ಮುಂಬೈ: ಮಹಾರಾಷ್ಟ್ರದ ಕೇದಾರನಾಥ ದೇವಾಲಯದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ̤ ದೇಹಲಿಯಲ್ಲಿ ಮತ್ತೊಂದು ಕೇದಾರನಾಥ ದೇವಸ್ಥಾನ ನಿರ್ಮಿಸುವುದು ಸರಿಯೇ ಎಂಮದು ಎಂದು ಜ್ಯೋತಿರ್ಮಠ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರಶ್ನಿಸಿದ್ದಾರೆ.
ಸೋಮವಾರ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನವಿಯ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇದಾರನಾಥ ದೇವಾಲಯದಿಂದ 228 ಕೆಜಿ ಚಿನ್ನ ನಾಪತ್ತೆಯಾಗಿದೆ. ಆದರೆ, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿಲ್ಲ. ಇಂಥದ್ದರಲ್ಲಿ ದೆಹಲಿಯಲ್ಲಿ ಮತ್ತೊಂದು ದೇವಸ್ತಾನ ನಿರ್ಮಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ 12 ನಿರ್ದಿಷ್ಟ ಜ್ಯೋತಿರ್ಲಿಂಗಗಳಿವೆ. ಅವುಗಳ ಸ್ಥಳವನ್ನು ಹಿಂದಿನ ಹಿರಿಯ ಸ್ವಾಮೀಜಿ ಪೂರ್ವನಿರ್ಧಾರ ಮಾಡಿಕೊಟ್ಟು ಒಂದು ಕ್ರಮ ಹಾಕಿಕೊಟ್ಟಿದ್ದಾರೆ. ಹೀಗಾಗಿ ಕೇದಾರನಾಥ ದೇವಾಲಯದ ತದ್ರೂಪು ನಿರ್ಮಿಸುವುದು ತಪ್ಪು. ಅಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಯಾರೂ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ” ಇದರ ಪತ್ತೆಗೆ ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.