Thursday, September 19, 2024

ಸತ್ಯ | ನ್ಯಾಯ |ಧರ್ಮ

6 ಕೋಟಿ ಕನ್ನಡಿಗರ ಕನ್ನಡಕ್ಕೆ ಕೇಂದ್ರದಿಂದ ಸಿಕ್ಕಿದ್ದು 3 ಕೋಟಿ ರೂ. ಆದರೆ ಸಂಸ್ಕೃತಕ್ಕೆ 1074 ಕೋಟಿ (ಅಂಕಣ)

  • ಮ.ಶ್ರೀ.ಮುರಳಿಕೃಷ್ಣ

ನಮ್ಮದು ಅನಾದಿ ಕಾಲದಿಂದಲೂ ಸಮ್ಮಿಳಿತ(ಬಹುಮುಖಿ) ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ  ಬಹುತ್ವವೇ ನಮ್ಮ ರಾಷ್ಟ್ರದ ಬೆನ್ನೆಲುಬು.  ಇತರ ವೈವಿಧ್ಯಗಳ ಜೊತೆ ನಮ್ಮ ಭಾಷೆಗಳದ್ದು ಒಂದು ವಿಸ್ಮಯಕಾರಿ ಜಗತ್ತು.  ಇಲ್ಲಿ ಅನೇಕ ಪುರಾತನ ಭಾಷೆಗಳಿವೆ.  ಕನ್ನಡ, ತಮಿಳು, ತೆಲಗು, ಮಲಯಾಳಂ, ಪಾಲಿ, ಪ್ರಾಕೃತದಂತಹ ಭಾಷೆಗಳಿಗೆ ಸಾಹಿತ್ಯಕ, ಮತೀಯ ಮತ್ತು ಸಾಂಸ್ಕೃತಿಕ ಇತಿಹಾಸವಿದೆ. ದ್ರಾವಿಡ ಭಾಷೆಗಳೆಂದು ಗುರುತಿಸಲ್ಪಡುವ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಜೊತೆ ದ್ರಾವಿಡ ವರ್ಗಕ್ಕೆ ಸೇರಿದ  ಸುಮಾರು 80 ಇತರ ಭಾಷೆಗಳನ್ನು ಸುಮಾರು 217 ದಶಲಕ್ಷ ಜನ ಮಾತನಾಡುತ್ತಾರೆ,  ಇವು ದಕ್ಷಿಣ, ಪೂರ್ವ, ಮಧ್ಯ  ಈಶಾನ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳಗಳಲ್ಲಿ ಬಳಸಲಾಗುತ್ತಿದೆ. ದ್ರಾವಿಡ ಭಾಷೆಗಳನ್ನು ಕುರಿತಂತೆ ಡಾ. ಹಂಪಾ ನಾಗರಾಜಯ್ಯ ಬರೆದಿರುವ, 2015ರಲ್ಲಿ ಪ್ರಕಟವಾಗಿರುವ ʼದ್ರಾವಿಡ ಭಾಷಾವಿಜ್ಞಾನ ʼ ಎಂಬ ಕೃತಿ ಹೆಚ್ಚು ಬೆಳಕನ್ನು ಚೆಲ್ಲುತ್ತದೆ. ಈ ವಿಷಯದಲ್ಲಿ ಇನ್ನೂ ಅನೇಕ ಗಮನಾರ್ಹ ಕೃತಿಗಳು ಹೊರಬಂದಿವೆ.

ನಮ್ಮ ದೇಶದ ವಿವಿಧ ಭಾಷೆಗಳ ಇಂತಹ ಶ್ರೀಮಂತ ಪರಂಪರೆ ಇರುವಾಗ, ಕೇಂದ್ರ(ಒಕ್ಕೂಟ) ಸರ್ಕಾರ ಸಂಸ್ಕೃತ ಮತ್ತು ಹಿಂದಿ ಭಾಷೆಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತ, ವಿಶೇಷ ಬಗೆಯಲ್ಲಿ ಮಣೆಯನ್ನು ಹಾಕುತ್ತಿದೆಯೇ ಎಂಬ ಆತಂಕ ಹಾಗೂ ಸಂಶಯ ಮೂಡಿದರೇ, ಅದು ಅಚ್ಚರಿಯ ವಿಷಯವಾಗುವುದಿಲ್ಲ ಬದಲಿಗೆ ಯೋಚನಾರ್ಹ ಸಂಗತಿಯಾಗುತ್ತದೆ.  2011ರ ಜನಗಣತಿಯ ಅನ್ವಯ 24,821 ಮಂದಿ ಸಂಸ್ಕೃತ ತಮ್ಮ ಮಾತೃಭಾಷೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿಯಿದೆ.  ಇನ್ನು ಅನೇಕ ಮಂದಿ ತಮ್ಮ ಶಿಕ್ಷಣಕ್ಕಾಗಿ ಅಥವಾ ಮತೀಯ ಹುಡುಕಾಟಗಳ ಅಧ್ಯಯನದ ಭಾಗವಾಗಿ ಸಂಸ್ಕೃತವನ್ನು ಕಲಿಯುತ್ತಿರಬಹುದು. 

