Home ಅಂಕಣ BBL ಜಾಗತಿಕ ಸಮಸ್ಯೆಗಳು – ಕಳ್ಳುಬಳ್ಳಿ -10

BBL ಜಾಗತಿಕ ಸಮಸ್ಯೆಗಳು – ಕಳ್ಳುಬಳ್ಳಿ -10

0

ಬ್ರೆಜಿಲಿಯನ್ ಬಟ್ ಲಿಫ್ಟ್ ಅನ್ನುವ ಇದೊಂದು ನಿತಂಬ ದುಂಡಗಾಗಿಸುವ ಖಯಾಲಿ.  ದಕ್ಷಿಣ ಆಫ್ರಿಕಾ ದೇಶದ ಮಹಿಳೆಯರು ಸೇರಿದಂತೆ ವಿದೇಶಿ ಮಹಿಳೆಯರು ಅತಿಹೆಚ್ಚಾಗಿ ಈ BBL ಎಂಬ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.

ಆದರೆ ದಕ್ಷಿಣ ಆಫ್ರಿಕಾ ದೇಶೀಯರಿಗೆ ಈ BBL ಹುಚ್ಚು ಅತಿಯಾಗಿ ಕಾಡುತ್ತಿದೆ.  ಅವರು ಚಿಕನ್ ಬಟ್ಸ್ ಎಂದು ಸಹ ಕರೆಯುತ್ತಾರೆ.  ಮಹಿಳೆಯರು ತಮ್ಮ ನಿತಂಬಗಳನ್ನು ಅತಿಯಾಗಿ ಗುಂಡಗೆ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ.  ಇದೊಂದು ತರಹ ದೇಹದ ಆಕರ್ಷಣೆಯ ಪ್ರಮುಖ ಭಾಗವಾಗಿದೆ ಅನ್ನುವ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಇವರಲ್ಲಿ ಜಗತ್ಪ್ರಸಿದ್ಧ ಗಾಯಕಿಯರು, ನೃತ್ಯಗಾರ್ತಿಯರು ಸಹ ಇದ್ದಾರೆ. ಸಿಲಿಕಾನ್ ಬಟ್ಸ್ ಸಹ ಚರ್ಮದೊಳಗೆ ಸೇರಿಸುವ ಕ್ರಮ ಇದೆ.  ಸಿಲಿಕಾನ್ ಇಂಜೆಕ್ಷನ್ ಕೊಟ್ಟು ಬಟ್ಸ್ ಬೆಳೆದಿರುವಂತೆ ಮಾಡುವ ವೈದ್ಯಕೀಯ ಕ್ರಮ ಸಹ ದುಬಾರಿ ವೆಚ್ಚದಲ್ಲಿ ಲಭ್ಯವಿದೆ.

BBL ಆಸಕ್ತಿ ಇರುವ ಹೆಣ್ಣು ಮಗಳ ದೇಹದ ಕೊಬ್ಬನ್ನು ತೆಗೆದು ಆಕೆಯ ನಿತಂಬಗಳಿಗೆ ಏರಿಸುವ ವೈದ್ಯಕೀಯ ಚಿಕಿತ್ಸೆಯ ಕ್ರಮಕ್ಕೆ ೩ ಸಾವಿರದಿಂದ ೧೦ ಸಾವಿರ ಡಾಲರ್ ವೆಚ್ಚವಾಗುತ್ತದೆ.  ಅಂದರೆ ಇದೆಲ್ಲಾ ದುಬಾರಿ ದುಡ್ಡು ತೆತ್ತು ಮಾಡಿಕೊಳ್ಳುವ ಅದ್ವಾನ.

