Thursday, March 27, 2025

ಸತ್ಯ | ನ್ಯಾಯ |ಧರ್ಮ

ಕಳೆದ ಏಳು ವರ್ಷಗಳಲ್ಲಿ ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇ. 78ರಷ್ಟು ಮೇಲ್ಜಾತಿಯವರು: ಕೇಂದ್ರ

ದೆಹಲಿ: ಕಳೆದ ಏಳು ವರ್ಷಗಳಲ್ಲಿ ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇ. 78ರಷ್ಟು ಜನರು ಮೇಲ್ಜಾತಿಯವರು ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ತಿಳಿಸಿದ್ದಾರೆ.

ಉನ್ನತ ನ್ಯಾಯಾಂಗದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯವು ಅಪೇಕ್ಷಿತ ಮಟ್ಟಕ್ಕಿಂತ ತೀರಾ ಕಡಿಮೆಯಾಗಿದೆ ಎಂದು ಆರ್‌ಜೆಡಿ ನಾಯಕ ಮನೋಜ್ ಝಾ ಕಳೆದ ಗುರುವಾರ ಲೋಕಸಭೆಯಲ್ಲಿ ಗಮನಸೆಳೆದರು.

ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಶೋಷಿತ ಜಾತಿಗಳಿಂದ ನೇಮಕಗೊಂಡ ನ್ಯಾಯಾಧೀಶರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಮತ್ತು ನ್ಯಾಯಾಂಗ ನೇಮಕಾತಿಗಳಿಗಾಗಿ ಕಾರ್ಯವಿಧಾನದ ಜ್ಞಾಪಕ ಪತ್ರದಲ್ಲಿ (MoP) ಸಾಮಾಜಿಕ ವೈವಿಧ್ಯತೆಯನ್ನು ಸೇರಿಸಲು ಸರ್ಕಾರ ಸುಪ್ರೀಂ ಕೋರ್ಟನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಸಂವಿಧಾನದ 124, 217 ಮತ್ತು 224 ನೇ ವಿಧಿಗಳ ಪ್ರಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ಇವು ಯಾವುದೇ ಜಾತಿ ಅಥವಾ ವರ್ಗದ ಜನರಿಗೆ ಮೀಸಲಾತಿ ನೀಡುವುದಿಲ್ಲ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2018 ರಿಂದ, ಶೇಕಡ 78 ರಷ್ಟು ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಯವರು. ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇ.5 ರಷ್ಟು ಜನರು ಎಸ್‌ಟಿ ಮತ್ತು ಎಸ್‌ಟಿಗಳಿಗೆ ಸೇರಿದವರು ಮತ್ತು ಶೇ.12 ರಷ್ಟು ಜನರು ಒಬಿಸಿಗಳಿಗೆ ಸೇರಿದವರು ಎಂದು ಅರ್ಜುನ್ ಮೇಫ್ವಾಲ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page