಾಗುತ್ತದೆ), 381 ಕಾಮನ್‌ ಜೀಬ್ರಾಗಳು, 205 ಆನೆಗಳು, 49 ಗ್ರೆವ್ವಿ ಜೀಬ್ರಾಗಳು, 51  ಕಾಡೆಮ್ಮೆಗಳು, 12 ಜಿರಾಫೆಗಳು, 8 ನೀರಾನೆಗಳು, 6 ಎಲ್ಯಾಂಡ್ಗಳು (ಕೃಷ್ಣಮೃಗ ಪ್ರಭೇದಕ್ಕೆ ಸೇರಿದವು), 6 ಕೊಂಗೋನಿ, 2 ಗ್ರಾಂಟ್ ಗೆಜೆಲ್ಲೆ (ಒಂದು ಬಗೆಯ ಹುಲ್ಲೆ), ತಲಾ ಒಂದೊಂದು ಉಷ್ಟ್ರಪಕ್ಷಿ, ಖಡ್ಗಮೃಗ ಮತ್ತು ವಾಟರ್ ಬಕ್ ಸಾವನ್ನಪ್ಪಿರುವ ಮಾಹಿತಿ ನೀಡಿದ್ದಾರೆ.

ಮುಂಬರುವ ಕೆಲವೇ ದಿನಗಳಲ್ಲಿ ವನ್ಯಪ್ರಾಣಿಗಳ ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದ್ದು ಆತಂಕದ ವಾತಾವರಣ ಉಂಟಾಗಿದೆ.

ʼಆನೆಗಳು ದಿನಕ್ಕೆ 240 ಲೀಟರ್ (63.40 ಗ್ಯಾಲನ್) ನೀರನ್ನು ಕುಡಿಯುತ್ತವೆ. ಆದರೆ ಇದೀಗ ಬರದ ಕಾರಣದಿಂದ ಆನೆಗಳಿಗೆ ಕುಡಿಯಲು ನೀರು ಸಿಗದಾಗಿದೆʼ ಎನ್ನುತ್ತಾರೆ ಎಲಿಫೆಂಟ್ ನೈಬರ್ಸ್ ಸೆಂಟರಿನ ಕಾರ್ಯನಿರ್ವಾಹಕ ಹಾಗೂ ನಿರ್ದೇಶಕರಾದ ಜಿಮ್ ಜಸ್ಟಸ್ ನ್ಯಾಮು. ಉತ್ತರ ಕೀನ್ಯಾದ ಅಂಬೋಸೆಲಿ, ಲೈಕಿಪಿಯಾ ಮತ್ತು ಸಂಬೂರು ಕೌಂಟಿಗಳಲ್ಲಿನ ಆನೆಗಳು ಬರದಿಂದ ಹೆಚ್ಚು ಬಾಧಿತವಾಗಿದ್ದು, ಸುಮಾರು 70ಕ್ಕೂ ಹೆಚ್ಚು ಆನೆಗಳು ದಾರುಣ ಸಾವು ಕಂಡಿವೆ.

ಕೀನ್ಯಾದಲ್ಲಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿದ್ದ ರಾಷ್ಟ್ರೀಯ ಉದ್ಯಾನಗಳಲ್ಲಿ ಬಹಳಷ್ಟು ಪ್ರಾಣಿಗಳು ಸಾವನ್ನಪ್ಪಿವೆ. ಅಂಬೊಸೇಲಿ, ಸಾವೊ, ಲೈಕಿಪಿಯಾ ಸಂಬೂರುಗಳ ರಾಷ್ಟ್ರೀಯ ಉದ್ಯಾನಗಳಲ್ಲಿ ಹೆಚ್ಚು ಪ್ರಾಣಿಗಳು ಸತ್ತಿರುವ ವರದಿಯಾಗಿದೆ. ಒಣಹವೆಯು ಖಡ್ಗಮೃಗಗಳ ಸಂತತಿಯ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲಎಂದು ವರದಿ ತಿಳಿಸಿದೆ.

ʼಗ್ರೆವಿಯ ಜೀಬ್ರಾ ಮತ್ತು ನೀರಾನೆಯಂತಹ ಬರ ಪೀಡಿತ ಪ್ರದೇಶಗಳಲ್ಲಿರುವ ಪ್ರಭೇದಗಳಿಗೆ ಸರ್ಕಾರವು ಹುಲ್ಲನ್ನು ಒದಗಿಸುತ್ತಿದೆ. ಸಂರಕ್ಷಿತ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ನೀರಿನ ಟ್ರಕ್ಕಿಂಗ್, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡಲು, ಸಂರಕ್ಷಿತ ಪ್ರದೇಶಗಳ ಹೊರಗಿನ ವನ್ಯಜೀವಿಗಳಿಗೆ ಹೆಚ್ಚಿನ ಕಣ್ಗಾವಲು ಮತ್ತು ಬರದ ಪರಿಣಾಮಗಳನ್ನು ಕಡಿಮೆ ಮಾಡಲು ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತಿದೆʼ ಎಂದು ಪ್ರವಾಸೋದ್ಯಮ, ವನ್ಯಜೀವಿ ಮತ್ತು ಪರಂಪರೆಯ ಕ್ಯಾಬಿನೆಟ್ ಕಾರ್ಯದರ್ಶಿ ಪೆನಿನಾಹ್ ಮಲೋಂಜಾರವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೀನ್ಯಾದ ಹುಲ್ಲುಗಾವಲುಗಳಲ್ಲಿ ಪಶುಸಂಗೋಪನೆಯನ್ನೇ ಅವಲಂಬಿಸಿ ಬದುಕು ನಡೆಸುವ ಮಸಾಯಿ ಬುಡಕಟ್ಟಿನ ಜನರೂ ಸಹ ಈ ಬರಗಾಲದಿಂತ ತತ್ತರಿಸಿದ್ದಾರೆ. ಪಶುಸಂಗೋಪನೆಯನ್ನೇ ಈ ಸಮುದಾಯ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಈಗ ಬರದಿಂದ ಎಲ್ಲಾ ಸಾಕುಪ್ರಾಣಿಗಳೂ ಸಾಯುವ ಸ್ಥಿತಿಗೆ ಬಂದು ತಲುಪಿವೆ. ತಮ್ಮ ಸಾಕುಪ್ರಾಣಿಗಳನ್ನು ಉಳಿಸಿಕೊಳ್ಳಲಾಗದ ಹತಾಶ ಸ್ಥಿತಿಗೆ ಮಸಾಯಿ ಬುಡಕಟ್ಟು ಜನರು ಬಂದು ತಲುಪಿದ್ದಾರೆ ಎಂದು ವರದಿಗಳು ಹೇಳಿವೆ.

A

Anjani Shetty

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version