BBL ವಿಫಲಗೊಂಡು ಅನೇಕ ಮಹಿಳೆಯರು ಸಾವಿಗೀಡಾದ ಘಟನೆಗಳು ಸಹ ಇವೆ.  ಇನ್ನೂ ಅನೇಕ ಘಟನೆಗಳನ್ನು ಗಮನಿಸಿದಾಗ ನಿತಂಬಗಳು ಇಳಿದು ಬಿದ್ದು ನರಮಂಡಲದ ಮೇಲೆ ಭಾರಿ ತೂಕ ಬಿದ್ದ ಪರಿಣಾಮ ಹೃದಯದ ಒತ್ತಡ ಸಹ ಹೆಚ್ಚಾಗುತ್ತದೆ.  ನರಗಳು ತುಂಡಾದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಿದೆ.  ನೋವಿರುವ ಜಾಗದಲ್ಲಿ ಊತವೂ ಆಗಿ ಜೀವನ‌ ನರಕ ಸದೃಶ ಆದದ್ದಿದೆ.

BBL ತ್ವಚೆಯ ಮೇಲ್ಬಾಗದ ಬಣ್ಣ ಬದಲಾಯಿಸಿ ಬಿಡುತ್ತದೆ.  ಆ ಭಾಗವು ಊಹಿದಲಾರದಂತ ಅತಿಯಾದ ನೋವು ಕೊಡುತ್ತದೆ. 

ಸಿಲಿಕಾನ್ ಬಟ್ಸ್ ಅನ್ನು ಒಮ್ಮೆ ಸೇರಿಸಿದ ಮೇಲೆ ಅದನ್ನು ತೆಗೆದು ಹಾಕಲು ವೈದ್ಯಕೀಯ ವೆಚ್ಚ ೨ ಸಾವಿರದಿಂದ ೧೨ ಸಾವಿರ ಡಾಲರ್ ಆಗುವುದು. 

ಹೊಸದಾಗಿ ಇದೀಗ ಕಾಲೆಜಿನ್ ಇಂಜೆಕ್ಷನ್ ನೀಡಿ ಬಂಪ್ ಬೆಳೆಸುವ ಕ್ರಮವೂ ಜಾರಿಯಲ್ಲಿದೆ.  ಒಟ್ಟಿನಲ್ಲಿ ಹೇಳುವುದಾದರೆ ಇವೆಲ್ಲಾ ವಿಧಾನವೂ ಹೆಣ್ತನಕ್ಕೆ ಅಗತ್ಯವೇನೂ ಅಲ್ಲ.  ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇಂತಹ ವಿಪರೀತ ಚಿಕಿತ್ಸೆಗಳು

ಆರೋಗ್ಯದ ಸಮಸ್ಯೆಗಳನ್ನು ಸಹ ಹೊತ್ತು ತಂದಿವೆ.

ಚಿಕನ್ ಬಟ್ಸ್ ಶಾಟ್ಸ್ ಎನ್ನುವ ಮತ್ತೊಂದು ವಿಧಾನ ದಕ್ಷಿಣ ಆಫ್ರಿಕಾ ದೇಶೀಯ ಮಹಿಳೆಯರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.  ಇದನ್ನು ಮ್ಯಾಗಿ ಬಟ್ ಟ್ರಿಕ್ ಅಂತಲೂ ಕರೆಯುತ್ತಾರೆ.  ಚಿಕನ್  ದ್ರಾವಣವನ್ನು ಸಿದ್ದಪಡಿಸಿ ಅದನ್ನು ಗುದದ್ವಾರದ ಮೂಲಕ ಮಹಿಳೆಯರ ದೇಹಕ್ಕೆ ಸೇರಿಸುವ ಮೂಲಕ ಚಿಕನ್ ಬಟ್ಸ್ ವಿಧಾನ ನಡೆಸುತ್ತಾರೆ.  ಇದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ.

ದಕ್ಷಿಣ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಹೆಂಗಸರು ಸಣ್ಣದಾದ ದೇಹ ಹೊಂದಿರುವುದಕ್ಕೆ ಇಷ್ಟಪಡುವುದಿಲ್ಲ.  ಏಕೆಂದರೆ ಸಣಕಲಿ‌ ಎಂದು ಆಡಿಕೊಳ್ಳುವರಂತೆ.  ತುಂಬಿದ ತೊಡೆಗಳು ಮತ್ತು ಗುಂಡಾದ ನಿತಂಬಗಳನ್ನು ಹೊಂದಿರಲು ಮಹಿಳೆಯರಲ್ಲಿ ಕೆಲವರು ಆಸಕ್ತಿ ವಹಿಸುತ್ತಾರೆ.  ಹೀಗಾಗಿ ಈ ಎಲ್ಲಾ ಕೃತಕ ವಿಧಾನಗಳು ಸಹ ಮಹಿಳೆಯರಿಗೆ ಆರೋಗ್ಯದ ಸಮಸ್ಯೆಗಳನ್ನು ಹೊತ್ತು ತರುವಂತವೇ ಆಗಿವೆ.

ಮಹಿಳೆಯರು ಹುಟ್ಟಿದ ರೀತಿಯಲ್ಲಿ ಬದುಕು ನಡೆಸುವ ಅವಕಾಶ ಇಲ್ಲವೇ? ಎಂಬ ಮೂಲಭೂತ ಪ್ರಶ್ನೆ ಇಂತಹ ಸಮಸ್ಯೆಗಳನ್ನು ಕಂಡಾಗ ಕಾಡಿದ್ದಿದೆ.  ಈ ಎಲ್ಲಾ ಸವಾಲುಗಳನ್ನು ಸಹ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಲೇ ಇದ್ದಾರೆ.

ಇತ್ತೀಚೆಗೆ ರಿಹಾನಾ ಎಂಬ ಪಾಪ್ ಹಾಡುಗಾರ್ತಿ ಭಾರತಕ್ಕೆ ಬಂದು ಹಾಡಿ ಪಾಡಿ ಹೋದರು.  ಆದರೆ ಇವರಿಗೆ ಈ BBL ಖಯಾಲಿ ಇಲ್ಲದಿರುವುದು ಸಂತೋಷದ ವಿಚಾರ. 

ಇದೇ ರೀತಿ ಇತ್ತೀಚೆಗೆ ಹಾಲಿವುಡ್ ನಲ್ಲೇ  BBL ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಮಹಿಳೆಯರಿಗೆ ಬುದ್ದಿಮಾತು ಹೇಳಿದ್ದಾರೆ.  BBL ನಿಂತ ಸಾವಿಗೀಡಾದ ಮಹಿಳೆಯರ ಸಂಖ್ಯೆ ಹೆಚ್ಚೇ ಇರುವುದರಿಂದ ಹಾಲಿವುಡ್ ಸೆಲೆಬ್ರಿಟಿಗಳು ಈ ರೀತಿ ಸಾಮಾನ್ಯ ಮಹಿಳೆಯರಿಗೆ ಬಟ್ಸ್ ಮಾರ್ಪಾಡಿಗೆ ಒಳಗಾಗದಂತೆ ಬುದ್ದಿ ಹೇಳಿ ಮಾದರಿ ಎನಿಸುತ್ತಿದ್ದಾರೆ.  ಏಕೆಂದರೆ ಇವರಿಂದಲೇ ಅನೇಕ ಫ್ಯಾಷನ್ ಟ್ರೆಂಡ್ ಹುಟ್ಟುತ್ತವೆ. 

ಮಹಿಳೆಯ ವ್ಯಕ್ತಿತ್ವ ಹೊರಗಿನ ಮಾರ್ಪಾಡು ಮಾಡುವುದರಿಂದ ಬದಲಾಗುವುದಿಲ್ಲ.  ಬದಲಿಗೆ ಮಹಿಳೆಯರಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಅವಕಾಶ ಒದಗಿಸಿದಾಗ ಬದಲಾಗುತ್ತದೆ.

You cannot copy content of this page

Exit mobile version