ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ಕೊಟ್ಟ ಮೇಲೆ ಎಸ್‌ಐಟಿ ತನಿಖೆಗೆ ಹಲವು ಸವಾಲುಗಳು ಎದುರಾಗಿತ್ತು. ಇದೀಗ ದೂರು ಕೊಟ್ಟಿರುವ ಓರ್ವ ಸಂತ್ರಸ್ತೆ ಅಖಾಡಕ್ಕೆ ಇಳಿಯುವ ಮೂಲಕ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಪ್ರಕರಣಕ್ಕೆ ಓರ್ವ ಸಂತ್ರಸ್ತೆಯಿಂದ 164 ಹೇಳಿಕೆ ದಾಖಲಾಗಿದೆ. ಘಟನೆ ಸಂಬಂಧ ಹೇಳಿಕೆ ಪಡೆಯಲು ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಕೋರ್ಟ್‌ಗೆ ಕರೆತಂದಿದ್ದರು. ವೈರಲ್ ಆಗಿರುವ ವಿಡಿಯೋದರಲ್ಲಿರುವ ಸಂತ್ರಸ್ತ ಮಹಿಳೆ ಕೊನೆಗೂ ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆ ದಾಖಲಿಸಿದ್ದಾರೆ.
164 ಹೇಳಿಕೆ ಯಾಕಿಷ್ಟು ಮುಖ್ಯ!
ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದಾಖಲಾದ ಮೇಲೆ ಎಸ್ಐಟಿಗೆ ಸಂಕಷ್ಟ ಎದುರಾಗಿತ್ತು. ಹೊಳೆನರಸೀಪುರದಲ್ಲಿ ದಾಖಲಾಗಿರುವ ಕೇಸ್‌ಗೆ 164 ಹೇಳಿಕೆ ನೀಡಲು ಸಂತ್ರಸ್ತೆ ಹಿಂದೇಟು ಹಾಕಿದ್ದರು. ದೂರು ಕೊಟ್ಟ ಮೇಲೆ ಪ್ರಕರಣದ ಪ್ರಮುಖ ಸಾಕ್ಷಿ ಆಗಿರುವ ಸಂತ್ರಸ್ತೆ ಸ್ವಯಂ ಪ್ರೇರಿತವಾಗಿ 164 ಹೇಳಿಕೆ ನೀಡಬೇಕಾಗುತ್ತೆ. ಇದು ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತೆ.
ದೂರು ಕೊಟ್ಟ ಸಂತ್ರಸ್ತೆ ಜಡ್ಜ್ ಮುಂದೆ ಸ್ವಯಂ ಪ್ರೇರಿತ ಹೇಳಿಕೆ ಕೊಡಬೇಕು. 164 ಪ್ರಕಾರ ಸಂತ್ರಸ್ತೆ ಕೊಟ್ಟ ಹೇಳಿಕೆಯನ್ನು ಜಡ್ಜ್ ದಾಖಲಿಸುತ್ತಾರೆ. ಒಂದು ವೇಳೆ 164 ಹೇಳಿಕೆ ನೀಡದಿದ್ದರೆ ಪ್ರಕರಣ ತುಂಬಾ ವೀಕ್ ಆಗುತ್ತೆ. ಪೊಲೀಸರ ಮುಂದೆ ಕೊಟ್ಟಿರುವ 162 ಹೇಳಿಕೆಗೆ ಯಾವುದೇ ಮಾನ್ಯತೆ ಇರೋದಿಲ್ಲ.
ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆ ಕೊನೆಗೂ 164 ಹೇಳಿಕೆ ದಾಖಲಿಸಿದ್ದಾರೆ. ದೂರುದಾರೆ ಮಹಿಳೆ 164 ಹೇಳಿಕೆಯನ್ನು ನೀಡಿದ ಪ್ರಕರಣದ ವಿಚಾರಣೆ ವೇಗ ಪಡೆಯುವ ಸಾಧ್ಯತೆ ಇದೆ. ಈ ಹೇಳಿಕೆಯಿಂದ ರೇವಣ್ಣ & ಪ್ರಜ್ವಲ್ ರೇವಣ್ಣ ಅವರಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ.