Sunday, June 23, 2024

ಸತ್ಯ | ನ್ಯಾಯ |ಧರ್ಮ

ಸೆಂಟ್ರಲ್‌ ಪಾಲಿಟಿಕ್ಸ್‌ ಬಗ್ಗೆ ನಂಗೆ ಇಂಟ್ರೆಸ್ಟ್‌ ಇಲ್ಲ: HDK

ಚನ್ನಪಟ್ಟಣ: “ರಾಷ್ಟ್ರ ರಾಜಕಾರಣದ ವಿಷಯದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ. NDA ಜೊತೆಗಿನ JDS ಮೈತ್ರಿ ಮತ್ತು ಕೇಂದ್ರದಲ್ಲಿ ನನ್ನನ್ನು ಮಂತ್ರಿ ಮಾಡುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲʼ ಎಂದು ಜಾತ್ಯಾತೀತ ಜನತಾ ದಳ ಪಕ್ಷದ ಶಾಸಕಾಂಗದ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು. ಅವರು ತನಗೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಬೇಕಿಲ್ಲ ಎಂದು ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಂಜೀವಿನಿ ಭವನ ಹಾಗೂ ಸರ್ಕಾರಿ ಶಾಲೆಯ ಉದ್ಘಾಟನೆಯ ನಂತರ ಸುದ್ದಿಗಾರರೊಡನೆ ಮಾತನಾಡುತ್ತಿದ್ದರು. ʼನಾನೊಬ್ಬ ಸಾಮಾನ್ಯ ಶಾಸಕನಾಗಿಯೇ ರಾಜ್ಯದ ಜನರಿಗಾಗಿ ದುಡಿಯುತ್ತೇನೆʼ ಎಂದೂ ಅವರು ಹೇಳಿದರು.

ʼಈ ವಿಷಯದಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ನನಗೆ NDA ಕಡೆಯಿಂದಾಗಲೀ ಅಥವಾ ಮಹಾಘಟಂಬಂಧನ್‌ ಕಡೆಯಿಂದಾಗಲೀ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬರಲಿ ಆಗ ಆ ಬಗ್ಗೆ ಏನು ಮಾಡಬೇಕೆಂಬುದನ್ನು ಪಕ್ಷದ ಇತರ ನಾಯಕರೊಡನೆ ಚರ್ಚಿಸಿ ನಿರ್ಧರಿಸುತ್ತೇನೆʼ ಎಂದು ಅವರು ಸುದ್ದಿಗಾರರೊಡನೆ ಹೇಳಿದರು.

ʼಬಿಜೆಪಿ ಕಾಲ ಈಗ ಸುಮ್ಮನೆ ಕಾಲಹರಣ ಮಾಡುವುದನ್ನು ಬಿಟ್ಟು ವಿರೋದ ಪಕ್ಷದ ನಾಯಕರನ್ನು ಆರಿಸಲಿ. ಅವರ ಪಕ್ಷದಲ್ಲಿ ಹಲವು ಮಾಜಿ ಮಂತ್ರಿಗಳು, ಮುಖ್ಯಮಂತ್ರಿಗಳೆಲ್ಲ ಇದ್ದಾರೆ. ಜನರು ನನ್ನನ್ನು ನನ್ನ ಸ್ಥಾನಮಾನಗಳಿಂದ ಗುರುತಿಸಿಲ್ಲ. ನನಗೆ ನನ್ನದೇ ಆದ ಸ್ಥಾನವಿದೆ ಅದಕ್ಕೆ ಯಾವುದೇ ಅಧಿಕಾರದ ಸ್ಥಾನ ಬೇಕಿಲ್ಲ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು