ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಚಿತ್ರಪಟ | ಚಿತ್ರಗಳೇ ಹೇಳುತ್ತಿವೆ ಅಲ್ಲಾಪುರದ ಕತೆ-ವ್ಯಥೆಯನ್ನು! 

PPeepal Media

Peepal Media • ರಾಜ್ಯ

• 1 ನಿಮಿಷದ ಓದು

ಚಿತ್ರಪಟ | ಚಿತ್ರಗಳೇ ಹೇಳುತ್ತಿವೆ ಅಲ್ಲಾಪುರದ ಕತೆ-ವ್ಯಥೆಯನ್ನು! 

ಐವನ್‌ ಡಿ ಸಿಲ್ವಾ
ಹಿರಿಯ ರಂಗಕರ್ಮಿ ಮತ್ತು ಹವ್ಯಾಸಿ ಫೋಟೋಗ್ರಾಫರ್‌

ಚಿತ್ರ ಕುರಿತು ವಿವರಣೆ: ತೊಗರಿಕಣಜ, ಬಿಸಿಲು ನಾಡು ಎಂದು ಕರೆದುಕೊಳ್ಳುವ ಕಲಬುರ್ಗಿ ಜಿಲ್ಲೆ ಎಂದರೆ ದಕ್ಷಿಣ ಕರ್ನಾಟಕದ ಬಹುತೇಕರಿಗೆ ಅಲರ್ಜಿ. ತಮ್ಮ ಮಾತನ್ನು ಪಾಳಿಸದ ಕೆಳಗಿನ ಅಧಿಕಾರಿಗಳಿಗೆ “ ನಿನ್ನನ್ನು ಗುಲಬರ್ಗಾಕ್ಕೆ ವರ್ಗಾ ಮಾಡ್ತೀನ್ ನೋಡು” ಎಂದು ಮೇಲಧಿಕಾರಿಗಳು ಹೆದರಿಸುವುದು ತೀರಾ ಮಾಮೂಲಿ. ಕಲಬುರ್ಗಿ ಉರ್ಫ್ ಗುಲ್ಬರ್ಗಾಕ್ಕೆ ಎರಡೇ  ಕಾಲಗಳು ಒಂದು ಬಏಸಿಗೆ  ಇನ್ನೋಂದು ಬಿರುಬೇಸಿಗೆ ಎಂದೂ ಇಲ್ಲಿನ ಹವಾಮಾನದ ಬಗ್ಗೆ ಹೇಳುವುದುಂಟು. ಇಂತಿಪ್ಪ  ಕಲಬುರಗಿ ಜಿಲ್ಲೆಯ ಹಿಂದುಳಿದ ತಾಲೂಕು ಕಾಳಗಿ ಯ ಅತ್ಯಂತ  ಹಿಂದುಳಿದಿರುವ “ಅಲ್ಲಾಪುರ” ವೆಂಬ  ಮುಸ್ಲಿಂ ಹೆಸರಿನ ಗ್ರಾಮದ ಜನರ ದೈನಂದಿನ ಬದುಕಿನ  ಚಿತ್ರಣವನ್ನು ಈ ಚಿತ್ರಗಳು ಹೇಳುತ್ತವೆ.  ಹೆಚ್ಚಾಗಿ ಮಳೆಯನ್ನೇ ಆಶ್ರಯಿಸಿದ ಕೃಷಿ ಮತ್ತು  ಕೂಲಿ ಕೆಲಸಕ್ಕಾಗಿ ಮಹರಾಷ್ಟ್ರದ ರತ್ನಗಿರಿ ಜಿಲ್ಲೆಗಳಿಗೆ ಗುಳೇ  ಹೋಗುವ ಪರಿಪಾಠವಿರುವ ಈ ಹಳ್ಳಿಯಲ್ಲಿ ಉಳಿದು ತಣ್ಣಗೆ  ಬದುಕು ಸವೆಸುವವರು, ಮತ್ತು ಬದುಕುಸಾಗಿಸುವವರು ಹೆಚ್ಚಾಗಿ   ಶಾಲೆಗೆ ಹೋಗುವ ಮಕ್ಕಳು, ವಯಸ್ಸಾದ ಹೆಂಗಸರು ಹಾಗೂ ಮುದುಕರು ಮಾತ್ರ.

2011ರಜನಗಣತಿ ಪ್ರಕಾರ ಈ ಗ್ರಾಮದಲ್ಲಿ 121 ಮನೆಗಳಿದ್ದು ಜನಸಂಖ್ಯೆ 569. ಲಿಂಗಾಯತರ, ಹಿಂದುಳಿದ ವರ್ಗದವರ, ಪರಿಶಿಷ್ಟ ಜಾತಿಗಳ. ಲಂಬಾಣಿಗಳ ಹಾಗೂ ಮುಸ್ಲಿಮರ ಮನೆಗಳು ಒಂದಕ್ಕೊಂದು ಅಂಟಿಕೊಂಡೇ ಬಾಳುತ್ತಿವೆ. ಊರ ಮಧ್ಯದಲ್ಲಿ ಮಸೀದೀಯಿದ್ದು ಪಕ್ಕದಲ್ಲೇ ಹನುಮಪ್ಪನೂ ಒಂದು ಗುಡಿಯಲ್ಲಿ ಭಜಿಸಲ್ಪಡುತ್ತಾನೆ.  ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಒಂದು ಪ್ರೈಮರಿ ಶಾಲೆಯಿದ್ದು ಪ್ರೌಢ ಶಿಕ್ಷಣಕ್ಕಾಗಿ ಇಲ್ಲಿಯ ಮಕ್ಕಳು ಹತ್ತು ಕಿಲೋಮೀಟರ್ ನಡೆದು  ಕೂಡ್ಲಿ ಕ್ರಾಸಿನಲ್ಲಿ ಬಸ್ಸು ಹಿಡಿದು 35 ಕಿಮಿದೂರದ ಚಿಂಚೋಳಿಗೋ  15 ಕಿಮಿ ದೂರದ ಕಾಳಗಿಗೋ ಹೋಗಬೇಕಾಗಿದೆ.

ಇಂತಹ ಕಠಿಣ ಪರಿಸ್ಥಿತಿಯಲ್ಲೂ ಇಲ್ಲಿಯ ಜನರ ಜೀವನೊಲ್ಲಾಸ, ಸುತ್ತಲಿನ ಪರಿಸರ, ಬದುಕಿನ ವ್ಯವಹಾರಗಳು, ಇತ್ಯಾದಿಗಳನ್ನು ಹಿರಿಯ ರಂಗಕರ್ಮಿ ಮತ್ತು ಹವ್ಯಾಸಿ ಫೋಟೋಗ್ರಾಫರ್‌ ಆಗಿರುವ ಐವನ್‌ ಡಿ ಸಿಲ್ವಾ ಅವರು ಸೆರೆ ಹಿಡಿದಿರುವ ಚಿತ್ರಗಳು ತಮ್ಮಷ್ಟಕ್ಕೇ ಇಲ್ಲಿನ ಕತೆಗಳನ್ನು ಹೇಳುತ್ತವೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು