Tuesday, December 31, 2024

ಸತ್ಯ | ನ್ಯಾಯ |ಧರ್ಮ

ಆಲೂರಿನಲ್ಲಿ ತಾತ್ಕಲಿಕ ಮೂರು ತಿಂಗಳು ರೈಲು ನಿಲುಗಡೆಗೆ ಸಮ್ಮತಿ – -ಹೇಮಂತ್ ಕುಮಾರ್


ಹಾಸನ: ಆಲೂರು ರೈಲ್ವೆ ನಿಲ್ದಾಣಕ್ಕೆ ಮತ್ತೊಮ್ಮೆ ನಿಲುಗಡೆಗೆ ಆದೇಶವನ್ನು ತಾತ್ಕಾಲಿಕವಾಗಿ ಮೂರು ತಿಂಗಳುಗಳ ಕಾಲ ಸಮ್ಮತ್ತಿಸಿದೆ ಎಂದು ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರೈಲ್ವೆ ಇಲಾಖೆಯು ಕೇಂದ್ರದ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವರಿಗೆ ನಾವು ಸಲ್ಲಿಸಿದ ಮನವಿ ಆಧಾರದ ಮೇಲೆ ಆಲೂರು ರೈಲ್ವೆ ನಿಲ್ದಾಣಕ್ಕೆ ೨೦೨೪ ಫೆಬ್ರವರಿ ೭ ರಂದು ಪ್ರಾಯೋಗಿಕವಾಗಿ ಆರು ತಿಂಗಳವರೆಗೆ ನಿಲುಗಡೆ ಆದೇಶವನ್ನು ಹೊರಡಿಸಿತ್ತು. ತದನಂತರ ನಾವು ಮತ್ತೊಮ್ಮೆ ಈಗಿನ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿ ಮೂರು ತಿಂಗಳವರೆಗೆ ವಿಸ್ತರಿಸಿದೆ. ಆದರೆ ಈ ಡಿಸೆಂಬರ್ ೪ ರಿಂದ ರೈಲ್ವೆ ನಿಲ್ಗಡೆ ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ. ರಾಧಮ್ಮ ಜನ ಸ್ಪಂದನ ಸಂಸ್ಥೆಯಿAದ ಖುದ್ದಾಗಿ ಹುಬ್ಬಳಿಯ ನೈರುತ್ಯ ಇಲಾಖೆ ಸಂಪರ್ಕಿಸಿದಾಗ ಅಲ್ಲಿನ ಸೆಕ್ರೆಟರಿ ಸುನಿಲ್ ಆಲೂರು ರೈಲ್ವೆ ನಿಲ್ಯಾಣದಲ್ಲಿ ರೈಲ್ವೆ ಆದಾಯವು ಪ್ರತಿ ತಿಂಗಳು ಅಂದರೆ ಕಳೆದ ನವಂಬರ್ ತಿಂಗಳಲ್ಲಿ ೧೧,೩೦೦ ಮತ್ತು ಅಕ್ಟೋಬರ್ ನಲ್ಲಿ ೯೮೦೦ ರೂಪಾಯಿಗಳು ಸಂಗ್ರಹವಾಗಿದೆ ಎಂದರು. ನವಂಬರ್ ನಲ್ಲಿ ೧೯೨ ಜನ ಆಲೂರು ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡಿದ್ದಾರೆ. ಆದರೆ ರೈಲ್ವೆ ಇಲಾಖೆಯು ಯಶವಂತಪುರದಿAದ ಆಲೂರಿಗೆ ಬರುವ ಪ್ರಯಾಣಿಕರ ಟಿಕೆಟ್ ಆದಾಯವನ್ನು ಪರಿಗಣಿಸದೆ ಅಲ್ಲಿನ ಆದಾಯವನ್ನು ಯಶವಂತಪುರಕ್ಕೆ ಮಾತ್ರ ಸೀಮಿತಾ ಎಂದು ಪರಿಗಣಿಸಿದೆ ರೈಲ್ವೆ ನಿಯಮದ ಪ್ರಕಾರ ತಿಂಗಳಿಗೆ ಕನಿಷ್ಠ ೩೦೦೦೦ ಆದಾಯ ಬಂದಿದ್ದರೆ ರೈಲ್ವೆ ಕಮರ್ಷಿಯಲ್ ಇಲಾಖೆ ನಿಲುಗಡೆ ಆದೇಶವನ್ನು