ಯಲ್ಲಾಪುರ ಬಳಿ ಲಾರಿಯೊಂದು ಕಂದಕಕ್ಕೆ ಬಿದ್ದಿದ್ದು, ಈ ಘಟನೆಯಲ್ಲಿ ಹತ್ತು ಜನರು ಸಾವಿಗೀಡಾಗಿದ್ದಾರೆ.
ಇನ್ನೂ 15 ಜನರು ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳು ಹಣ್ಣು ವ್ಯಾಪಾರಕ್ಕಾಗಿ ಸವಣೂರಿನಿಂದ ಯಲ್ಲಾಪುರಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸವಣೂರು-ಹುಬ್ಬಳ್ಳಿ ಹೆದ್ದಾರಿಯಲ್ಲಿ ಅರಣ್ಯ ಪ್ರದೇಶದ ಮೂಲಕ ವಾಹನ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬೆಳಿಗ್ಗೆ 5.30 ರ ಸುಮಾರಿಗೆ, ಟ್ರಕ್ ಚಾಲಕ ಮತ್ತೊಂದು ವಾಹನಕ್ಕೆ ದಾರಿ ಮಾಡಿಕೊಡಲು ಪ್ರಯತ್ನಿಸುವಾಗ ವಾಹನದ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ ಎಂದು ವರದಿಯಾಗಿದೆ.
ಈ ಅಪಘಾತದಲ್ಲಿ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸ್ಥಳದ ವಿಡಿಯೋ ಇಲ್ಲಿದೆ.