Saturday, December 13, 2025

ಸತ್ಯ | ನ್ಯಾಯ |ಧರ್ಮ

ಜುಬೀನ್ ಗಾರ್ಗ್ ಸಾವು ಪ್ರಕರಣ | 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಗುವಾಹಟಿ: ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 3,500 ಪುಟಗಳ ಚಾರ್ಜ್‌ಶೀಟನ್ನು ಗುವಾಹಟಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಭಾರಿ ಭದ್ರತೆಯ ನಡುವೆ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶುಕ್ರವಾರ ಬೆಳಿಗ್ಗೆ ಈ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಲಾಯಿತು. ನಾಲ್ಕು ಟ್ರಕ್‌ಗಳಲ್ಲಿ ಈ ಚಾರ್ಜ್‌ಶೀಟನ್ನು ನ್ಯಾಯಾಲಯಕ್ಕೆ ತರಲಾಗಿದ್ದು, ಒಂಬತ್ತು ಸದಸ್ಯರನ್ನು ಒಳಗೊಂಡ ಎಸ್‌ಐಟಿ ತಂಡವು ಆರು ವಾಹನಗಳ ಬೆಂಗಾವಲು ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿತು.

ಈ ಪ್ರಕರಣದಲ್ಲಿ ಇದುವರೆಗೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, 300 ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ಜುಬೀನ್ ಗಾರ್ಗ್ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.

ನವೆಂಬರ್ 26 ರಂದು ವಿಧಾನಸಭೆಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಬಿಸ್ವಾಂತ ಶರ್ಮಾ, ಜುಬೀನ್ ಸಾವು ಆಕಸ್ಮಿಕವಾಗಿ ನಡೆದಿಲ್ಲ, ಅದು ಯೋಜನಾಬದ್ಧ ಕೊಲೆ ಎಂದು ಸ್ಪಷ್ಟಪಡಿಸಿದ್ದರು.

ಮತ್ತೊಂದೆಡೆ, ಸಿಂಗಾಪುರ್ ಪೊಲೀಸ್ ಫೋರ್ಸ್ (ಎಸ್‌ಪಿಎಫ್) ಕೂಡ ಜುಬೀನ್ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುತ್ತಿದೆ. ಈ ತನಿಖೆ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕಾಗಬಹುದು ಎಂದು ಎಸ್‌ಪಿಎಫ್ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page