Friday, November 1, 2024

ಸತ್ಯ | ನ್ಯಾಯ |ಧರ್ಮ

ಭಾರೀ ಮಳೆಗೆ ತತ್ತರಿಸಿದ ಸ್ಪೇನ್; ಪ್ರವಾಹಕ್ಕೆ 100 ಮಂದಿ ಬಲಿ, ನೂರಾರು ಮಂದಿ ನಾಪತ್ತೆ

ಬೃಹತ್ ಪ್ರವಾಹವದ ಅಬ್ಬರಕ್ಕೆ ಸ್ಪೇನ್ ದೇಶ ತತ್ತರಿಸಿ ಹೋಗಿದೆ. ಕಳೆದ 37 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ಈ ದೇಶ ತುತ್ತಾಗಿದೆ. ಈಗಾಗಲೇ 100 ಮಂದಿ ಮರಣಿಸಿದ್ದು, ಇನ್ನೂ ನೂರಾರು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

Catastrophic flooding in Spain| ಪ್ರವಾಹದಲ್ಲಿ ಸಾಕಷ್ಟು ವಾಹನಗಳು ಮುಳುಗಡೆಯಾಗಿದ್ದು, ಆಸ್ತಿಪಾಸ್ತಿಗಳು ನಾಶವಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ಇಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ದೇಶಕ್ಕೆ ದೇಶವೇ ಕತ್ತಲಿನಲ್ಲಿ ಮುಳುಗಿದೆ. ಸೂಕ್ತ ಸೌಲಭ್ಯಗಳಿಲ್ಲದೆ ಜನರು ನಾನಾ ಬಗೆಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ಪ್ರವಾಹದಿಂದಾಗಿ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ, ಸ್ಪೇನ್‌ನ ತುರ್ತು ಪ್ರತಿಕ್ರಿಯೆ ವಿಭಾಗದ 1,000 ಸೈನಿಕರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಮತ್ತೊಂದೆಡೆ, ದಕ್ಷಿಣ ಸ್ಪೇನ್‌ನಲ್ಲೂ ಭಾರಿ ಮಳೆ ಸುರಿದಿದೆ. ಇದರಿಂದ ರಸ್ತೆಗಳಲ್ಲಿ ಕೆಸರು ನೀರು ತುಂಬಿಕೊಂಡಿದೆ. ಪ್ರವಾಹದಿಂದ ನಾಪತ್ತೆಯಾಗಿರುವವರ ಪತ್ತೆಗಾಗಿ ಡ್ರೋನ್‌ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್‌ಗಳ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಈ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಹಾಗೂ ಪ್ರಾಣಹಾನಿ ಸಂಭವಿಸಿದೆ.

. #Flood #Spain

Related Articles

ಇತ್ತೀಚಿನ ಸುದ್ದಿಗಳು

You cannot copy content of this page