Home ರಾಜಕೀಯ ಯುವತಿಯರು ಜೀನ್ಸ್‌ ಪ್ಯಾಂಟ್‌, ಬ್ಲ್ಯೂ ಟಾಪ್‌ ಹಾಕಿಕೊಂಡಿದ್ದರು: ಹನಿಟ್ರ್ಯಾಪ್‌ ಕುರಿತು ರಾಜಣ್ಣ ಹೇಳಿಕೆ

ಯುವತಿಯರು ಜೀನ್ಸ್‌ ಪ್ಯಾಂಟ್‌, ಬ್ಲ್ಯೂ ಟಾಪ್‌ ಹಾಕಿಕೊಂಡಿದ್ದರು: ಹನಿಟ್ರ್ಯಾಪ್‌ ಕುರಿತು ರಾಜಣ್ಣ ಹೇಳಿಕೆ

0

ಬೆಂಗಳೂರು: ಎರಡು ಬಾರಿಯೂ ಸಹ ಬೇರೆಬೇರೆ ಹುಡುಗಿಯರು ನಮ್ಮ ಮನೆಗೆ ಬಂದಿದ್ದರು. ಎರಡು ಸಲ ಬಂದಾಗಲೂ ಹುಡುಗಿಯರು ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡಿದ್ದರು. ಅವರ ಜೊತೆ ಒಬ್ಬ ಹುಡುಗ ಇರುತ್ತಿದ್ದ ಎಂದು ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್‌ ಬಗ್ಗೆ ತಮ್ಮ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಇದೀಗ ಈ ಸಂಬಂಧ ಮತ್ತಷ್ಟು ವಿಚಾರಗಳನ್ನು ರಾಜಣ್ಣ ಮಂಗಳವಾರ ವರದಿಗಾರರ ಮುಂದೆ ಇಂದು ಹೇಳಿಕೊಂಡರು.

ಮನೆಗೆ ಬಂದಿದ್ದ ಯುವತಿಯರು ಹೈಕೋರ್ಟ್ ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ‘ಪರ್ಸನಲ್ಲಾಗಿ ನಿಮ್ಮ ಜತೆಗೆ ಕುಳಿತು ಬಹಳ ಮಾತನಾಡಬೇಕಿದೆ’ ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದರು.

ಅಪರಿಚಿತರು ಹನಿಟ್ರ್ಯಾಪ್‌ಗೆ ಪ್ರಯತ್ನಿಸಿದ್ದು, ನನ್ನ ಬಳಿ ಅದಕ್ಕೆ ಯಾವುದೇ ದಾಖಲೆಗಳು ಇಲ್ಲ. ನನ್ನ ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ. ಹಾಗಾಗಿ ಯಾವುದೇ ವಿಡಿಯೊ ದಾಖಲಾಗಿಲ್ಲ. ಮನೆಗೆ ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳು ಪ್ರಯತ್ನಿಸಿದೆ. ಯಾವುದೇ ಮಾಹಿತಿ ಸಿಕ್ಕಿಲ್ಲ. ಸಮಯ ಸಿಗದ್ದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಮಾಡಿ ದೂರು ನೀಡುತ್ತೇನೆ ಎಂದರು.

You cannot copy content of this page

Exit mobile version