Home ಬ್ರೇಕಿಂಗ್ ಸುದ್ದಿ ಪಾಕ್ ಸೇನೆಯ ಡ್ರೋನ್ ಕಾರ್ಯಾಚರಣೆ; 12 ಉಗ್ರರು ಹತ

ಪಾಕ್ ಸೇನೆಯ ಡ್ರೋನ್ ಕಾರ್ಯಾಚರಣೆ; 12 ಉಗ್ರರು ಹತ

0

ಪಾಕಿಸ್ತಾನದ ಭಯೋತ್ಪಾದಕರ ಜಾಡು ಹಿಡಿದ ಮೇಲೆ ಪಾಕ್ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ 12ಕ್ಕೂ ಅಧಿಕ ಉಗ್ರರು ಹಾಗೂ ಸ್ಥಳೀಯ ನಾಗರೀಕರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ದಾಳಿ ನಡೆದು ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನದ ಮರ್ಡನ್ ಜಿಲ್ಲೆಯ ಕಟ್‌ಲಂಗ್ ಎನ್ನುವ ಗುಡ್ಡ ಪ್ರದೇಶದಲ್ಲಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಶನಿವಾರ ಬೆಳಿಗ್ಗೆ ಉಗ್ರರ ನಿಗ್ರಹ ದಳ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಪ್ರಾಂತೀಯ ಸರ್ಕಾರ ಬಿಡಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ನಿರ್ದಿಷ್ಟ ಸ್ಥಳದಲ್ಲಿ ತಾಲಿಬಾನಿನ ಶಸ್ತ್ರಸಜ್ಜಿತ ಉಗ್ರರು ಅಡಗುದಾಣ ಹಾಗೂ ಸಾಗಣೆ ತಾಣವನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವ ಖಚಿತ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲದೆ ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿದ್ದ ಪ್ರಮುಖರನ್ನು ಕೊಲ್ಲಲಾಗಿದೆ ಎಂದು ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ ನಾಗರಿಕರಿಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

You cannot copy content of this page

Exit mobile version