Monday, June 17, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದ ಸರ್ಕಾರಿ ನೌಕರರು ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕು : ಬೊಮ್ಮಾಯಿ

ಬೆಂಗಳೂರು: 7 ನೇ ವೇತನ ಪರಿಷ್ಕರಣೆ ಪ್ರಕಟನೆಯ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ʼ ʼರಾಜ್ಯದ ಸರ್ಕಾರಿ ನೌಕರರು ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕುʼ ಎಂದು ಮಾತನಾಡಿದ್ದಾರೆ.

ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು ಆಯೋಗವನ್ನು ರಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾರ್ಚ್‌ನಲ್ಲಿ ಘೋಷಿಸಿದ್ದರು. ಆದರೆ ಅದನ್ನು ನವೆಂಬರ್‌ 9 ರಂದು 7ನೇ ವೇತನ ಆಯೋಗವನ್ನು ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 7ನೇ ವೇತನ ಆಯೋಗವನ್ನು ರಚಿಸುವುದಾಗಿ ನವೆಂಬರ್‌ 9 ಬುಧವಾರದಂದು ಪ್ರಕಟಿಸಿದ್ದಾರೆ. ಈ ಹಿಂದೆಯೇ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರನ್ನು 7ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸರ್ಕಾರಿ ನೌಕರರ ವಿವಿಧ ಸಂಘಟನೆಗಳ ಕ್ರಿಯಾ ಸಮಿತಿಯು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅದರಂತೆಯೇ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಹೈಕೋರ್ಟ್‌ ನ್ಯಾ.ಸುಧಾಕರ್‌ ರಾವ್ ಅವರನ್ನು ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದ್ದರು.

7 ನೇ ವೇತನ ಪರಿಷ್ಕರಣೆ ಪ್ರಕಟನೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼರಾಜ್ಯದ ಸರ್ಕಾರಿ ನೌಕರರು ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕುʼ ಎಂದು ಹೇಳಿದ್ದಾರೆ.

ʼಎಲ್ಲರೂ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿ, ಉಳಿದಿದ್ದನ್ನು ನನಗೆ ಬಿಟ್ಟುಬಿಡಿ. ನಾವು ಈ ರಾಜ್ಯವನ್ನು ಅಭಿವೃದ್ಧಿ ಹೊಂದುವಂತೆ ಮಾಡೋಣ. ನವ ಕರ್ನಾಟಕ ಮೂಲಕ ನವ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು. ಭಾರತದ ಉದ್ದೇಶಿತ ಟ್ರೆಲಿಯನ್‌ ಡಾಲರ್‌ ಆರ್ಥಿಕತೆಯಲ್ಲಿ ಒಂದು ಟ್ರೆಲಿಯನ್‌ ಡಾಲರ್‌ ಕರ್ನಾಟಕದ್ದೇ ಆಗಿರಬೇಕುʼ ಎಂದು ಹೇಳಿದ್ದಾರೆ.

ಏನು ಈ 5 ಟ್ರೆಲಿಯನ್ ಆರ್ಥಿಕತೆ?

ʼದೇಶದಲ್ಲಿ 2025-25ರ ವೇಳೆಗೆ 5 ಟ್ರೆಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಆರ್ಥಿಕತೆ ತಲುಪುವ ಉದ್ದೇಶಕ್ಕಾಗಿ ನಿರಂತರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗುವುದು. 5 ಟ್ರೆಲಿಯನ್ ಗುರಿ ಸಾಧಿಸಲು ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ದರವನ್ನು ಶೇ.8ಕ್ಕೆ ಕೊಂಡೊಯ್ದು ಮುದುವರೆಯಲು ಆರ್ಥಿಕತೆಯ ವೇಗವನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆʼ ಎಂದು ಕೇಂದ್ರ ಹಣಕಾರು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್‌ ಅವರು ಸಂಸತ್ತಿನಲ್ಲಿ ನಡೆದ 2018-19 ರ ಆರ್ಥಿಕ ಸಮೀಕ್ಷೆಯಲ್ಲಿ ಮಂಡಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿಯವರು, ಕೋವಿಡ್‌-19 ಸಾಂಕ್ರಾಮಿಕ ರೋಗದ ಅತ್ಯಂತ ಕಠಿಣ ಸಮಯದಲ್ಲೂ ಶ್ರಮಿಸಿದ ಆರೋಗ್ಯ, ಪೊಲೀಸ್‌, ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಸರ್ಕಾರಿ ನೌಕರರನ್ನು ಅಭಿನಂದಿಸಿದ್ದಾರೆ.

ಪ್ರಸಕ್ತ ರಾಜ್ಯದ ಅರ್ಥಿಕತೆಯಲ್ಲಿ 13,000 ಕೋಟಿ ರೂ ಹೆಚ್ಚಾಗಿದೆ. ಪ್ರತಿ ವರ್ಷವೂ ಹಣದುಬ್ಬರವೂ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲಾರಿಗೂ ಸಮಯ ಮತ್ತು ಹಣ ಮುಖ್ಯ. ಸರಿಯಾದ ಸಮಯದಲ್ಲಿ ಹಣ ಸಂಪಾದಿಸುವುದು ಜೀವನವನ್ನು ಪ್ರೇರೆಪಿಸುತ್ತದೆ ಇದೇ ಕಾರಣದಿಂದ ಸರ್ಕಾರವು 7 ನೇ ವೇತನ ಆಯೋಗವನ್ನು ಸ್ಥಾಪಿಸುವ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು