Saturday, June 15, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್‌ಗೆ ಅಮೇರಿಕಾ ಬೆಂಬಲ: ಅಮೇರಿಕಾದ ಫೆಡರಲ್ ನ್ಯಾಯಾಲಯದ ಮೊರೆಹೋದ ಪ್ಯಾಲಿಸ್ತೇನಿಯರು


ಬೆಂಗಳೂರು: ಇಸ್ರೇಲ್‌ಗೆ ಶಸ್ತ್ರಾಸ್ತ್ರ, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡದಂತೆ ಅಧ್ಯಕ್ಷ ಜೋ ಬಿಡೆನ್, ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಿಯೋಡ್ ಆಸ್ಟಿನ್ ಅವರನ್ನು ತಡೆಯಲು ಪ್ಯಾಲಿಸ್ತೇನಿನ ಸಂಘಟನೆಗಳು ಅಮೇರಿಕಾ ಫೆಡರಲ್ ನ್ಯಾಯಾಲಯದ ಮೊರೆ ಹೋಗಿವೆ. ಗಾಝಾದ ನಾಗರಿಕರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವುದು “ಬಹಿರಂಗ ನರಮೇಧ – unfolding genocide” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.

“ಅಮೇರಿಕಾದ ಅಧಿಕಾರಿಗಳು ಇಂತಹ ಅತ್ಯಂತ ಗಂಭೀರ ಅಪರಾಧಗಳನ್ನು ತಡೆಯುವ ಕಾನೂನಾತ್ಮಕ ಕರ್ತವ್ಯವನ್ನು ಹೊಂದಿದ್ದಾರೆ,” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಈ ಅರ್ಜಿದಾರರ ಗುಂಪಲ್ಲಿ – ಪ್ಯಾಲೆಸ್ಟೀನಿಯನ್ ಮಾನವ ಹಕ್ಕುಗಳ ಸಂಘಟನೆಗಳಾದ ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್ನ್ಯಾಷನಲ್-ಪ್ಯಾಲೆಸ್ಟೈನ್ ಮತ್ತು ಅಲ್-ಹಕ್; ಗಾಜಾದಲ್ಲಿರುವ ಅಹ್ಮದ್ ಅಬು ಅರ್ಟೆಮಾ ಮತ್ತು ಮೊಹಮ್ಮದ್ ಅಹಮದ್ ಅಬು ರೋಕ್ಬೆಹ್; ಮತ್ತು ತಮ್ಮ ಕುಟುಂಬದೊಂದಿಗೆ ಗಾಝಾದಲ್ಲಿ ಇರುವ ಅಮೇರಿಕಾದ ನಾಗರಿಕರಾದ ಮೊಹಮ್ಮದ್ ಮೊನಾಡೆಲ್ ಹರ್ಜಲ್ಲಾ, ಲೈಲಾ ಎಲ್ಹದ್ದಾದ್, ವೈಲ್ ಎಲ್ಭಾಸ್ಸಿ, ಬಾಸಿಮ್ ಎಲ್ಕರ್ರಾ, ಮತ್ತು ಎ.ಎನ್ ಹಾಗೂ ಖಾನ್ ಯೂನಿಸ್‌ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್‌ನಲ್ಲಿ ವೈದ್ಯಕೀಯ ಇಂಟರ್ನ್ ಆಗಿರುವ ಒಮರ್ ಅಲ್-ನಜ್ಜರ್ ಇದ್ದಾರೆ. ಇವೆರೆಲ್ಲರೂ ತಮ್ಮ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದಾರೆ.

ಅರ್ಜಿದಾರರ ಪ್ರಕಾರ, “ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ರಾಜತಾಂತ್ರಿಕವಾಗಿ ನೆರವನ್ನು ನೀಡುತ್ತಾ Genocide Convention and customary international lawಯನ್ನು ಉಲ್ಲಂಘಿಸಿ ಜನಾಂಗೀಯ ಹತ್ಯೆಯನ್ನು  ತಡೆಯಲು ವಿಫಲವಾದ ಅಧ್ಯಕ್ಷ ಬಿಡೆನ್, ಬ್ಲಿಂಕೆನ್ ಮತ್ತು ಆಸ್ಟಿನ್‌ರ ಅಧಿಕೃತ ಸಾಮರ್ಥ್ಯವನ್ನು ಪ್ರಶ್ನಿಸಿ,” ಮೊಕದ್ದಮೆ ಹೂಡಲಾಗಿದೆ.