ಒಂದು ವರದಿಯ ಅನ್ವಯ( ದಿ ನ್ಯೂ ಇಂಡಿಯನ್‌ ಎಕ್ಸ್ಪ್ರೆಸ್ ದಿನಾಂಕ ಮೇ 1, 2023), ಸೆಂಟ್ರಲ್‌ ಪಬ್ಲಿಕ್ ಇನ್‌ಫರ್ಮೇಷನ್ ಆಫೀಸರ್ಸ್‌ ಬಳಿ ದಿ ನ್ಯೂ ಇಂಡಿಯನ್‌ ಎಕ್ಸ್ಪ್ರೆಸ್ಎಲ್ಲ ಶಾಸ್ತ್ರೀಯ ಭಾಷೆಗಳಿಗೆ ಎಷ್ಟು ಹಣವನ್ನು ನೀಡಲಾಗಿದೆ ಎಂಬ ವಿಷಯ ಕುರಿತಂತೆ 13 ಪ್ರಶ್ನೆಗಳನ್ನು ಮಾರ್ಚ್‌ 16ರಂದು ಮುಂದಿಟ್ಟಿತ್ತು.  ಅವುಗಳಲ್ಲಿ ಕೇವಲ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರೆತವು!  ಇದೇ ದಿನಪತ್ರಿಕೆ ಇನ್ನೊಂದು ಆರ್‌ಟಿಐ ಅಪ್ಲಿಕೇಶನ್‌ ಮೂಲಕ ಕೇಂದ್ರ(ಒಕ್ಕೂಟ) ಸರ್ಕಾರ ಶಾಸ್ತ್ರೀಯ ಭಾಷೆಗಳಿಗೆ ಸಂಬಂಧಿಸಿದಂತೆ ಎಂತಹ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿತು.  ನವದೆಹಲಿಯಲ್ಲಿರುವ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಒಂದು ಆರ್‌ಟಿಐ ಉತ್ತರದ ಮೂಲಕ ಈ ಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, 2017-2022ರ ಅವಧಿಯಲ್ಲಿ ರೂ 1074 ಕೋಟಿಯನ್ನು ನಿಗದಿ ಮಾಡಿರುವುದಾಗಿ ತಿಳಿಸಿತು.  ಆದರೆ ಕನ್ನಡ, ತಮಿಳು, ತೆಲುಗು ಮತ್ತು ಇತರ ಶಾಸ್ತ್ರೀಯ ಭಾಷೆಗಳಿಗೆ ತುಂಬ ಕಡಿಮೆ ಹಣ ಸಂದಾಯವಾಗಿರುವುದರ ವಿಚಾರ ಅನಾವರಣಗೊಂಡಿತು.  2020ರಲ್ಲಿ ಐದು ಸಂಸದರು ಸಂಸತ್ತಿನಲ್ಲಿ ಮುಂದಿಟ್ಟಿದ್ದ ಅನ್‌ಸ್ಟಾರ್ಡ್ ಪ್ರಶ್ನೆಗಳನ್ನು ಉತ್ತರಿಸುತ್ತ ಸಂಸ್ಕೃತಿ ಸಚಿವಾಲಯ 2017-2020ರ ಅವಧಿಯಲ್ಲಿ ತಮಿಳಿಗೆ ರೂ 22.94 ಕೋಟಿ ನಿಯೋಜಿಸಿದ್ದರೇ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಕ್ರಮವಾಗಿ ತಲಾ 3 ಕೋಟಿ ದೊರಕಿತು ಎಂಬ ಮಾಹಿತಿಯನ್ನು ನೀಡಿತು!

ಮೇಲಿನ ಅಂಕಿ-ಸಂಖ್ಯೆಗಳು ಹಣ ಸಹಾಯದ ಪಕ್ಷಪಾತ ನಿಲುವನ್ನು ಜಾಹೀರು ಪಡಿಸುತ್ತವೆ.  ಈ ತೆರನಾದ ನಡೆ ಪ್ರಾಂತೀಯ ಭಾಷೆಗಳ ಅಭಿವೃದ್ಧಿಯನ್ನು ತೀವ್ರವಾಗಿ ಕುಂಠಿತಗೊಳಿಸುತ್ತದೆ.  ಅವುಗಳ ಬೆಳವಣಿಗೆಯ ನಿಟ್ಟಿನಲ್ಲಿ ಜರುಗಬೇಕಾದ ಸಂಶೋಧನೆ, ಪ್ರಕಟನೆ, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಂರಕ್ಷಣಾ ಪ್ರಯತ್ನಗಳಿಗೆ ದೊಡ್ಡ ಧಕ್ಕೆಯಾಗುತ್ತದೆ.  ಈ ತರಹದಕಡೆಗಣಿಸುವಿಕೆ, ಸಣ್ಣ, ಸಣ್ಣ ಸಮುದಾಯಗಳ ಭಾಷೆಗಳನ್ನುಅವಸಾನದತ್ತ ದೂಡುತ್ತವೆ.  ಭಾಷೆಗಳ ಉಳಿಯುವಿಕೆ ಮತ್ತು ಬೆಳವಣಿಗೆಗೆ ಅಧಿಕಾರ ವಲಯದಿಂದ ಸಮತೋಲಿತ ಸಹಾಯ ಮತ್ತು ಬೆಂಬಲ ಅವಶ್ಯ.

ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಸಾಧನಗಳ ಮೂಲಕ ಭಾಷೆಗಳ ಯಾಜಮಾನ್ಯವನ್ನು ಇಟಾಲಿಯ ಪ್ರಖರ ಚಿಂತಕಆಂಟೊನಿಯೊ ಗ್ರಾಮ್ಷಿ ಪ್ರತಿಪಾದಿಸಿದ ʼಕಲ್ಚರಲ್ಹೆಜಮನಿ ʼ(ʼಸಾಂಸ್ಕೃತಿಕ ಯಾಜಮಾನ್ಯʼ) ಪರಿಕಲ್ಪನೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು.  ಭಾರತದಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳಿಗೆ ವಿಶೇಷ ಒತ್ತನ್ನು ನೀಡುವ ರೀತಿಯನ್ನು ಒಂದು ಬಗೆಯ ಸಾಂಸ್ಕೃತಿಕ ಯಾಜಮಾನ್ಯ ಎನ್ನಬಹುದು.  ಇದು ಆ ಭಾಷೆಗಳನ್ನು ಉನ್ನತ ಸ್ಥಾನದಲ್ಲಿರಿಸುತ್ತದೆ.  ಈ ಬಗೆಯ ತರತಮ ಧೋರಣೆ ಇಡೀ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣವನ್ನು ಹದಗೆಡಿಸುತ್ತದೆ.ಅಲ್ಲದೆ, ಹಿಂದಿಮಾತ್ರನಮ್ಮದೇಶದರಾಷ್ಟ್ರಭಾಷೆಎಂಬರ್ಥಬರುವಂತೆಕುಟಿಲರೀತಿಯಲ್ಲಿಪ್ರಚಾರವನ್ನುಸಹವ್ಯವಸ್ಥಿತವಾಗಿಮಾಡಲಾಗುತ್ತದೆ. ಆದರೆಇದುಸತ್ಯಕ್ಕೆದೂರವಾದವಿಚಾರಎಂಬುದುಪ್ರಜ್ಞಾವಂತರಿಗೆತಿಳಿದಸಂಗತಿ.ತ್ರಿಭಾಷಸೂತ್ರವನ್ನುಸಹಮೇಲೆತಿಳಿಸಿರುವಪ್ರಚಾರಕಾರ್ಯಗಳಿಗೆಬಳಸಲಾಗುತ್ತದೆ!

ಫ್ರಾನ್ಸಿನ ಸಮಾಜಶಾಸ್ತ್ರಜ್ಞ ಮತ್ತು ಚಿಂತಕ ಪಿಯರ್ಬೊರ್ಡ್ಯುʼಸಾಂಸ್ಕೃತಿಕ ಬಂಡವಾಳ ʼ(ʼಕಲ್ಚರಲ್ಕ್ಯಾಪಿಟಲ್ʼ)ಎಂಬ ಪರಿಕಲ್ಪನೆಯನ್ನು ಮಂಡಿಸಿದ.  ಅದರಂತೆ ಕೆಲವು ಭಾಷೆಗಳಿಗೆ ವಿಶೇಷ ಸವಲತ್ತುಗಳನ್ನು ನೀಡಿದರೇ ಅಥವಾ ಅವುಗಳನ್ನು ಮೇಲ್ಪಂಕ್ತಿಯಲ್ಲಿ ಇರಿಸಿದರೇ, ಅವುಗಳನ್ನು ಮಾತನಾಡುವ ಮಂದಿಗೆ ಸಾಮಾಜಿಕ ಮತ್ತು ಆರ್ಥಿಕ ಅನುಕೂಲಗಳು ಒದಗುತ್ತವೆ.  ಇತರ ಭಾಷೆಗಳು  ಮೂಲೆಗುಂಪಾಗುತ್ತವೆ! ಅಂತಹ ಭಾಷೆಗಳನ್ನು ಮಾತನಾಡುವ, ಬರೆಯುವ ಮಂದಿ ಕೂಡ.

ಈ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ಮತ್ತು ಸಂಸ್ಕೃತಕ್ಕೆ ಅತಿ ಪ್ರಾಶಸ್ತ್ಯವನ್ನು ನೀಡುವಿಕೆ ಭಾಷಾ ಸಾಮ್ರಾಜ್ಯಶಾಹಿ(ಲಿಂಗ್ಚಿಸ್ಟಿಕ್ಇಂಪಿರಿಯಲಿಸಂ)ಯೇ ಸರಿ. ಇದನ್ನು ಹಿಮ್ಮೆಟ್ಟಿಸಬೇಕು.  ನಮ್ಮ ಭಾಷಾ ವೈವಿಧ್ಯತೆ ಉಳಿಯಬೇಕು.

ಮ ಶ್ರೀ ಮುರಳಿ ಕೃಷ್ಣ

Related Articles

ಇತ್ತೀಚಿನ ಸುದ್ದಿಗಳು

You cannot copy content of this page