Monday, April 29, 2024

ಸತ್ಯ | ನ್ಯಾಯ |ಧರ್ಮ

Whatsapp new feature | ನಿಮ್ಮವರಿಗೆ ವಿಡಿಯೋ ಮೆಸೇಜ್‌ ಕಳುಹಿಸಲು ಹೀಗೆ ಮಾಡಿ

Android ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ವೈಶಿಷ್ಟ್ಯವೊಂದನ್ನು ಹೊರತಂದಿದೆ. META ಒಡೆತನದ ಪ್ಲಾಟ್ಫಾರ್ಮ್ ಹೊಸ ವೀಡಿಯೊ ಸಂದೇಶ ವೈಶಿಷ್ಟ್ಯವನ್ನ ಪರಿಚಯಿಸಿದೆ. ಇದು Whatsapp ಬಳಕೆದಾರರಿಗೆ ತಮ್ಮ ಭಾವನೆಗಳನ್ನು ಈಗ ಲೈವ್‌ ಆಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.

ಹೊಸ ವೀಡಿಯೊ ಸಂದೇಶ ವೈಶಿಷ್ಟ್ಯದೊಂದಿಗೆ, ವಾಟ್ಸಾಪ್ ಬಳಕೆದಾರರು ಈಗ ಚಾಟ್‌ ಮಾಡುವಾಗ ನೇರವಾಗಿ ವೈಯಕ್ತಿಕ ವೀಡಿಯೊಗಳನ್ನ ರೆಕಾರ್ಡ್ ಮಾಡಲು ಮತ್ತು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ವೀಡಿಯೊ ಸಂದೇಶಗಳನ್ನ ರೆಕಾರ್ಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆನ್ನುವ ಕುತೂಹಲ ನಿಮಗಿದ್ದಲ್ಲಿ ಅದಕ್ಕೆ ಉತ್ತರ ಕೆಳಗಿದೆ.


ನೀವು ಸಹ ಈ ಹೊಸ Whatsapp ವೈಶಿಷ್ಟ್ಯವನ್ನ ಪ್ರಯತ್ನಿಸಲು ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ವೀಡಿಯೊ ಸಂದೇಶಗಳನ್ನ ಕಳುಹಿಸಲು ಬಯಸಿದರೆ ಈ ಕೆಳಗಿನ ಹಂತಗಳನ್ನ ಅನುಸರಿಸಿ.

ಹಂತ 1: ನಿಮ್ಮ Android Phone ತೆಗೆದುಕೊಂಡು ವಾಟ್ಸಾಪ್ ತೆರೆಯಿರಿ
ಹಂತ 2 : ಈಗ Whatsapp ಚಾಟ್ ತೆರೆಯಿರಿ, ಅದರಲ್ಲಿ ನೀವು ವೀಡಿಯೊ ಸಂದೇಶವನ್ನ ಯಾರಿಗೆ ಕಳುಹಿಸಲು ಬಯಸುತ್ತೀರಿ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 3 : ಇದರ ನಂತರ ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನೀವು ಈಗ ಅಲ್ಲಿ ವೀಡಿಯೊ ಐಕಾನ್ ಗಮನಿಸುತ್ತೀರಿ
ಹಂತ 4 : ನೀವು ವೀಡಿಯೊ ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಬೇಕು ಮತ್ತು ನಂತರ ವಾಟ್ಸಾಪ್ ನಿಮಗೆ ಮೂರು ಎಣಿಕೆಯನ್ನ ನೀಡುತ್ತದೆ, ಅದರ ನಂತರ ನೀವು ನಿಮ್ಮ ವೀಡಿಯೊ ಸಂದೇಶವನ್ನ ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ
ಹಂತ 5 : ಒಮ್ಮೆ ರೆಕಾರ್ಡ್ ಮಾಡಿದ ನಂತರ ಸಂದೇಶವನ್ನ ಸ್ವೀಕರಿಸುವವರಿಗೆ ಕಳುಹಿಸಲಾಗುತ್ತದೆ.
ಹಂತ 6 : ನೀವು ಎಡಬದಿಗೆ ಸ್ವೈಪ್ ಮಾಡುವ ಮೂಲಕ ರೆಕಾರ್ಡ್ ಮಾಡಿದ ಸಂದೇಶವನ್ನ ಡಿಲೀಟ್‌ ಮಾಡಬಹುದು.

ಇದೆಲ್ಲ ಮಾಡುವ ಮೊದಲು ನಿಮ್ಮ Whatsapp ಆವೃತ್ತಿ ಹಳೆಯದಾಗಿದ್ದಲ್ಲಿ Update ಮಾಡಿಕೊಳ್ಳಲು ಮರೆಯದಿರಿ

Related Articles

ಇತ್ತೀಚಿನ ಸುದ್ದಿಗಳು