ರದ್ದು ಪಡಿಸುತ್ತಿರಲಿಲ್ಲ. ನಿಗದಿತ ಪ್ರಮಾಣದಲ್ಲಿ ಆಲೂರು ನಿಲ್ದಾಣದಲ್ಲಿ ಆದಾಯ ಬಂದಿರುವುದಿಲ್ಲ ಎಂದು ನಮಗೆ ತಿಳಿಸಿರುತ್ತಾರೆ. ನಾವು ಸಮಗ್ರವಾಗಿ ಅಧ್ಯಯನವನ್ನು ಮಾಡಿ ರೈಲ್ವೆ ಇಲಾಖೆಗೆ ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಕೆಲವೊಂದು ಅಂಕಿ ಅಂಶಗಳ ಸಮೇತ ಗಮನ ಸೆಳೆದಿರುತ್ತೇವೆ. ದೇಶದ ಎಷ್ಟೋ ರೈಲು ನಿಲ್ದಾಣಗಳಲ್ಲಿ ೬,೦೦೦ ಕ್ಕಿಂತ ಕಡಿಮೆ ಆದಾಯವಿದ್ದರೂ ಶಾಶ್ವತ ನಿಲುಗಡೆಯನ್ನು ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ನಿಂಬಾಳ್ ನಿಲ್ದಾಣದಲ್ಲಿ ಕಳೆದ ವರುಷ ಸಂಸದರು ರಮೇಶ್ ಜಿಗುಣಗಿ ಸಹ ಶಾಶ್ವತ ನಿಲುಗಡೆಯನ್ನು ಕಡಿಮೆಯಾಗದೆ ಇದ್ದರೂ ಸಹ ಮಾಡಿಸಿಕೊಟ್ಟಿದ್ದಾರೆ. ಇದೇ ಮಾದರಿಯಲ್ಲಿ ನಮ್ಮ ಕ್ಷೇತ್ರದ ಸಂಸದರು ಕೂಡ ರೈಲ್ವೆ ಕೆಲಸ ಮಂತ್ರಿಗಳಾದ ಅಶ್ವಿನಿ ವೈಷ್ಣವ ಬಳಿ ವಿಶೇಷ ಮನವಿಯನ್ನ ಸಲ್ಲಿಸಿ ಶಾಶ್ವತ ನಿಲುಗಡೆಯನ್ನ ಮಾಡಿಸಿಕೊಡುತ್ತೇನೆ ಎಂದು ನಮಗೆ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. ಅವರಿಗೆ ವಿಶೇಷವಾಗಿ ಸಮಸ್ತ ತಾಲೂಕಿನ ನಾಗರಿಕರ ಪರವಾಗಿ ಧನ್ಯವಾದಗಳು ತಿಳಿಸುತ್ತಿದ್ದೇನೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ೩೦ ಡಿಸೆಂಬರ್ ಸೋಮವಾರ ಮೈಸೂರಿನ ಡಿ ಆರ್ ಎಂ ಶಿಲ್ಪಿ ಅಗರ್ವಾಲ್ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಮೂರು ತಿಂಗಳ ನಿಲುಗಡೆಯನ್ನು ಮಾಡಿಕೊಡಿ ಎಂದು ಸೂಚನೆ ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಆಲೂರು ತಾಲೂಕಿಗೆ ಮತ್ತೊಮ್ಮೆ ರೈಲ್ವೆ ಮೂರು ತಿಂಗಳ ತಾತ್ಕಾಲಿಕ ನಿಲುಗಡೆ ಬರುತ್ತದೆ ಎಂದು ಮಾಧ್ಯಮದ ಮುಖಾಂತರ ತಾಲೂಕಿನ ಸಮಸ್ತ ಜನರಿಗೆ ಬೆಳಕಿಗೆ ತರುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ್, ಸೋಮಶೇಖರ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page