ನರಮೇಧದ ಬಗೆಗಿನ ಕಾನೂನು ತಜ್ಞ ವಿಲಿಯಂ ಶಾಬಾಸ್ ಅವರ ಅಭಿಪ್ರಾಯಗಳನ್ನೂ ಈ ಮೊಕದ್ದಮೆಯಲ್ಲಿ ಸೇರಿಸಲಾಗಿದ್ದು, ಇವರ ಪ್ರಕಾರ ಇಸ್ರೇಲಿ ಸರ್ಕಾರದ ಹೇಳಿಕೆಗಳು, ಮಾರಣಾಂತಿಕ ಮಿಲಿಟರಿ ದಾಳಿ ಮತ್ತು ಮುತ್ತಿಗೆ ಹಾಕುವ ರೀತಿ, ಇವೆಲ್ಲವೂ ನರಮೇಧದ ಚಿಹ್ನೆಗಳು. ನರಮೇಧವನ್ನು ತಡೆಗಟ್ಟುವ ಬದಲು ಅಮೇರಿಕಾ ಕಾನೂನು ಕರ್ತವ್ಯದ ಉಲ್ಲಂಘನೆ ಮಾಡಿರುವುದಾಗಿ ವಿಲಿಯಂ ಶಾಬಾಸ್ ತಿಳಿಸಿದ್ದಾರೆ.

ನರಹತ್ಯೆ ಮತ್ತು ಹತ್ಯಾಕಾಂಡದ ಬಗಿನ ತಜ್ಞರಾದ ಜಾನ್ ಕಾಕ್ಸ್, ವಿಕ್ಟೋರಿಯಾ ಸ್ಯಾನ್‌ಫೋರ್ಡ್ ಮತ್ತು ಬ್ಯಾರಿ ಟ್ರಾಚ್ಟೆನ್‌ಬರ್ಗ್‌ರವರ “ಇಸ್ರೇಲಿ ನಾಯಕತ್ವದಲ್ಲಿ ನಡೆಯುತ್ತಿರುವ ನರಹತ್ಯೆಯ ಉದ್ದೇಶಗಳು ಮತ್ತು ರೀತಿ ಇತ್ತೀಚಿನ ಇತಿಹಾಸದಲ್ಲಿ ನಡೆದ ಇತರ ನರಮೇಧಗಳನ್ನು ಯಾವ ರೀತಿಯಲ್ಲಿ ಹೋಲುತ್ತವೆ,” ಎಂಬ ಅಭಿಪ್ರಾಯವನ್ನು ಈ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

“ಕಳೆದ ಐದು ವಾರಗಳಿಂದ ಅಧ್ಯಕ್ಷ ಬಿಡೆನ್ ಮತ್ತು ಕಾರ್ಯದರ್ಶಿಗಳಾದ ಬ್ಲಿಂಕೆನ್ ಮತ್ತು ಆಸ್ಟಿನ್ ಇಸ್ರೇಲಿ ಸರ್ಕಾರದೊಂದಿಗೆ ಭುಜಕ್ಕೆ ಭುಜಕೊಟ್ಟು ನಿಂತಿದ್ದಾರೆ. ಇದು ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಜನರನ್ನು ನಾಶಮಾಡುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಸ್ವಲ್ಪ ಸ್ವಲ್ಪವೇ ನೆರೆಯ ಪ್ರದೇಶಗಳ, ಆಸ್ಪತ್ರೆಗಳ ಮತ್ತು ಮನೆಮಠ ಕಳೆದುಕೊಂಡು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರ ಮೇಲೆ ಬಾಂಬ್ ದಾಳಿಯಾದಾಗ, 2.2 ಮಿಲಿಯನ್ ಜನರಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದಾಗಲೂ ಈ ಮೂವರು ಇಸ್ರೇಲ್‌ನ ಈ ನರಮೇಧದ ಅಭಿಯಾನಕ್ಕೆ ಯಾವುದೇ ತಡೆಯನ್ನು ತಾರದೇ ಮಿಲಿಟರಿ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ಮುಂದುವರೆಸಿದ್ದಾರೆ, ”ಎಂದು ಪ್ರಕರಣವನ್ನು ಅಮೇರಿಕಾದ ನ್ಯಾಯಾಲಯಕ್ಕೆ ತಂದಿರುವ ಸೆಂಟರ್ ಫಾರ್ ಸಾಂವಿಧಾನಿಕ ಹಕ್ಕುಗಳ (Center for Constitutional Rights – CCR) ಹಿರಿಯ ವಕೀಲ ಕ್ಯಾಥರೀನ್ ಗಲ್ಲಾಘರ್ ತಿಳಿಸಿದ್ದಾರೆ.

Center for Constitutional Rights ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ಪ್ರಕರಣ ದಾಖಲಿಸಿದೆ. ಪತ್ರಿಕಾ ಹೇಳಿಕೆಯ ಪ್ರಕಾರ, ನರಮೇಧದ ಕೃತ್ಯಗಳನ್ನು ತಡೆಗಟ್ಟುವುದು ಮತ್ತು ಶಿಕ್ಷಿಸುವುದು ಜೆನೊಸೈಡ್ ಕನ್ವೆನ್ಷನ್‌ನ ಆರ್ಟಿಕಲ್ – 1 (Article 1 of the Genocide Convention) ರ ಅಡಿಯಲ್ಲಿ ಅಮೇರಿಕಾದ ಕರ್ತವ್ಯ. 18 U.S.C. § 1091

Related Articles

ಇತ್ತೀಚಿನ ಸುದ್ದಿಗಳು