ಆನ್ಲೈನ್ ಬೆಟ್ಟಿಂಗ್ ಆಡಬೇಡ ಎಂದು ಹೆತ್ತ ತಾಯಿ ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಹೊರಪೇಟೆಯ ಯುವಕ ಟಿ.ಎಸ್ ಭರತ್ ಮೃತ ಯುವಕನಾಗಿದ್ದಾನೆ. ಭರತ್ ಕೆಲ ದಿನಗಳಿಂದ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಈ ಗೇಮ್ ನಲ್ಲಿ 20 ಸಾವಿರ ಹಣ ಹಾಕಿ ಕಳೆದುಕೊಂಡಿದ್ದನು. ಈ ವಿಚಾರ ಗೊತ್ತಾದಂತ ತಾಯಿಯು, ಇನ್ಮುಂದೆ ಆನ್ ಲೈನ್ ಗೇಮ್ ಆಡೋದು ಬೇಡ ಎಂಬುದಾಗಿ ಬುದ್ಧಿ ಹೇಳಿದ್ದಾರೆ.
ಈ ವಿಚಾರಕ್ಕಾಗಿ ಭರತ್ ಸಿಟ್ಟು ಮಾಡಿಕೊಂಡು ತಮ್ಮ ಹಳೆಯ ಹೆಂಚಿನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.