ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ: ಎಲ್ಲರೂ ಹೇಳುವುದು ಒಂದು ಹೆಸರು; ಮೊಯ್ಲಿ ಹೇಳುವುದು ಬೇರೆಯೇ ಹೆಸರು!

PPeepal Media

Peepal Media • ರಾಜ್ಯ

• 1 ನಿಮಿಷದ ಓದು

ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ: ಎಲ್ಲರೂ ಹೇಳುವುದು ಒಂದು ಹೆಸರು; ಮೊಯ್ಲಿ ಹೇಳುವುದು ಬೇರೆಯೇ ಹೆಸರು!

ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಪಕ್ಷದ ಹೈಕಮಾಂಡ್ ಈಗಾಗಲೇ ನಿರ್ಧರಿಸಿದ್ದು, ಘೋಷಣೆಯೊಂದೇ ಬಾಕಿ ಇದೆ.

ಕಾರ್ಕಳ ಕಾಂಗ್ರೆಸ್ ಮಟ್ಟಿಗೆ ಸ್ಥಳೀಯ ನಾಯಕರು, ಕಾರ್ಯಕರ್ತರು ಎಲ್ಲರೂ ಹೇಳುವುದು   ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲ್ ಅವರ ಹೆಸರು. ಆದರೆ ‘ಕಾರ್ಕಳದ ಹೈಕಮಾಂಡ್’ ವೀರಪ್ಪ ಮೊಯ್ಲಿ ಹೇಳುತ್ತಿರುವುದು ಮಂಜುನಾಥ ಪೂಜಾರಿ ಹೆಸರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ  ಟಿಕೆಟ್‌ಗಾಗಿ ಲಾಬಿ ನಡೆಸಿದವರಲ್ಲ. ಅವರ ಬೆನ್ನಿಗೆ ವೀರಪ್ಪ ಮೊಯ್ಲಿ  ಅವರೇ ನಿಂತು, ಅರ್ಜಿ ಹಾಕಿಸಿ, ಕೆಪಿಸಿಸಿ ಹಾಗೂ ದೆಹಲಿ ಮಟ್ಟದಲ್ಲಿಯೂ ಒತ್ತಡ ಹೇರುತ್ತಿದ್ದಾರೆ. ಹಾಗಂತ ಟಿಕೆಟ್ ಸಿಕ್ಕರೆ ಮಂಜುನಾಥ ಪೂಜಾರಿ ಬೇಡ ಎಂದು ಹೇಳುವಂತೆಯೂ ಇಲ್ಲ! ಸುನಿಲ್ ಕುಮಾರ್ ಗೆಲುವು ಸುಲಭ ಮಾಡಿ ಕೊಡಲು ಮೊಯ್ಲಿ ಈ ಪ್ರಯತ್ನದಲ್ಲಿದ್ದಾರೆ ಎಂಬ ಆರೋಪಗಳೂ ಸ್ಥಳೀಯವಾಗಿ ಮೊಯ್ಲಿ ವಿರುದ್ಧ ಕೇಳಿ ಬರುತ್ತಿವೆ.

ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ವಲ್ಪದರಲ್ಲಿ ಟಿಕೆಟ್ ವಂಚಿತರಾದವರು. ಆಗಲೂ ಟಿಕೆಟ್ ರೇಸಲ್ಲಿ ಮುಂಚೂಣಿಯಲ್ಲಿದ್ದ ಮುನಿಯಾಲು ಶೆಟ್ಟಿ ಅವರಿಗೆ ಅಡ್ಡ ಬಂದದ್ದು ಮಾಜಿ ಮುಖ್ಯಮಂತ್ರಿ ಮೊಯ್ಲಿಯೇ. ಆದರೆ, ಅಂದು ಟಿಕೆಟ್ ವಂಚಿತರಾದಾಗ ಮುನಿಯಾಲು ಬೆಂಬಲಿಗರು ಮಾಡಿದ ಮೊಯ್ಲಿಯ ಅಣಕು ಶವ ಯಾತ್ರೆ ಈಗ ಮಾಜಿ ಮುಖ್ಯ ಮಂತ್ರಿಯ ದ್ವೇಷಕ್ಕೆ ಕಾರಣವಾಗಿದೆ. ಜೊತೆಗೆ, ಬಿಜೆಪಿ ಸರಕಾರದ ವಿರುದ್ಧ ಗುತ್ತಿಗೆದಾರರಿಂದ 40% ಕಮಿಷನ್ ವಿವಾದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಗುತ್ತಿಗೆದಾರರ ಸಂಘದ ಮುಖಂಡರೂ ಆಗಿರುವ ಉದಯ ಮುನಿಯಾಲು ಪತ್ರಿಕಾಗೋಷ್ಠಿ ಕರೆದು ಕಮಿಷನ್ ಆರೋಪ ನಿರಾಕರಿಸಿದ್ದು, ಎರಡನೇ ಮೈನಸ್ ಪಾಯಿಂಟ್. ಮುನಿಯಾಲು ಮನೆ ಹೊರಗೆ ಐಟಿ ಜೀಪು ನಿಲ್ಲಿಸಿ ಈ ಪತ್ರಿಕಾಗೋಷ್ಠಿಯಲ್ಲಿ ಕಮಿಷನ್ ಆರೋಪ ನಿರಾಕರಿಸಲು ಒತ್ತಡ ಹೇರಲಾಗಿತ್ತು ಎಂಬುದು ವದಂತಿಯೋ, ಸತ್ಯವೋ ಎಂಬುದನ್ನು ಮುನಿಯಾಲು ಅವರೇ ಸ್ಪಷ್ಟಪಡಿಸಬೇಕಿದೆ.

ಇಂತಹ ಅನೇಕ ಸಣ್ಣ- ದೊಡ್ಡ ವಿಷಯಗಳನ್ನು ಮೊಯ್ಲಿ ಖುದ್ದು ಟಿಕೆಟ್ ಸ್ಕ್ರೀನಿಂಗ್ ಕಮಿಟಿಯಲ್ಲಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಆದರೂ ಮುನಿಯಾಲು ಉದಯ ಮೂಲತಃ ಕಾಂಗ್ರೆಸಿಗರು ಎಂಬ ಏಕೈಕ ಕಾರಣಕ್ಕಾಗಿ ಪಕ್ಷದ ನಾಯಕರು ಕಾರ್ಕಳ ಕ್ಷೇತ್ರದಾದ್ಯಂತ ಸರ್ವೇ ನಡೆಸಿ ಕಾರ್ಯಕರ್ತರ, ಮತದಾರರ ಅಭಿಪ್ರಾಯ ಸಂಗ್ರಹಿಸಿ, ಸ್ಪಷ್ಟ ನಿರ್ಧಾರವೊಂದಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಬಿಲ್ಲವ ಸಮುದಾಯದ ಕಾಂಗ್ರೆಸ್ ಮುಂಖಂಡ ಡಿ. ಆರ್. ರಾಜು ಅವರನ್ನು ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿರುವುದಕ್ಕೂ, ಟಿಕೆಟ್ ಹಂಚಿಕೆ ವಿಚಾರಕ್ಕೂ ತಳಕು ಹಾಕುತ್ತಿವೆ. ಆದರೆ ಪಕ್ಷದ ಮೂಲಗಳ ಪ್ರಕಾರ ಇದು ಮಧು ಬಂಗಾರಪ್ಪ ಅಧ್ಯಕ್ಷರಾಗಿರುವ ಸಮಿತಿಯ ನಿರ್ಧಾರವೇ ಹೊರತು, ಟಿಕೆಟ್ ವಿತರಣೆಗೂ ಈ ನೇಮಕಾತಿಗೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ.

 ದಿನೇಶ್‌ ಕಿಣಿ

ಪತ್ರಕರ್ತರು.

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು