ಮಂಗಳೂರು : ಬಿಜೆಪಿ ಸಚಿವರ ಮೇಲೆ ಶೇ 40 ರಷ್ಟು ಕಮಿಷನ್ ಬಗ್ಗೆ ಆರೋಪ ಮಾಡಿರುವವರು ಸಾಕ್ಷಿ ಸಮೇತ ಆರೋಪಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸವಾಲ್ ಹಾಕಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯಲ್ಲಿ ಹಣಮಾಡಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಜಯಾಮಾಲಾ ಅವರೇ ಹೇಳಿದ್ದಾರೆ. ನೆರೆ ಪರಿಹಾರ ನಿಧಿಯನ್ನೇ ಲೂಟಿ ಮಾಡಿದ ಕಾಂಗ್ರೆಸ್, ತನ್ನ ಆಡಳಿತಾವಧಿಯಲ್ಲಿ ಶೇ 80ರಷ್ಟು ಕಮಿಷನ್ ಹೊಡೆದಿದೆ. ಈಗ ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.