Home ರಾಜಕೀಯ ಆರ್ಟಿಕಲ್ 370 ರದ್ದಿನ 5ನೇ ವಾರ್ಷಿಕೋತ್ಸವ: ವಿರೋಧ ಪಕ್ಷಗಳ ನಾಯಕರ ಗೃಹಬಂಧನ?

ಆರ್ಟಿಕಲ್ 370 ರದ್ದಿನ 5ನೇ ವಾರ್ಷಿಕೋತ್ಸವ: ವಿರೋಧ ಪಕ್ಷಗಳ ನಾಯಕರ ಗೃಹಬಂಧನ?

0

ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮೋದಿಯವರ ಬಿಜೆಪಿ ಸರ್ಕಾರ ರದ್ದುಗೊಳಿಸಿ ಐದು ಕಳೆದಿದ್ದು, ಅದರ ವರ್ಷ ಐದನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆದರೆ. ಈ ಆಚರಣೆಗೆ ಏನೂ ತೊಂದರೆ ಬರಬಾರದು ಎಂದು ವಿರೋಧ ಪಕ್ಷಗಳ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪಿಡಿಪಿಯ ಹಲವಾರು ಸ್ಥಳೀಯ ನಾಯಕರನ್ನು ಸೋಮವಾರ ಗೃಹಬಂಧನದಲ್ಲಿ ಇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯ ವಕ್ತಾರ ತನ್ವಿರ್ ಸಾದಿಕ್ ಅವರನ್ನೂ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಾದಿಕ್, “ನನ್ನನ್ನು ಮನೆಯಲ್ಲಿಯೇ ಬಂಧಿಸಲಾಗಿದೆ, ಅದು ಸಂಪೂರ್ಣವಾಗಿ ಅನಗತ್ಯವಾಗಿತ್ತು. ನಾನು ಕೆಲವು ಕೆಲಸಕ್ಕೆ ಹೊರಡಬೇಕಾಗಿತ್ತು. ಆದರೆ, ನನ್ನ ಗೇಟ್‌ನ ಹೊರಗಿನ ಪೊಲೀಸರು ಹಾಗೆ ಮಾಡದಂತೆ ನನ್ನನ್ನು ತಡೆದರು. ಇದು ಅನಗತ್ಯ ಮತ್ತು ಕಾನೂನುಬಾಹಿರವಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಸಾದಿಕ್ ಅವರು ಶ್ರೀನಗರದಲ್ಲಿರುವ ತಮ್ಮ ನಿವಾಸದ ಗೇಟ್‌ನ ಹೊರಗೆ ಪೊಲೀಸ್ ಸಿಬ್ಬಂದಿ ಇರುವ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಆಗಸ್ಟ್ 5, ಯಾವಾಗಲೂ ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿರುತ್ತದೆ. ಆಗಸ್ಟ್ 5, 2019 ರಂದು ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ದ್ರೋಹ ಮಾಡಿದೆ. ಸಂವಿಧಾನವನ್ನು ನಿರ್ಲಕ್ಷಿಸುವ ಮೂಲಕ, ಬಿಜೆಪಿಯು ಜೆ-ಕೆ ಜೊತೆಗಿನ ಸಾಂವಿಧಾನಿಕ, ನೈತಿಕ ಮತ್ತು ಕಾನೂನು ಸಂಬಂಧವನ್ನು ದುರ್ಬಲಗೊಳಿಸಿದೆ” ಎಂದು ಬರೆದುಕೊಂಡಿದ್ದಾರೆ.

ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜಾದ್ ಗನಿ ಲೋನ್ ಅವರು 370 ನೇ ವಿಧಿಯನ್ನು ರದ್ದುಪಡಿಸಿದ ದಿನವನ್ನು “ಕಾಶ್ಮೀರಿ ಜನರ ಸಂಪೂರ್ಣ ಅಶಕ್ತೀಕರಣದ” ಜ್ಞಾಪನೆ ಎಂದು ಪೋಸ್ಟ್‌ ಮಾಡಿದ್ದಾರೆ.

You cannot copy content of this page

Exit mobile version