ಬೆಂಗಳೂರು : ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಸರಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕಚೇರಿಯ ಒಟ್ಟು 6 ಸಾವಿರ ಕೋಟಿ ರೂ. ನಷ್ಟು ಹಣ ಬಾಕಿ ಉಳಿದಿದೆ. ಸದ್ಯದಲ್ಲೇ ವಸೂಲಿ ಕಾರ್ಯ ನಡೆಯಲಿದೆ ಎಂದು ಸಚಿವ ಕೆ.ಜೆ ಜಾರ್ಜ್ ಹೇಳಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಅಕ್ರಮ ಸಕ್ರಮದಡಿ ಪಂಪ್ ಸೆಟ್ ಸಂಪರ್ಕಕ್ಕೆ ಅರ್ಜಿಗಳು ಬರುತ್ತಲೇ ಇದೆ. ಅದರಲ್ಲಿ ಈಗಾಗಲೇ 2.5 ಲಕ್ಷ ಅರ್ಜಿಗಳಿಗೆ ಅನುಮತಿ ನೀಡಿದ್ದು, ಉಳಿದ ಎರಡು ಲಕ್ಷ ಅರ್ಜಿಗಳನ್ನು ಸಚಿವ ಸಂಪುಟದಲ್ಲಿ ಇಟ್ಟು ಅನುಮೋದಿಸಿದ ನಂತರವೇ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆ. ಜೆ ಜಾರ್ಜ್ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಪಂಚಾಯತಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಕಚೇರಿಗಳಿಂದ ಒಟ್ಟು 6 ಸಾವಿರ ರೂ. ನಷ್ಟು ಹಣ ಬಾಕಿ ಉಳಿದಿದೆ. ಅದರ ವಸೂಲಿಗೆ ಸಂಬಂಧಪಟ್ಟಂತೆ ಸಚಿವ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆದಿದೆ, ಸದ್ಯದಲ್ಲೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪ್ರಸಕ್ತ ವರ್ಷ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ದವಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಂದ 19,500 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಅನ್ನು ಖರೀದಿಸಲಾಗಿದೆ ಎಂದು ಇಂಧನ ಸಚಿವ ಜಾರ್ಜ್ ತಿಳಿಸಿದರು.