Friday, June 13, 2025

ಸತ್ಯ | ನ್ಯಾಯ |ಧರ್ಮ

ಮಾಡುವುದನ್ನು, ಮಾಡಿದ್ದನ್ನು ನೆನಪಿನಲ್ಲಿಟ್ಟುಕೊಳುವುದೇ ಯೋಗ: ಡಾ.ಎಂಕೆ ನಾಗರಾಜರಾವ್

ಯಲಹಂಕ : ಮಾಡುವ ಕೆಲಸವನ್ನು ಸರಿಯಾಗಿ ಮಾಡುವುದು, ಮಾಡಿದ್ದನ್ನ ನೆನಪಿನಲ್ಲಿ ಇಟ್ಟುಕೊಳುವುದು ಅದನ್ನು ಹಾಗೆ ಉಳಿಸಿ,ಬೆಳೆಸಿಕೊಂಡು ಹೋಗುವ ಕೆಲಸವೇ ಯೋಗ ಎಂದು ಅಮೆರಿಕಾದ ಯೋಗ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಯೋಗ ಆಚಾರ್ಯದ ಮುಖ್ಯಸ್ತ ಡಾ ಎಂ ಕೆ ನಾಗರಾಜರಾವ್ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಯಲಹಂಕದ ಆರ್ಮಿ ಪೊಲೀಸ್ ತರಬೇತಿ ಶಾಲೆಯಲ್ಲಿ ಯೋಗ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಪ್ರತಿನಿತ್ಯ ಮಾಡುವ ಕೆಲಸ ಅಚ್ಚುಕಟ್ಟಾಗಿ ಮಾಡಬೇಕು ಆಗ ಮನಸ್ಸು, ಆರೋಗ್ಯ ಎರಡು ಸರಿಯಾಗಿರುತ್ತವೆ ಎಂದರು. ಯೋಗ ಎಂದರೆ ಮನಸ್ಸನ್ನು  ಎಲ್ಲಿಯು ಕದಲದಂತೆ ಬಿಗಿಯಾಗಿ ಇಟ್ಟುಕೊಳುವುದು ಎಂದು ಕರೆಯುತ್ತಾರೆ. ಕೇವಲ ದ್ಯಹಿಕ ಆರೊಗ್ಯ ವಲ್ಲದೆ ಮಾನಸಿಕ ಆರೋಗ್ಯ ಸರಿಯಾಗಿ ನೋಡಿಕೊಳುವುದು ಇಂದಿನ ಕಾಲಘಟ್ಟಕ್ಕೆ ಪ್ರಸ್ತುತವಾಗಿದೆ ಎಂದು ಜನರಿಗೆ ತಿಳಿ ಹೇಳಿದರು.

ಜ್ನಾನಯೋಗಿ ಸಿದ್ದೇಶ್ವರ ಸ್ವಾಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಯೋಗ ವೈದ್ಯ ಡಾ ಮಯೂರ್ ವಿನಯ್ ಕುಮಾರ್ ಕಾಕು ಮಾತನಾಡಿ, ಸಮಾಜದಲ್ಲಿ ಯಾರು ಸಹಾ ರೋಗಿಗಳೇ ಆಗಬಾರದು ಎಂಬುದು ಅದು ಯೋಗದ ಗುಟ್ಟು,  ಯೋಗ ಎರಡು ರೀತಿಯಲ್ಲಿ ಕೆಲಸಮಾಡುತ್ತದೆ ಅದು ಮಾನಸಿಕ ಹಾಗು ದ್ಯಹಿಕ ವಾಗಿ ಕೆಲಸ ಮಾಡುತ್ತದೆ ಎಂದರು. ಯೋಗ ಮೂಲಕ ಮನಸ್ಸನ್ನು ಸದ್ರುಡವಾಗಿ ಯಾರು ಇಟ್ಟುಕೊಳುತ್ತಾರೋ ಅಲ್ಲಿ ನೆಮ್ಮದಿ ಸಿಗುತ್ತದೆ. ದೇಹಕ್ಕೂ ಮನಸ್ಸಿಗು ಒಂದಕ್ಕೊಂದು ಸಂಬಂಧವಿದೆ ಅದು ಯೋಗದಲ್ಲಿ. ಮಾನಸಿಕ ಆರೊಗ್ಯ ಇಡೀ ದೆಹಕ್ಕೆ ಬಹಳ ಮುಖ್ಯವಾಗಿ ಬೇಕಾಗುತ್ತದೆ ಎಂದರು.

ಕಾರ್ಯಕ್ರಮವನ್ನು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿತ್ತು,
ಒಂದು ಭೂಮಿ ಒಂದು ಆರೋಗ್ಯ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್ಮಿ ಪೊಲೀಸ್ ತರಬೇತಿ ಶಾಲೆಯ ಎಸ್ ಪಿ ಹಾಗು ಪ್ರಾಚಾರ್ಯರಾದ ಎಸಿ ಮಂಜುನಾಥ, ಅತಿಥಿಗಳಾಗಿ ಆರ್ಮಿ ಶಾಲೆಯ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದೇಶ್ ಹೆಚ್ಆರ್ , ಯೋಗ ಶಿಕ್ಷಕ ಕೆ ನಂದ ಕಿಶೋರ್ , ನೋಡಲ್ ಅಧಿಕಾರಿ ರವಿಶಂಕರ್ ಜೆಎಂ, ರೋಟರಿ ಬೆಂಗಳೂರು ಗ್ಲೋಬಲ್ ಯೋಗದ ನಿರ್ದೇಶಕ  ಶರತ್ ಕುಮಾರ್, ಕಾರ್ಯಕ್ರಮದ ಉಸ್ತುವಾರಿ ಡಾ.ವಿನಯ್ ಕುಮಾರ್, ಡಾ.ವಿನಯ್ ಕುಮಾರ್  ಸೇರಿ ಸಾಕಷ್ಟು ಚಿಂತಕರು ಮಾನಸಿಕ ಆರೋಗ್ಯದಲ್ಲಿ ಯೋಗದ ಪಾತ್ರದ ಕುರಿತು ಮಾತನಾಡಿದರು.  ನೂರಾರು ಆರ್ಮಿ ಯೋಗಾ ಶಿಕ್ಷಕರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page