Thursday, July 11, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್| ಐದು ಹುದ್ದೆಗೆ ಸಾವಿರಕ್ಕೂ ಹೆಚ್ಚು ಜನ ಆಕಾಂಕ್ಷಿಗಳು, ಸಂದರ್ಶನದಲ್ಲಿ ನೂಕುನುಗ್ಗಲು

ಅಹಮದಾಬಾದ್: ಗುಜರಾತಿನ ಸಂಸ್ಥೆಯೊಂದರಲ್ಲಿಖಾಲಿಯಿದ್ದ ಐದು ಹುದ್ದೆಗಳಿಗೆ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ನೌಕರಿ ಸಂದರ್ಶನದಲ್ಲಿ ನೂಕುನುಗ್ಗಲು ಉಂಟಾಯಿತು.

ಪ್ರಸ್ತುತ ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್ ಕಂಪನಿಯೊಂದು ಅಂಕಲೇಶ್ವರದ ಹೋಟೆಲ್ ಲಾರ್ಡ್ಸ್ ಪ್ಲಾಜಾದಲ್ಲಿ ಇದೇ ತಿಂಗಳ 9ರಂದು ವಾಕ್-ಇನ್ ಸಂದರ್ಶನ ನಡೆಸಿತ್ತು. ಶಿಫ್ಟ್ ಇನ್ ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್ ವೈಸರ್, ಫಿಟ್ಟರ್, ಮೆಕ್ಯಾನಿಕಲ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಹುದ್ದೆಯನ್ನು ಕೋರಿ ಸಾವಿರಕ್ಕೂ ಹೆಚ್ಚು ಮಂದಿ ಸಂದರ್ಶನಕ್ಕೆ ಹಾಜರಾಗಿದ್ದಾರೆ.

ಇದೇ ವೇಳೆ ಅಭ್ಯರ್ಥಿಗಳು ರೆಸ್ಯೂಂ ಪ್ರತಿಗಳನ್ನು ಕೈಯಲ್ಲಿ ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರು ಹೋಟೆಲ್ ಗೇಟ್‌ನಿಂದ ಪ್ರವೇಶಿಸಲು ಪ್ರಯತ್ನಿಸಿದರು. ಇದರಿಂದಾಗಿ ಸ್ಥಳದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಕಂಬಿಬೇಲಿ ವಾಲಿಕೊಂಡು ಕೆಲವರು ಮೇಲಿಂದ ಬಿದ್ದಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ವಿಡಿಯೋ ಈಗ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವರು ಮೋದಿಯವರ ಗುಜರಾತ್‌ ಮಾಡೆಲ್‌ ಎಂದರೆ ಇದೇ ಇರಬೇಕು ಎಂದೂ ವ್ಯಂಗ್ಯವಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು