ಮಾವೋವಾದಿಗಳು: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ 22 ಮಾವೋವಾದಿಗಳು ಶರಣಾಗಿದ್ದಾರೆ. ಶರಣಾದವರಲ್ಲಿ 14 ಪುರುಷರು ಮತ್ತು 8 ಮಹಿಳೆಯರು.
ಭದ್ರತಾ ಪಡೆಗಳ ನಿರಂತರ ಒತ್ತಡ ಮತ್ತು ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಿಂದಾಗಿ ಬಸ್ತಾರ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಮಾವೋವಾದಿಗಳು ಶರಣಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ, ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ 22 ಮಾವೋವಾದಿಗಳು ಗುರುವಾರ ಎಸ್‌ಪಿ ರಾಬಿನ್ಸನ್ ಗುಡಿಯಾ ಅವರ ಮುಂದೆ ಶರಣಾಗಿದ್ದಾರೆ. ಅವರಲ್ಲಿ ಕುತುಲ್ ಏರಿಯಾ ಸಮಿತಿಯ ಕಮಾಂಡರ್ ಸುಖ್‌ಲಾಲ್ ಕೂಡ ಇದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಶರಣಾದ 22 ಮಾವೋವಾದಿಗಳ ವಿರುದ್ಧ ಒಟ್ಟು 37 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.