Wednesday, December 4, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಸಕಲ ಸಿದ್ಧತೆ ಸಿಎಂ, ಡಿಸಿಎಂ, ವಿವಿಧ ಖಾತೆಯ ಸಚಿವರು, ಶಾಸಕರು ಬಾಗಿ

ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಸಕಲ ಸಿದ್ಧತೆ ಸಿಎಂ, ಡಿಸಿಎಂ, ವಿವಿಧ ಖಾತೆಯ ಸಚಿವರು, ಶಾಸಕರು ಬಾಗಿ

ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆಯಲ್ಲಿರುವ ಎಸ್.ಎಂ. ಕೃಷ್ಣ ನಗರದಲ್ಲಿ ಇಂದು ಗುರುವಾರ ಹಮ್ಮಿಕೊಂಡಿರುವ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ಈಗಾಗಲೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಖುದ್ಧಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ವೀಕ್ಷಣೆ ಮಾಡಿದಲ್ಲದೇ ಹಾಸನದಲ್ಲೆ ವಾಸ್ತವ ಮಾಡಿ ಗಮನಹರಿಸಿದ್ದಾರೆ.

      ಬದಲಾದ ಹೆಸರಿನಡಿಯಲ್ಲಿ ನಡೆಯಲಿರೊ ಕೈ ಸಮಾವೇಶದ ಸಭಾಂಗಣದ ಮುಂದೆ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನಕಲ್ಯಾಣ ಸಮಾವೇಶ ಎಂದು ಬೃಹತಕಾರವಾಗಿ ಬ್ಯಾನರ್ ಹಾಕಲಾಗಿದೆ. ಸಮಾವೇಶ ನಡೆಸುವ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಹಾಗು ಸರ್ಕಾರದ ಹೊರತಾಗಿ ಸಮಾವೇಶ ನಡೆಸಲು ಸಿದ್ದು ಆಪ್ತರು ಪ್ಲಾನ್ ಮಾಡಿದ್ದರು. ಸಿದ್ದು ಹೆಸರಿನಲ್ಲಿ ಪಕ್ಷದ ಹೊರತಾಗಿ ಕಾರ್ಯಕ್ರಮ ನಡೆಸಲು ಕೆಪಿಸಿಸಿ ಸಮ್ಮತಿಸಿದೆ. ಕೆಪಿಸಿಸಿ ಅಡಿಯಲ್ಲಿ ಇತರೆ ಸಂಘಟನೆ ಸೇರಿಸಿ ಜಂಟಿ ಕಾರ್ಯಕ್ರಮಕ್ಕೆ ಅಸ್ತು ನೀಡಿದೆ. ಇದು ಕಾಂಗ್ರೆಸ್ ಪಕ್ಷದ ಜನ ಕಲ್ಯಾಣ ಸಮಾವೇಶ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದೆ. ಇದು ದಾವಣಗೆರೆ ಯ ಸಿದ್ದರಾಮೋತ್ಸವ ಮಾದರಿಯ ಕಾರ್ಯಕ್ರಮ ಎಂದ ಸಿದ್ದು ಆಪ್ತ ಕೆ.ಎನ್. ರಾಜಣ್ಣ ಹಾಸನಕ್ಕಷ್ಟೇ ಈ ಸಮಾವೇಶ ಸೀಮಿತ ಎಂದು ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಲಿದೆ ಎಂದಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಕೆಲವರು ಬರ್ತಾರೆ ಎಂದಿದ್ದ ಡಿ.ಕೆ. ಶಿವಕುಮಾರ್, ಹಳೆ ಮೈಸೂರು ಭಾಗದ ಆರು ಜಿಲ್ಲೆ ಅಷ್ಟೆ ಅಲ್ಲ ತುಮಕೂರು ಸೇರಿ ರಾಜ್ಯದ ಎಲ್ಲಾ ಕಡೆಯಿಂದಲೂ ಜನ ಬರ್ತಾರೆ ಎಂದು ಹೇಳಿದ ಹಾಸನ ಉಸ್ತುವಾರಿ ಸಚಿವ ರಾಜಣ್ಣ. ನೆನ್ನೆ ಸಮಾವೇಶದ ಅಂತಿಮ ಹಂತದ ತಯಾರಿ ಬಗ್ಗೆ ಪರಿಶೀಲನೆಯನ್ನು ರಾಜಣ್ಣ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಎಲ್ಲೆಡೆ ಇರ್ತಾರೆ. ನಾಳೆ ಹಾಸನದ ಅರಸೀಕೆರೆ ರಸ್ತೆಯ ಎಸ್ ಎಂ ಕೃಷ್ಣ ಬಡಾವಣೆಯ ಬೃಹತ್ ಮೈದಾನದಲ್ಲಿ ನಡೆಯಲಿರೊ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ದತೆ ಪೂರ್ಣಗೊಂಡಿದೆ. ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್ ಹಾಗು ಬ್ಯಾನರ್ ಗಳು ರಾರಾಜಿಸುತ್ತಿದೆ. ಸ್ವಾಭಿಮಾನಿ ಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಫ್ಲೆಕ್ಸ್ ಬ್ಯಾನರ್ ಪ್ರಿಂಟ್ ಮಾಡಲಾಗಿದೆ. ಆರಂಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಹಾಗು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ಎಂದೇ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಆಪ್ತ ಸಚಿವರು, ನಂತರ ಕಾರ್ಯಕ್ರಮವನ್ನು ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನ ಕಲ್ಯಾಣ ಸಮಾವೇಶ ಎಂದು ನಾಮಕರಣ ಮಾಡಲಾಗಿದೆ.

      ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಸಮಾವೇಶಕ್ಕೆ ಶುಭಕೋರಿ ಕೈ ನಾಯಕರಿಂದ ನಾನಾ ರೀತಿಯ ಫ್ಲೆಕ್ಸ್ ಹಾಕಲಾಗಿದೆ. ಇನ್ನು ಬಿ.ಎಂ. ರಸ್ತೆ ಉದ್ದಲಕ್ಕೂ ಕಾಂಗ್ರೆಸ್ ನಾಯಕರ ಮುಖಂಡರ ಪ್ರಕ್ಸ್ ಮತ್ತು ಬ್ಯಾನರ್ ಹಾಗೂ ಪಕ್ಷದ ಬಾವುಟ ರಾರಾಜಿಸುತಿತ್ತು. ನಗರದ ಅರಸೀಕೆರೆ ರಸ್ತೆ ತುಂಬೆಲ್ಲಾ ಆವರಿಸಿಕೊಂಡಿರೊ ಫ್ಲೆಕ್ಸ್ ಗಳು. ಸಮಾವೇಶ ಹೆಸರಿನ ಗೊಂದಲ ಹಿನ್ನೆಲೆಯಲ್ಲಿ ನಾನಾ ಹೆಸರಿನ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಇಂದು ಗುರುವಾರದಂದು ಹಾಸನಕ್ಕೆ ಆಗಮಿಸಲಿರೊ ಕಾಂಗ್ರೆಸ್ ನ ಹಲವು ನಾಯಕರು, ಸಿಎಂ ,ಡಿಸಿಎಂ, ಗೃಹ ಸಚಿವ ಸೇರಿ ಸಚಿವರ ದಂಡು ಆಗಮಿಸಲಿದೆ. ಎರಡು ಲಕ್ಷ ಜನರ ನಿರೀಕ್ಷೆಯಲ್ಲಿ ತಯಾರಿಯನ್ನು ಕೈ ನಾಯಕರು ನಡೆಸಿದ್ದಾರೆ. ಸಮಾವೇಶ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿದ್ದು,

ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕು ಹೆಚ್ಚು ಇನ್ಸ್ಪೆಕ್ಟರ್, ೮೦ಕ್ಕೂ ಹೆಚ್ಚು ಪಿಎಸ್ ಐ ಹಾಗೂ ಸುಮಾರು ೨೦೦೦ ಕ್ಕೂ ಅದಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page