ಅಜೆರ್ಬೈಜಾನ್ ಏರ್ಲೈನ್ಸ್ ಪತನ ; ಭೀಕರ ದುರಂತದಲ್ಲಿ 42 ಮಂದಿ ಸಾವು, 25 ಮಂದಿ ಸ್ಥಿತಿ ಗಂಭೀರ

ಕಜಕಿಸ್ತಾನದ ಅಕ್ಟೌ ನಗರದ ಬಳಿ ಬುಧವಾರ ಅಜೆರ್ಬೈಜಾನ್ ಏರ್ಲೈನ್ಸ್ ಭೀಕರ ಅಪಘಾತಕ್ಕೆ ಒಳಗಾಗಿದೆ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ವಿಮಾನ ಅಪಘಾತದ ದುರ್ಘಟನೆಯಲ್ಲಿ 42 ಜನರು ಸಾವನ್ನಪ್ಪಿದ್ದಾರೆ. ಉಳಿದ 25 ಜನರ ಸ್ಥಿತಿ ಗಂಭೀರವಾಗಿದೆ.

ಅಜೆರ್ಬೈಜಾನ್’ನಿಂದ ರಷ್ಯಾಕ್ಕೆ ತೆರಳುತ್ತಿದ್ದ ಎಂಬ್ರೇರ್ ಪ್ರಯಾಣಿಕರ ವಿಮಾನವು ಕಜಕಿಸ್ತಾನದ ಅಕ್ಟೌ ಬಳಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 67 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವಿಮಾನ ಅಪಘಾತದ ಅನೇಕ ವೀಡಿಯೊಗಳಲ್ಲಿ ಅಜೆರ್ಬೈಜಾನ್ ಏರ್ಲೈನ್ಸ್ಗೆ ಸೇರಿದ ವಿಮಾನವು ನೆಲಕ್ಕೆ ಅಪ್ಪಳಿಸಿದಾಗ ಬೆಂಕಿಗೆ ಆಹುತಿಯಾಗಿದೆ ಮತ್ತು ನಂತರ ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದು ಕಾಣಿಸಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು