Sunday, June 23, 2024

ಸತ್ಯ | ನ್ಯಾಯ |ಧರ್ಮ

ವರದಕ್ಷಿಣೆ ಕಿರುಕುಳ: ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಅಣ್ಣನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದ ನಟಿ ಅಭಿನಯಾ ವಿರುದ್ಧ ಚಂದ್ರ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಅಭಿನಯಾ ಸೇರಿದಂತೆ ಅವರ ತಾಯಿ ಮತ್ತು ಸಹೋದರನಿಗೆ ಜೈಲು ಶಿಕ್ಷೆ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಕನ್ನಡ ಚಿತ್ರರಂಗದ ಹಿರಿಯ ನಟಿ, ʼಅನುಭವʼ ಚಿತ್ರದಿಂದ ಖ್ಯಾತಿ ಪಡೆದ ನಟಿ ಅಭಿನಯಾ ತನ್ನ ಅಣ್ಣನ ಪತ್ನಿ ಲಕ್ಷ್ಮೀದೇವಿಗೆ ಅವರ ವಿರುದ್ಧ ವರದಕ್ಷಿಣೆ ಕಾರಣದಿಂದ ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಈ ಕುರಿತು ಬೆಂಗಳೂರಿನ ಚಂದ್ರ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಲಕ್ಷ್ಮೀದೇವಿಯವರೇ ಸ್ವತಃ 20 ವರ್ಷದ ಹಿಂದೆಯೇ  ದೂರು ನೀಡಿದ್ದು, ಇದೀಗ ಪ್ರಕರಣದ ಕುರಿತು ಹೈಕೋರ್ಟ್‌ ತೀರ್ಪು ನೀಡಿದೆ.

1998ರಲ್ಲಿ ನಟಿ ಅಭಿನಯಾ ಅವರ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿಯವರ ವಿವಾಹವಾಗಿದ್ದು, ಅಂದಿನಿಂದಲೂ ಶ್ರೀನಿವಾಸ್‌ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು 2002ರಲ್ಲಿ ದೂರು ದಾಖಲಿಸಿದ್ದರು.

ʼಹೆರಿಗೆ ಬಳಿಕ ಪತಿ ಮನೆಯವರು ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪೋಷಕರ ಮನೆಯಲ್ಲಿ ಉಳಿಸುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಿ ಕೊಲೆ ಬೆದರಿಕೆಯನ್ನು ಹಾಕಿದ್ದರು ಎಂದು ಕುಟುಂಬದವರ ವಿರುದ್ಧ ದೂರಿನಲ್ಲಿ ತಿಳಿಸಿದ್ದರು.

ಈ ಕುರಿತು ಇಂದು ತೀರ್ಪು ನೀಡಿರುವ ಹೈಕೋರ್ಟ್‌, ʼಅಭಿನಯಾ ಅವರಿಗೆ 2 ವರ್ಷ, ಅವರ ತಾಯಿ ಜಯಮ್ಮಗೆ 5 ವರ್ಷ ಮತ್ತು ಅಭಿನಯಾ ಅವರ ಸಹೋದರ ಚೆಲುವರಾಜ್‌ ಅವರಿಗೆ 2 ವರ್ಷ ಜೈಲು ಶಿಕ್ಷೆ ನೀಡುವಂತೆ, ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು