ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 13 ಮಾವೋವಾದಿಗಳು ಶರಣಾಗಿದ್ದಾರೆ. ಶರಣಾದವರಲ್ಲಿ 8 ಮಂದಿ ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಮೇಲೆ 23 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕೇಂದ್ರವು ನಿಗದಿಪಡಿಸಿದ ನಿಯಮಗಳ ಪ್ರಕಾರ ಶರಣಾದ ಮಾವೋವಾದಿಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಶರಣಾದವರಲ್ಲಿ ಒಬ್ಬರಾದ ದೇವ್ ಮುಚಕಿ ಅಲಿಯಾಸ್ ಪ್ರಮೀಳಾ (21) ತಲೆಯ ಮೇಲೆ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಧಮ್ತಾರಿ-ಗರಿಯಾಬಂಧ್-ನುವಪಾಡಾ ವಿಭಾಗದ ಪ್ರದೇಶ ಸಮಿತಿ ಸದಸ್ಯ ಕೋಸಾ ಓಯಮ್ ಅಲಿಯಾಸ್ ರಾಜೇಂದ್ರ ಅಲಿಯಾಸ್ ಮಹೇಶ್ ಅಲಿಯಾಸ್ ಮಹೇಶ್ ಸಾಗರ್ ಅಲಿಯಾಸ್ ರಮೇಶ್ (29) 5 ಲಕ್ಷ ರೂ. ಮತ್ತೊಬ್ಬ ಮಾವೋವಾದಿ ಕೋಸಿ ಪೋಡಿಯಂ (27) 2 ಲಕ್ಷ ರೂ. ಸಮ್ಮಿ ಸೆಮ್ಲಾ (23), ಛೋಟು ಪಾರ್ಸಿಕ್ ಅಲಿಯಾಸ್ ದೀಪಕ್ (25), ಮೋತಿ ತಾಟಿ (24), ಸುನಿತಾ ಹೆಮ್ಲಾ (24), ಮಂಜುಳಾ ಕುಂಜಮ್ (27), ಸೈಬೋ ಪೋಡಿಯಂ (18), ಮತ್ತು ಹಾಂಗಿ ಉಂಡಮ್ ಅಲಿಯಾಸ್ ರಾಧಾ (21) ಇವರೆಲ್ಲರ ವಿರುದ್ಧ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಶರಣಾದ ನಕ್ಸಲೀಯರಿಗೆ ತಲಾ 50,000 ರೂ. ನೀಡಲಾಗಿದ್ದು, ಸರ್ಕಾರದ ನೀತಿಯ ಪ್ರಕಾರ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.