Tuesday, June 18, 2024

ಸತ್ಯ | ನ್ಯಾಯ |ಧರ್ಮ

ನನ್ನನ್ನು ಮೋದಿʼಜೀʼ ಎಂದು ಕರೆಯಬೇಡಿ, ಮೋದಿ ಅನ್ನಿ ಸಾಕು!

ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರು ರಾಜ್ಯಗಳ ಗೆಲುವಿಗೆ ಭಾರತೀಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ತಮ್ಮನ್ನು ಬಿಜೆಪಿ ಸಂಸದರು ‘ಮೋದಿʼ ಎಂದು ಸಂಬೋಧಿಸುವಂತೆ ಒತ್ತಾಯಿಸಿದ್ದಾರೆ. ಪೂರ್ವಪ್ರತ್ಯಯಗಳು ಅಥವಾ “ಆದರನೀಯ ಮೋದೀಜಿ” (ಗೌರವಾನ್ವಿತ ಶ್ರೀ ಮೋದಿ) ಅಥವಾ “ಮೋದೀಜಿ” ನಂತಹ ಪ್ರತ್ಯಯಳಗನ್ನು ಸೇರಿಸದೇ ಸಂಬೋಧಿಸಲು ಸೂಚಿಸಿದ್ದಾರೆ.

ಮೋದೀಜಿ, ಆದರನೀಯ ಮೋದೀಜಿ ಎಂದೆಲ್ಲಾ ಕರೆದದ್ದರಿಂದ ಪ್ರಧಾನಮಂತ್ರಿ ಹಾಗೂ ಜನರ ನಡುವೆ ಅಂತರವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮೂರು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, “ಬಿಜೆಪಿ ಈಗ ದೇಶಾದ್ಯಂತ ಆದ್ಯತೆಯ ಪಕ್ಷವಾಗಿದೆ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು. ಈ ಮೂರು ರಾಜ್ಯಗಳಲ್ಲಿ ತಂಡ ಮಾಡಿದ ಕೆಲಸದ ಫಲಿತಾಂಶವಾಗಿದೆ. ನನ್ನದು ಮಾತ್ರವಲ್ಲದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಗುರಿಯನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದರು,” ಎಂದು ಅವರು ಹೇಳಿದ್ದಾರೆ.

“ಮೋದೀಜೀ ಕಾ ಸ್ವಾಗತ್ ಹೈ [ಮೋದಿ ಜಿ ಅವರಿಗೆ ಸ್ವಾಗತ]” ಮತ್ತು “ಮೋದಿ ಹ ತೋಹ್ ಮುಮ್ಕಿನ್ ಹೈ [ಮೋದಿ ಇದ್ದರೆ ಅದು ಸಾಧ್ಯ]” ಎಂಬ ಘೋಷಣೆಗಳೊಂದಿಗೆ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲಾಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ಪಕ್ಷದ ಪುಟಾಣಿ ಕಾರ್ಯಕರ್ತ ಮತ್ತು ಜನರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಭಾವಿಸುತ್ತಾರೆ. ಗೌರವಾರ್ಥಗಳನ್ನು ಸೇರಿಸುವುದರಿಂದ ನಮ್ಮ ನಡುವೆ ಅಂತರ ಸೃಷ್ಟಿಯಾಗುತ್ತದೆ, ಆದ್ದರಿಂದ ನನ್ನನ್ನು ಮೋದಿ ಎಂದು ಮಾತ್ರ ಸಂಬೋಧಿಸಿ,” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು