Monday, November 18, 2024

ಸತ್ಯ | ನ್ಯಾಯ |ಧರ್ಮ

ಝಾನ್ಸಿ ಬೆಂಕಿ ಅವಘಡ: ಹತ್ತು ಮಕ್ಕಳನ್ನು ಆಸ್ಪತ್ರೆ ಬೆಂಕಿಯಿಂದ ರಕ್ಷಿಸಿ, ತನ್ನ ಮಕ್ಕಳ ಸುಟ್ಟ ದೇಹವನ್ನೇ ಗುರುತಿಸಲಾಗದೆ ಅಸಹಾಯಕನಾಗಿ ನಿಂತ ತಂದೆ

ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತು ಶಿಶುಗಳನ್ನು ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ. ಆದರೆ ತನ್ನ ಅವಳಿ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲಿ ಅವರಿಗೆ ಸಾಧ್ಯವಾಗಲಿಲ್ಲ. ಬೆಂಕಿಯಲ್ಲಿ ಸುಟ್ಟು ಕರಕಾಲಗಿದ್ದ ಮಕ್ಕಳ ನಡುವೆ ತನ್ನ ಮಕ್ಕಳನ್ನು ಗುರುತಿಸಲು ಸಾಧ್ಯವಾಗದೆ ಅವರು ಅಸಹಾಯಕರಾಗಿ ನಿಂತಿದ್ದರು.

ಉತ್ತರ ಪ್ರದೇಶದ ಝಾನ್ಸಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 10.45ರ ಸುಮಾರಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ 10 ನವಜಾತ ಶಿಶುಗಳು ಸಾವನ್ನಪ್ಪಿವೆ. ಇನ್ನೂ 16 ಶಿಶುಗಳು ಗಂಭೀರವಾಗಿ ಗಾಯಗೊಂಡಿವೆ. ಅವರಲ್ಲಿ ಹಲವು ಮಕ್ಕಳು ಅಕಾಲಿಕವಾಗಿ ಜನಿಸಿದ್ದರು.

ಇದೇ ವೇಳೆ ಮಕ್ಕಳ ವಾರ್ಡ್ ನ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಯಾಕೂಬ್ ಮನ್ಸೂರಿ ಬೆಂಕಿಯಿಂದ ವಿಚಲಿತರಾಗಿದ್ದರು. ಅವರು ತಕ್ಷಣ ಪ್ರತಿಕ್ರಿಯಿಸಿದರು. ಕಿಟಕಿ ಒಡೆದು ಕೆಲವು ನವಜಾತ ಶಿಶುಗಳನ್ನು ರಕ್ಷಿಸಿ ಹೊರ ತಂದರು. ಆದರೆ ತನ್ನ ಎರಡು ನವಜಾತ ಅವಳಿ ಹೆಣ್ಣು ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಯಾವ ಶಿಶುಗಳು ತನ್ನ ಮಕ್ಕಳು ಎಂದು ನೆನಪಿಲ್ಲದ ಕಾರಣ ಅವರು ದುಃಖದಿಂದ ಹೊರಬಂದರು. ಮತ್ತೊಂದೆಡೆ ಬೆಂಕಿಯಲ್ಲಿ ಸುಟ್ಟು ಕರಕಲಾದ ಮಕ್ಕಳ ವಾರ್ಡ್‌ನಲ್ಲಿ ಹಸುಳೆಗಳನ್ನು ಕಳೆದುಕೊಂಡ ತಾಯಂದಿರ ರೋದನ ಮೊಳಗುತ್ತಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page