Monday, June 17, 2024

ಸತ್ಯ | ನ್ಯಾಯ |ಧರ್ಮ

ಭೀಮಾ ಕೋರೆಗಾಂವ್ ಪ್ರಕರಣ: ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಮ್ ಕೋರ್ಟ್‌

ನವದೆಹಲಿ: 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಆದರೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಥವಲ್ಲ ಎಂದು ಹೇಳಿದರು.

ಜಾಮೀನು ನೀಡಿದ ನ್ಯಾಯಪೀಠ ಕೆಲವು ಷರತ್ತುಗಳನ್ನು ಸಹ ವಿಧಿಸಿದೆತು.

ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಸುಮಾರು ಐದು ವರ್ಷಗಳು ಕಳೆದಿವೆ ಎಂದು ಆದೇಶವನ್ನು ಪ್ರಕಟಿಸಿದ ನ್ಯಾಯಪೀಠ ಒತ್ತಿ ಹೇಳಿದೆ.

ಜಾಮೀನು ಷರತ್ತುಗಳನ್ನು ಓದಿದ ನ್ಯಾಯಪೀಠ, ಅರ್ಜಿದಾರರು ಮಹಾರಾಷ್ಟ್ರವನ್ನು ತೊರೆಯುವಂತಿಲ್ಲ ಮತ್ತು ಅವರು ತಮ್ಮ ಪಾಸ್‌ಪೋರ್ಟುಗಳನ್ನು ಒಪ್ಪಿಸಬೇಕು ಮತ್ತು ಅವರ ಪ್ರಸ್ತುತ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗೆ ತಿಳಿಸಬೇಕು ಎಂದು ಹೇಳಿದೆ. ಅರ್ಜಿದಾರರ ಫೋನುಗಳ ಸ್ಥಳ ಸೇವೆಯು ಎಲ್ಲಾ ಸಮಯದಲ್ಲೂ ಆನ್ ಆಗಿರಬೇಕು ಮತ್ತು ಟ್ರ್ಯಾಕಿಂಗ್‌ ಮಾಡುವ ಸಲುವಾಗಿ NIA ಅಧಿಕಾರಿಗಳೊಂದಿಗೆ ಸಿಂಕ್ ಆಗಿರಬೇಕು ಎಂದು ನ್ಯಾಯಪೀಠ ಹೇಳಿದೆ.

ಯಾವುದೇ ಷರತ್ತುಗಳ ಉಲ್ಲಂಘನೆಯಾದಲ್ಲಿ, ಈ ನ್ಯಾಯಾಲಯಕ್ಕೆ ಸೂಚಿಸದೆ ಜಾಮೀನು ರದ್ದುಗೊಳಿಸಲು ಪ್ರಾಸಿಕ್ಯೂಷನ್ ಮುಕ್ತವಾಗಿರುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.

ಸಾಕ್ಷಿಗಳಿಗೆ ಬೆದರಿಕೆ ಹಾಕುವ ಯಾವುದೇ ಪ್ರಯತ್ನ ನಡೆದರೆ, ಜಾಮೀನು ರದ್ದುಗೊಳಿಸಲು ಪ್ರಾಸಿಕ್ಯೂಷನ್ ಮುಂದಾಗಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ, ಅರ್ಜಿದಾರರು ಬಾಂಬೆ ಹೈಕೋರ್ಟಿನ ಡಿಸೆಂಬರ್ 2021ರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದರು.

ಗೊನ್ಸಾಲ್ವೆಸ್ ಓರ್ವ ಕಾರ್ಮಿಕ ಸಂಘಟಕ, ಕಾರ್ಯಕರ್ತ ಮತ್ತು ಶಿಕ್ಷಣತಜ್ಞ. ಫೆರೀರಾ ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು