ಕೇದಾರನಾಥಕ್ಕೆ 11 ಲಕ್ಷ ಯಾತ್ರಿಗಳು ಭೇಟಿ: ಹೊಸ ದಾಖಲೆಗೆ ಕಾರಣವಾದ ಜನಸಂದಣಿ

ಉತ್ತರಾಖಂಡ: 2019ರಲ್ಲಿ ಕೇದಾರನಾಥ ಧಾಮಕ್ಕೆ 10 ಲಕ್ಷ ಯಾತ್ರಿಗಳು ಭೇಟಿ ನೀಡಿದ್ದು ಅದು  ದಾಖಲೆಯಾಗಿತ್ತು. ಆದರೆ ಕಳೆದ 126 ದಿನಗಳಲ್ಲಿ ಹನ್ನೊಂದು ಲಕ್ಷ ಯಾತ್ರಾರ್ಥಿಗಳು ಧಾಮಕ್ಕೆ ಭೇಟಿ ನೀಡಿದ್ದು ಹಿಂದಿನ ದಾಖಲೆಯನ್ನು ಮುರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ವರ್ಷಗಳಿಂದ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೇದಾರನಾಥ ಯಾತ್ರೆಗೆ ತೊಂದರೆಯಾಗಿತ್ತು. ಆದರೆ ಈ ಬಾರಿ ಯಾವುದೇ ಅಡಚಣೆಯಿಲ್ಲದೆ ಯಾತ್ರೆಯನ್ನು ನಡೆಸಲಾಗುತ್ತಿದೆ. ಹಾಗಾಗಿ ಈ ಭೇಟಿಯಲ್ಲಿ ಯಾತ್ರಿಗಳು ಬಹು ಸಂಖ್ಯೆಯಲ್ಲಿ ಆಗಮಿಸಿದ್ದು ʼದಾಖಲೆಗೆ ಕಾರಣವಾಗಿದೆʼ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಹೇಳಿದರು.

ಆರಂಭಿಕ ಹಂತದಲ್ಲಿ ವಿಪರೀತ ಜನಸಂದಣಿಯಿಂದ ಸಮಸ್ಯೆಗಳು ಉಂಟಾಗಿದ್ದವು. ಸ್ವಚ್ಛತೆಯ ವ್ಯವಸ್ಥೆಯಲ್ಲಿಯೂ ಸ್ವಲ್ಪ ಕೊರತೆ ಇತ್ತು. ಹೀಗಾಗಿ ಐದು ನೂರಕ್ಕೂ ಹೆಚ್ಚು ನೈರ್ಮಲ್ಯ ಕಾರ್ಯಕರ್ತರು ರುದ್ರಪ್ರಯಾಗ್‌ ದಿಂದ ಕೇದಾರನಾಥದವರೆಗೆ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಈಗ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಲಾಗಿದೆ. ಆದ್ದರಿಂದ ಪ್ರಯಾಣಕ್ಕೆ ಸಂಬಂಧಿಸಿದ ಇಲಾಖೆಗಳು ತಮ್ಮ ಕೆಲಸದ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತಿವೆ ಎಂದರು.

ಧಾಮದಲ್ಲಿ ಯಾತ್ರಿಕರಿಗೆ ವಾಕಿಂಗ್ ಮಾರ್ಗ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು