Thursday, June 20, 2024

ಸತ್ಯ | ನ್ಯಾಯ |ಧರ್ಮ

ಸೆಪ್ಟಂಬರ್‌ 30 ರಂದು ಕರ್ನಾಟಕದಲ್ಲಿ  ಭಾರತ್ ಜೋಡೋ ಯಾತ್ರೆ: ಡಿ.ಕೆ.ಶಿ ಮಾಹಿತಿ

ಬೆಂಗಳೂರು: ಕನ್ಯಾಕುಮಾರಿಯಿಂದ ಚಾಲನೆಯಾದ ಭಾರತ್ ಜೋಡೋ ಯಾತ್ರೆ ಈಗಾಗಲೇ ತಮಿಳುನಾಡಿನಲ್ಲಿ ಆರಂಭವಾಗಿದ್ದು, ಕರ್ನಾಟಕದಲ್ಲಿ ಸೆಪ್ಟಂಬರ್‌ 30ರಿಂದ ಪ್ರಾರಂಭಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಲು ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಾವು ಈ ಯಾತ್ರೆಗೆ ಭಾರತ್ ಐಕ್ಯತಾ ಯಾತ್ರೆ ಎಂದು ಹೆಸರಿಸಿದ್ದೇವೆ, ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುವ ಈ ಯಾತ್ರೆಯು, ಕರ್ನಾಟಕದಲ್ಲಿ ಸೆಪ್ಟಂಬರ್‌ 30 ರಂದು ಚಾಮರಾಜನಗರದಿಂದ ಪ್ರಾರಂಭವಾಗಿ ರಾಯಚೂರಿನಲ್ಲಿ ಕೊನೆಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು