Home ದೇಶ ಸುದ್ದಿಗಳನ್ನು ಮುಚ್ಚಿಡುವ ಮೂಲಕ ಸಮಸ್ಯೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ – ಬಿಜೆಪಿ ಸಮರ್ಥಕ ಜಿಡಿ ಭಕ್ಷಿ

ಸುದ್ದಿಗಳನ್ನು ಮುಚ್ಚಿಡುವ ಮೂಲಕ ಸಮಸ್ಯೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ – ಬಿಜೆಪಿ ಸಮರ್ಥಕ ಜಿಡಿ ಭಕ್ಷಿ

0

ಒಂದು ಕಾಲದ ಬಿಜೆಪಿ ಹಾಗೂ ಮೋದಿ ಸಮರ್ಥಕ ಜನರಲ್‌ ಜಿಡಿ ಭಕ್ಷಿಯವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸುದ್ದಿಗಳನ್ನು ಮುಚ್ಚಿಡುವ ಮೂಲಕ ನೀವು ಸಮಸ್ಯೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಲಡಾಖ್‌ ವಿಷಯದಲ್ಲಿ ಮೋದಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಮಾಧ್ಯಮಗಳಲ್ಲಿ ಅದರ ಸುದ್ದಿಯನ್ನು ಬ್ಲಾಕ್‌ ಔಟ್‌ ಮಾಡುವ ಮೂಲಕ ಅದೊಂದು ಸಮಸ್ಯೆಯೇ ಅಲ್ಲವೆನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಲಡಾಖ್‌ ಪ್ರದೇಶಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂದು ಸೋನಮ್‌ ವಾಂಗ್‌ ಚುಕ್‌ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಭಕ್ಷಿ ಈ ಹೇಳಿಕೆ ನೀಡಿದ್ದರು. ಒಂದು ಕಾಲದಲ್ಲಿ ಈ ಸೋನಮ್‌ ವಾಂಗ್‌ ಚುಕ್‌ ಕೂಡಾ ಬಿಜೆಪಿ ಹಾಗೂ ಮೋದಿ ಸಮರ್ಥಕರಾಗಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಇದೇ ವಾಂಗ್‌ ಚುಕ್‌ ಆರ್ಟಿಕಲ್‌ 370 ತೆಗೆದು ಹಾಕುವಿಕೆಯನ್ನು ಸಮರ್ಥಿಸಿಕೊಂಡಿದ್ದರು ಎನ್ನುವುದನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು.

ಲಡಾಖ್‌ ವಿಷಯದ ಕುರಿತು ಸ್ಥಳೀಯ ಮಾಧ್ಯಮವೊಂದರ ಜೊತೆಯಲ್ಲಿ ಮಾತನಾಡಿದ್ದು, “ಲಡಾಖ್‌ ಒಂದು ಸೂಪರ್‌ ಸೆನ್ಸಿಟಿವ್‌ ಪ್ರದೇಶವಾಗಿದ್ದು, ಇದು ಚೀನಾಕ್ಕೆ ಹತ್ತಿರದಲ್ಲಿರುವ ಕಾರಣ ಅಲ್ಲಿನ ಸಮಸ್ಯೆಗಳನ್ನು ಆದ್ಯತೆಯಿಂದ ಪರಿಹರಿಸಬೇಕು. ಅದನ್ನು ಬಿಟ್ಟು ಅವರು ಅಷ್ಟು ದಿನ ಉಪವಾಸ ಕುಳಿತರು ಅವರನ್ನು ಮಾತನಾಡಿಸದೆ ಇರುವುದು ಸರಿಯಲ್ಲ” ಎಂದು ಅವರು ಹೇಳಿದ್ದರು.

ಹಲವು ಬೇಡಿಕೆಗಳೊಂದಿಗೆ ವಾಗ್‌ಚುಕ್‌ ಕೆಲವು ದಿನಗಳ ಹಿಂದೆ ಇಪ್ಪತ್ತೊಂದು ದಿನಗಳ ಕಾಲ ಉಪವಾಸ ಕುಳಿತಿದ್ದರು.

ಲಡಾಖ್‌ ವಿಷಯದಲ್ಲಿ ಹಲವು ಬೇಡಿಕೆಗಳೊಂದಿಗೆ ಕೇಂದ್ರದ ವಿರುದ್ಧ ಮೆರವಣಿಗೆ ನಡೆಸುತ್ತಿರುವ ಲಡಾಖ್‌ ಜನರು. ಈ ಮೆರವಣಿಗೆಯ ನೇತೃತ್ವವನ್ನು ಸೋನಮ್‌ ವಾಂಗ್‌ ಚುಕ್‌ ವಹಿಸಿದ್ದಾರೆ.

ಕೇಂದ್ರವು ಈ ಪ್ರದೇಶದ ಬೇಡಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಚೀನಾಕ್ಕೆ ಆಕ್ರಮಿಸಲು ದಾರಿ ಮಾಡಿ ಕೊಡುತ್ತಿದೆ ಎಂದೂ ಭಕ್ಷಿ ಆರೋಪಿಸಿದ್ದಾರೆ.

You cannot copy content of this page

Exit mobile version