Wednesday, June 19, 2024

ಸತ್ಯ | ನ್ಯಾಯ |ಧರ್ಮ

ಯುವಕನ ಅಂಗಾಂಗ ದಾನ: 9 ಜನರ ಬದುಕಿಗೆ ಬೆಳಗಾಗುತ್ತಿರುವ 27 ರ ಮದನ್

ಮೈಸೂರು : ಬೈಕ್‌ ಅಪಘಾತದಲ್ಲಿ ಮದನ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ಕುಟುಂಬಸ್ಥರು ಅಂಗಾಗಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಇದರಿಂದ ಆತನ ಅಂಗಾಂಗಗಳು 9 ಜನರ ಬದುಕಿಗೆ ಒಂದು ರೀತಿ ಬೆಳಕಾಗಲಿದೆ.

ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್‌ (27), ಕಾವೇರಿ ಆಸ್ಪತ್ರೆ ಬಳಿ ಬೈಕ್‌ ನಿಯಂತ್ರಣ ತಪ್ಪಿ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಅಪಘಾತದಲ್ಲಿ ಮದನ್‌ನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು ಎಂದು  ವೈದ್ಯರು ಹೇಳಿದ್ದಾರೆ. ಈ ಕಾರಣ ಮದನ್‌ ಕುಟುಂಬಸ್ಥರು ಅವನ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ.

ಮದನ್‌ನ ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್‌, ಕಾರ್ನಿಯಾ ಸೇರಿದಂತೆ ಹಲವು ಅಂಗಗಳನ್ನು ದಾನ ಮಾಡಿದ್ದಾರೆ. 27 ವರ್ಷದ ಮದನ್‌ ಅಂಗಾಗಗಳು ಸುಮಾರು 9 ಜನರಿಗೆ ಅಳವಡಿಸಬಹುದು ಎಂದು ತಿಳಿಸಲಾಗಿದೆ, ಮದನ್‌ 9 ಜನರ ಬಾಳಿಗೆ ಬೆಳಕಾಗಲಿದ್ದು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.  ಆತನ ಹೃದಯವನ್ನು ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನಿಸಲಾಗಿದೆ.

ಇದನ್ನೂ ನೋಡಿ : ವರ್ಣ ಮತ್ತು ಜಾತಿ ವ್ಯವಸ್ಥೆ ತೊಲಗಬೇಕು: ಮೋಹನ್‌ ಭಾಗವತ್

Related Articles

ಇತ್ತೀಚಿನ ಸುದ್ದಿಗಳು