Saturday, December 14, 2024

ಸತ್ಯ | ನ್ಯಾಯ |ಧರ್ಮ

ಓಪನ್ ಎಐ ವಿಷಲ್‌ ಬ್ಲೋವರ್ ಅನುಮಾನಾಸ್ಪದ ಸಾವು

‌ಚಾಟ್‌ಜಿಪಿಟಿಯ ಮಾತೃಸಂಸ್ಥೆ ಓಪನ್‌ಎಐ ಸಂಸ್ಥೆಯ ವಿಷಲ್‌ ಬ್ಲೋವರ್ ಸುಚಿರ್ ಬಾಲಾಜಿ (26) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ಭಾರತೀಯ ಮೂಲದ ಇವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಕಾಣಿಸಿಕೊಂಡಿದ್ದಾರೆ. ಅವರು ನವೆಂಬರ್ 26 ರಂದು ನಿಧನರಾಗಿದ್ದು ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಇದನ್ನು ಬಹಿರಂಗಪಡಿಸಿವೆ. ಪ್ರಾಥಮಿಕ ತನಿಖೆಯ ನಂತರ ಇದು ಆತ್ಮಹತ್ಯೆ ಎಂದು ಪೊಲೀಸರು ಭಾವಿಸಿದ್ದಾರೆ. ಸದ್ಯ ಈ ಘಟನೆಯಲ್ಲಿ ಯಾವುದೇ ಅನುಮಾನಾಸ್ಪದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಓಪನ್ AI ಕಾರ್ಯಾಚರಣೆಗಳು ಮತ್ತು ಅನುಸರಿಸಿದ ಕಾರ್ಯವಿಧಾನಗಳು ಆತಂಕಕಾರಿ ಎಂದು ಬಾಲಾಜಿ ಈ ಹಿಂದೆ ತಮ್ಮ ಸಂಶೋಧನೆಯ ಮೂಲಕ ಬಹಿರಂಗಪಡಿಸಿದ್ದರು. ಕಂಪನಿಯು ಹಲವಾರು ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸಿದೆ ಎಂದು ಸಹ ಅವರು ಆರೋಪಿಸಸಿದ್ದರು.

ಆರೋಪ ಕೇಳಿ ಬಂದ ಮೂರು ತಿಂಗಳ ನಂತರ ಬಾಲಾಜಿ ಸಾವಿಗೀಡಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ನವೆಂಬರ್ 2020ರಿಂದ ಈ ವರ್ಷದ ಆಗಸ್ಟ್ ತನಕ ಓಪನ್ AI ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಈ ಮೊದಲು, ಈ ಯುವ ಟೆಕ್ಕಿ ನ್ಯೂಯಾರ್ಕ್ ಟೈಮ್ಸ್‌ ಜೊತೆ ಮಾತನಾಡುತ್ತಾ, ಸಮಾಜಕ್ಕೆ ಒಳಿತಿಗಿಂತ ಹೆಚ್ಚು ಹಾನಿ ಮಾಡುವ ತಂತ್ರಜ್ಞಾನಗಳಿಗಾಗಿ ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ತಾನು ಕಂಪನಿಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page