ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮೋದಿ ಪ್ರಶ್ನಿಸಿದ್ದಕ್ಕೆ ಪತ್ರಕರ್ತೆಗೆ ಕಿರುಕುಳ ; ಬಿಜೆಪಿ ಸಮರ್ಥಕರ ನಡೆ ಖಂಡಿಸಿದ ವೈಟ್ ಹೌಸ್

PPeepal Media Desk

Peepal Media Desk • ವಿದೇಶ

• 2 ನಿಮಿಷದ ಓದು

ಮೋದಿ ಪ್ರಶ್ನಿಸಿದ್ದಕ್ಕೆ ಪತ್ರಕರ್ತೆಗೆ ಕಿರುಕುಳ ; ಬಿಜೆಪಿ ಸಮರ್ಥಕರ ನಡೆ ಖಂಡಿಸಿದ ವೈಟ್ ಹೌಸ್

ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಭೇಟಿಯ ಪತ್ರಿಕಾಗೋಷ್ಠಿಯಲ್ಲಿ ಮೋದಿಗೆ ಪ್ರಶ್ನೆ ಕೇಳಿದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ, ಈಗ ಭಾರತದ ಬಲಪಂಥೀಯ ಪ್ರತಿಪಾದಕರ, ಬಿಜೆಪಿ ಹಾಗೂ ಮೋದಿ ಬೆಂಬಲಿಗರ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಬ್ರಿನಾ ಸಿದ್ದಿಕಿ ಅವರಿಗೆ ಮೋದಿ ಬೆಂಬಲಿಗರು ಕೊಡುತ್ತಿರುವ ತೀವ್ರವಾದ ಕಿರುಕುಳಕ್ಕೆ ಈಗ ಅಮೇರಿಕಾ ವೈಟ್ ಹೌಸ್ (White House) ಇದೊಂದು ಸ್ವೀಕಾರಾರ್ಹ ಬೆಳವಣಿಗೆ ಅಲ್ಲ ಎಂದು ಖಂಡನೆ ವ್ಯಕ್ತಪಡಿಸಿದೆ.

ಜೂನ್ 23 ರಂದು, ಅಮೇರಿಕಾದ ವೈಟ್ ಹೌಸ್ ನಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಅತ್ಯಂತ ಅಪರೂಪದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕೇವಲ 2 ಪ್ರಶ್ನೆಗಳನ್ನು ಎದುರಿಸಿದ್ದರು. ಅದರಲ್ಲಿ ಅಂತರಾಷ್ಟ್ರೀಯ ಮಾಧ್ಯಮವಾದ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ್ತಿ ಸಬ್ರಿನಾ ಸಿದ್ದಿಕಿ, ತನ್ನ ಪ್ರಶ್ನೆಯಲ್ಲಿ ‘ಹಲವಾರು ಮಾನವ ಹಕ್ಕುಗಳ ಗುಂಪುಗಳು ಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದೆ ಮತ್ತು ಅದರ ಬಗ್ಗೆ ಟೀಕಿಸುವವರ ಮೇಲೆ ಮೋದಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿವೆ. ಈ ಬಗ್ಗೆ ನಿಮ್ಮ ಸರ್ಕಾರದ ನಿಲುವೇನು.? ಅಲ್ಪಸಂಖ್ಯಾತರ ರಕ್ಷಣೆ ವಿಷಯದಲ್ಲಿ ನಿಮ್ಮ ಸರ್ಕಾರ ಯಾವ ನಿರ್ಧಾರ ತಗೆದುಕೊಂಡಿದೆ? ಎಂದು ಪ್ರಶ್ನಿಸಿ ಗಮನಸೆಳೆದಿದ್ದರು.

ಇದಕ್ಕೆ ನರೇಂದ್ರ ಮೋದಿ ಅಸಮರ್ಪಕವಾಗಿ ಉತ್ತರಿಸುವ ಮೂಲಕ ಹಲವರ ಟ್ರೋಲ್ ಗೆ ಗುರಿಯಾಗಿದ್ದರು. ಕೇಳಿದ ಪ್ರಶ್ನೆಗೆ ವ್ಯತಿರಿಕ್ತ ಉತ್ತರ ನರೇಂದ್ರ ಮೋದಿಯವರದಾಗಿತ್ತು. ಅದರಂತೆ ‘ಭಾರತೀಯ ಪ್ರಜಾಪ್ರಭುತ್ವ ಮತ್ತು ಇಲ್ಲಿನ ಜಾತ್ಯತೀತತೆಯ ಬಗ್ಗೆ ಭಾರತೀಯ ಪ್ರಜಾಪ್ರಭುತ್ವದ ಜಾತ್ಯತೀತ ಬೇರುಗಳನ್ನು’ ಸಮರ್ಥಿಸಿಕೊಂಡಿದ್ದರು. “ತಾರತಮ್ಯಕ್ಕೆ ನಮ್ಮಲ್ಲಿ ಜಾಗವಿಲ್ಲ ಮತ್ತು ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ, ಯಾವುದೇ ಮಾನವೀಯ ಮೌಲ್ಯಗಳು ಮತ್ತು ಮಾನವೀಯತೆ ಇಲ್ಲದಿದ್ದರೆ, ಮಾನವ ಹಕ್ಕುಗಳಿಗೆ ಅವಕಾಶವಿಲ್ಲ. ಮತ್ತು ಅದು ಪ್ರಜಾಪ್ರಭುತ್ವವೇ ಅಲ್ಲ” ಎಂದು ಅವರು ಉತ್ತರಿಸಿದ್ದರು.

ಪತ್ರಿಕಾಗೋಷ್ಠಿಯ ನಂತರ ಸಬ್ರಿನಾ ಸಿದ್ದಿಕಿ ಭಾರತದ ಹಿಂದುತ್ವ ಪ್ರತಿಪಾದಕರ, ಬಿಜೆಪಿ ಪಕ್ಷದ ಸದಸ್ಯರ ವ್ಯಾಪಕ ಟೀಕೆಗೆ ಒಳಗಾದರು. ಕೆಲವರಂತೂ ‘ಸಿದ್ದಿಕಿ ಒಬ್ಬ ಪಾಕಿಸ್ತಾನಿ ಏಜೆಂಟ್, ಪಾಕಿಸ್ತಾನದ ಪೋಷಕರ ಮಗಳು’ ಎಂಬಂತೆ ಟೀಕೆ ನಡೆಸಿದ್ದಾರೆ. ಇಸ್ಲಾಮಿಕ್ ಹಕ್ಕುಗಳ ಪ್ರತಿನಿಧಿಸಿದ ಕಾರಣಕ್ಕಾಗಿಯೇ ನೇರವಾಗಿ ಈ ಟೀಕೆ ಎಂಬುದನ್ನು ಹಿಂದುತ್ವದ ಪ್ರತಿಪಾದಕರು, ಮೋದಿ ಮತ್ತು ಬಿಜೆಪಿ ಬೆಂಬಲಿತರು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ ನಾನು ಭಾರತದ ಬಗ್ಗೆ ಅಭಿಮಾನ ಹೊಂದಿರುವಳು, ಭಾರತದ ಕ್ರಿಕೆಟ್ ತಂಡಕ್ಕೆ ನನ್ನ ಪ್ರೋತ್ಸಾಹ ಇತ್ತು ಎಂಬಂತೆ ನಾನಾ ರೀತಿಯಲ್ಲಿ ಸಿದ್ದಿಕಿ ತನ್ನ ನಿಲುವನ್ನು ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೇ ವಿಚಾರವಾಗಿ ಸೋಮವಾರ, ಅಮೇರಿಕಾದ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್ ನ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕೋಆರ್ಡಿನೇಟರ್ ಜಾನ್ ಕಿರ್ಬಿಯನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ಹೊಂದಿದ ದೇಶದ ಒಬ್ಬ ನಾಯಕನಿಗೆ ಪ್ರಶ್ನೆ ಕೇಳಿದ ಮಾತ್ರಕ್ಕೆ ಸಿದ್ದಿಕಿ ಅವರಂತಹ ಪತ್ರಕರ್ತರು ಎದುರಿಸಿರುವ ಟೀಕೆಯ ಕುರಿತು ಪತ್ರಕರ್ತರ ಪ್ರತಿಕ್ರಿಯೆಗಾಗಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಾನ್ ಕಿರ್ಬಿ “ಇದು ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಮತ್ತು ಯಾವುದೇ ಸಂದರ್ಭದಲ್ಲೂ ಪತ್ರಕರ್ತರಿಗೆ ಯಾವುದೇ ರೀತಿಯ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.

https://twitter.com/DiscourseDancer/status/1673539090887897088?t=J3PeLc23nTpZFfua-HGT3w&s=19

ಪತ್ರಿಕಾ ಸ್ವಾತಂತ್ರ್ಯಕ್ಕೆ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಕೂಡಾ ಹೇಳಿದ್ದಾರೆ. “ಪತ್ರಕರ್ತರು ಅಥವಾ ತಮ್ಮ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿರುವ ಯಾವುದೇ ಪತ್ರಕರ್ತರಿಗೆ ಬೆದರಿಕೆ ಅಥವಾ ಕಿರುಕುಳ ನೀಡುವ ಯಾವುದೇ ಪ್ರಯತ್ನಗಳನ್ನು ನಾವು ಖಡಾಖಂಡಿತವಾಗಿ ಖಂಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಮಂಗಳವಾರ ಪತ್ರಿಕಾ ಕಾರ್ಯದರ್ಶಿಯ ಹೇಳಿಕೆಯ ವೀಡಿಯೊವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಂಚಿಕೊಂಡಿದ್ದು, ‘ಮೋದಿಗೆ ಪ್ರಶ್ನೆ ಕೇಳಿದ್ದಕ್ಕಾಗಿ ಮಹಿಳಾ ಪತ್ರಕರ್ತೆಯೊಬ್ಬರಿಗೆ ಕಿರುಕುಳ ನೀಡಿರುವುದು ದುರದೃಷ್ಟಕರ’ ಎಂದು ಹೇಳಿದೆ. ‘ಸಬ್ರಿನಾ ಸಿದ್ದಿಕಿ ಕೇಳಿದ ಈ ಒಂದು ಪ್ರಶ್ನೆಯು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಬಿಜೆಪಿಯ ಪೊಳ್ಳು ಹಕ್ಕುಗಳನ್ನು ಹೊರಹಾಕಿದೆ’ ಎಂದು ಪಕ್ಷವು ಸೇರಿಸಿದೆ.

ಜೂನ್ 24 ರಂದು, ಸಬ್ರಿನಾ ಸಿದ್ದಿಕಿ ಆನ್‌ಲೈನ್ ಕಿರುಕುಳವನ್ನು ಎದುರಿಸಿದ ನಂತರ ದಕ್ಷಿಣ ಏಷ್ಯಾದ ಪತ್ರಕರ್ತರ ಸಂಘವೂ ಸಹ ಈ ಘಟನೆಯನ್ನು ಖಂಡಿಸಿ, ಸಿದ್ದಿಕಿ ಅವರಿಗೆ ಬೆಂಬಲ ಸೂಚಿಸಿದೆ. “ನಮ್ಮ ಸಹೋದ್ಯೋಗಿ ಸಬ್ರಿನಾ ಸಿದ್ದಿಕಿ ಅವರಿಗೆ ನಾವು ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ಅವರಂತೆ ಅನೇಕ ದಕ್ಷಿಣ ಏಷ್ಯಾದ ಪತ್ರಕರ್ತರು ಮತ್ತು ಮಹಿಳಾ ಪತ್ರಕರ್ತರು ತಮ್ಮ ಕೆಲಸವನ್ನು ನಿರ್ವಹಿಸಿದ ಕಾರಣಕ್ಕೆ ಕಿರುಕುಳವನ್ನು ಅನುಭವಿಸುತ್ತಿದ್ದಾರೆ” ಎಂದು ಅಸೋಸಿಯೇಷನ್ ​​ಹೇಳಿದೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ನೈಜ ಪತ್ರಕರ್ತರು ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಂತಿದೆ. ಮೋದಿ ಅಮೇರಿಕಾ ಭೇಟಿ ಇಂತಹ ಭಾರತದಲ್ಲಿ ಪ್ರಜಾಪ್ರಭುತ್ವದ ಮುಖವಾಡ ಹೊತ್ತ ಸರ್ವಾಧಿಕಾರಿ ಧೋರಣೆಯನ್ನು ಪ್ರಪಂಚದಾದ್ಯಂತ ಹೊರಹಾಕಲು ದಾರಿಯಾದಂತಾಗಿದೆ.

ವಿಷಯಗಳು: #peepal #peepalmedia #politics #usa
PPeepal Media Desk

Peepal Media Desk

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು